ಬಿಜೆಪಿ ಬೆಂಬಲಿಸುವ0ತೆ ಲಖನ್‌ಗೆ ನಳಿನಕುಮಾರ ಕಟೀಲ್ ಮನವಿ.!
ಗೋಕಾಕ: ವಾಯವ್ಯ ಪದವಿದರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ದಿನದಿಂದ ದಿನಕ್ಕೆ ರಂಗೇರಿದ್ದು, ಮಂಗಳವಾರದAದು ಬಿಜೆಪಿ ರಾಜಾಧ್ಯಕ್ಷ ನಳೀನಕುಮಾರ ಕಟೀಲ್ ಮತ್ತು ಲಖನ್ ಜಾರಕಿಹೋಳಿ ಮಾತುಕತೆ ನಡೆಸಿದ್ದು ಬಿಜೆಪಿ ಬೆಂಬಲಿಸುವ0ತೆ ಮನವಿ ಮಾಡಿದ್ದಾರೆ.
ನಗರದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೋಳಿ ಅವರ ನಿವಾಸದಲ್ಲಿ ಭೇಟಿ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ಅವರು ಮಾಜಿ ಸಚಿವ ರಮೇಶ ಜಾರಕಿಹೋಳಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೋಳಿ ಸಮ್ಮುಖದಲ್ಲಿ ವಿಧಾನ ಪರಿಷತ ಸದಸ್ಯ ಲಖನ್ ಜಾರಕಿಹೊಳಿ ಅವರು ಬೆಂಬಲಿಸುವAತೆ ಮಾತುಕತೆ ನಡೆಸಿದ್ದಾರೆ.
ಲಖನ್ ಜಾರಕಿಹೊಳಿ ಅವರು ಈ ಹಿಂದೆಯೇ ಪರಿಷತ್ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಸಹೋದರರ ಮನವಿ ಮೇರೆಗೆ ಬಿಜೆಪಿ ಬೆಂಬಲಿಸಲು ನಿರ್ಧರಿಸಿದ್ದರು. ಆದರೆ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೋಳಿ ಬೆಂಬಲ ಬಿಜೆಪಿಗೆ ಬೇಡ ಎಂದು ಸಚಿವ ಉಮೇಶ ಕತ್ತಿ ಹೇಳಿದ್ದರು. ಸಚಿವ ಉಮೇಶ ಕತ್ತಿ ಹೇಳಿಕೆಯಿಂದ ಬಿಜೆಪಿಯಲ್ಲಿ ಲಖನ್ ಬೆಂಬಲದ ಬಗ್ಗೆ ಗೊಂದಲ ಸೃಷ್ಟಿಯಾಗಿತ್ತು ಸ್ವತಃ ನಳಿನಕುಮಾರ ಕಟೀಲ ಅವರು ಸಚಿವ ಕತ್ತಿಗೆ ದೂರವಾಣಿ ಮುಖಾಂತರ ಮಾತನಾಡಿ ಲಖನ್ ಬಿಜೆಪಿಗೆ ಬೆಂಬಲ ನೀಡುತ್ತಿರಬೇಕಾದರೆ ಬೇಡ ಅಂತ ಮಾಧ್ಯಮಗಳ ಮುಂದೆ ತಾವು ಹೇಳಿದ್ದೇಕೆ. ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ನಮಗೆ ಬೆಂಬಲ ಅಗತ್ಯವಾಗಿದೆ. ಇಂತಹ ಹೇಳಿಕೆಗಳನ್ನು ನೀಡದಂತೆ ಸಚಿವ ಕತ್ತಿಗೆ ಸೂಚಿಸಿದ್ದರು. ನಳೀನಕುಮಾರ ಕಟೀಲ್ ಹಾಗೂ ಲಖನ್ ಭೇಟಿ ವೇಳೆ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಬೇರೆಯವರ ಹೇಳಿಕೆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ಪಕ್ಷದ ಪರ ಪ್ರಚಾರ ಮಾಡಿ ಎಂದ ನಳಿನಕುಮಾರ್ ಕಟೀಲ್ ಮನವಿ ಮಾಡಿದ್ದಾರೆ. ನಳೀನಕುಮಾರ ಕಟೀಲ್ ಮನವಿ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಲು ಲಖನ್ ಜಾರಕಿಹೋಳಿ ಮುಂದಾಗಿದ್ದಾರೆ.