Breaking News

ಗೋಕಾಕ ಗ್ರಾಮದೇವತೆ ಜಾತ್ರೆ ಎಪ್ರೀಲ್ 2ರಂದು ದಿನಾಂಕ ಘೋಷಣೆ-ಶಾಸಕ ರಮೇಶ ಜಾರಕಿಹೊಳಿ.!

Spread the love

ಗೋಕಾಕ ಗ್ರಾಮದೇವತೆ ಜಾತ್ರೆ ಎಪ್ರೀಲ್ 2ರಂದು ದಿನಾಂಕ ಘೋಷಣೆ-ಶಾಸಕ ರಮೇಶ ಜಾರಕಿಹೊಳಿ.!

ಯುವ ಭಾರತ ಸುದ್ದಿ  ಗೋಕಾಕ: ನಗರದಲ್ಲಿ ಪ್ರವಾಹ ಹಾಗೂ ಕೋವಿಡ್‌ನಿಂದಾಗಿ ಸಾಕಷ್ಟು ಸಾವು ನೋವುಗಳಾಗಿವೆ. ಇಲ್ಲಿಯ ಜನರು ಇನ್ನು ಆರ್ಥಿಕವಾಗಿ ಸದೃಢರಾಗಿಲ್ಲ ಹೀಗಗಾಗಿ ಗ್ರಾಮದೇವತೆ ಜಾತ್ರಾಮಹೋತ್ಸವವನ್ನು ಕಮೀಟಿ ಸದಸ್ಯರಷ್ಟೆಯಲ್ಲದೇ ನಗರದ ಎಲ್ಲ ಹಿರಿಯರ ಅಭಿಪ್ರಾಯ ಪಡೆದು ಯುಗಾಧಿ ದಿನದಂದು ದಿನಾಂಕ ನಿಗಧಿ ಮಾಡುವದಾಗಿ ಶಾಸಕ ಹಾಗೂ ಜಾತ್ರಾ ಕಮೀಟಿ ಅಧ್ಯಕ್ಷ ರಮೇಶ ಜಾರಕಿಹೊಳಿ ಹೇಳಿದರು.

ಅವರು, ನಗರದ ಉಪ್ಪಾರಗಲ್ಲಿ-ವಡ್ಡರಗಲ್ಲಿಗೆ ಹೊಂದಿಕೊಂಡಿರುವ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಜರುಗಿದ ಜಾತ್ರಾ ಕಮೀಟಿ ಹಾಗೂ ಗ್ರಾಮದ ಸರ್ವ ಸಮಾಜ ಹಿರಿಯರ ಅಭಿಪ್ರಾಯ ಸಂಗ್ರಹ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತಿ 5ವರ್ಷಗಳಿಗೊಮ್ಮೆ ನಡೆಯುವ ಗೋಕಾಕ ಗ್ರಾಮ ದೇವತೆ ಜಾತ್ರಾ ಮಹೋತ್ಸವ 2020ರಲ್ಲಿ ಕೋವಿಡ್ ಸಾಂಕ್ರಾಮಿಕ ಹರಡುವ ಕಾರಣದಿಂದಾಗಿ 2022ಕ್ಕೆ ಮುಂದುಡಲಾಗಿತ್ತು ಈ ಬಗ್ಗೆ ಗೋಕಾಕ ನಗರದ ಎಲ್ಲ ವಾರ್ಡಗಳ (ಓಣಿ) ಹಿರಿಯರೊಂದಿಗೆ ಚರ್ಚಿಸಿ ಯುಗಾಧಿಯಂದು ದಿನಾಂಕ ನಿಗಧಿ ಮಾಡಲಾಗುವದು ಎಂದರು.
ಕಳೆದ 2015ರಲ್ಲಿ ಜಾತ್ರೆ ನಡೆದಿದೆ. ಅದರ ನಂತರದಲ್ಲಿ ಜಾತ್ರೆ ಮುಂದುಡಲಾಗಿದೆ. ಹಿರಿಯರ ಪ್ರಕಾರ ಏಳು ವರ್ಷಕ್ಕೆ ಜಾತ್ರೆ ಮಾಡುವದು ಸಮಂಜಸವಲ್ಲ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ ಹೀಗಾಗಿ ಜಾತ್ರಾ ಮಹೋತ್ಸವ ಇದೇ ವರ್ಷ ಅಥವಾ 9ನೇ ವರ್ಷಕ್ಕೆ ಮಾಡುವದು ಎಂಬ ಮಾಹಿತಿಯನ್ನು ಎಲ್ಲರಿಂದಲು ಅಭಿಪ್ರಾಯ ಸಂಗ್ರಹ ಮಾಡುತ್ತೆವೆ ಹೀಗಾಗಿ ಗೋಕಾಕ ಜನತೆ ಸಹಕರಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಾತ್ರಾ ಕಮೀಟಿ ಸದಸ್ಯರಾದ ಪ್ರಭಾಕರ ಚವ್ಹಾನ, ಭೀಮಗೌಡ ನಾಯಕ, ಜ್ಯೋತಿಭಾ ಸುಭಂಜಿ, ತುಕ್ಕಾರ, ಸಿದ್ಧಲಿಂಗ ದಳವಾಯಿ, ಅಡಿವೆಪ್ಪ ಕಿತ್ತೂರ, ನಿರಂಜನ ಬನ್ನಿಶೆಟ್ಟಿ, ಅಶೋಕ ಪಾಟೀಲ, ಅಶೋಕ ಹೆಗ್ಗನ್ನವರ, ಪೌರಾಯುಕ್ತ ಶಿವಾನಂದ ಹಿರೇಮಠ, ಡಿವೈಎಸ್‌ಪಿ ಮನೋಜಕುಮಾರ ನಾಯ್ಕ, ಸಿಪಿಐ ಗೋಪಾಲ ರಾಠೋಡ ಸೇರಿದಂತೆ ಅನೇಕರು ಇದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

18 − twelve =