Breaking News

ಮುಂಗಾರು ಹಂಗಾಮಿಗೆ ರಸಗೊಬ್ಬರ ಬಿತ್ತನೆ ಬೀಜ ಪೂರೈಕೆ-ರಮೇಶ ಜಾರಕಿಹೊಳಿ.

Spread the love

ಮುಂಗಾರು ಹಂಗಾಮಿಗೆ ರಸಗೊಬ್ಬರ ಬಿತ್ತನೆ ಬೀಜ ಪೂರೈಕೆ-ರಮೇಶ ಜಾರಕಿಹೊಳಿ.

ಗೋಕಾಕ: ಪ್ರಸಕ್ತ ೨೦೨೨-೨೩ನೇ ಸಾಲಿನ ಮುಂಗಾರು ಹಂಗಾಮಿಗೆ ಗೋಕಾಕ ತಾಲ್ಲೂಕಿನ ರೈತರಿಗೆ ಕೃಷಿ ಇಲಾಖೆಯಿಂದ ಅಗತ್ಯ ಬೀಜ-ರಸಗೊಬ್ಬರ ದಾಸ್ತಾನಕರಿಸಿದ್ದು, ಜೂನ್ ಎರಡನೇ ವಾರದಲ್ಲಿ ಹದವಾದ ಮಳೆಯಾದ ಮೇಲೆ ಭೂಮಿ ತೇವಾಂಶವಿರುವಾಗಲೇ ರೈತರು ಬಿತ್ತನೆ ಮಾಡುವಂತೆ ಶಾಸಕ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ.
ಮಂಗಳವಾರದAದು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರು ಮತ್ತು ಕೃಷಿ ಅಧಿಕಾರಿಗಳೊಂದಿಗೆ ತಮ್ಮ ಕಛೇರಿಯಲ್ಲಿ ಚರ್ಚಿಸಿದ್ದ ಅವರು ಮುಂಗಾರು ಹಂಗಾಮಿಗೆ ಗೋಕಾಕ ತಾಲ್ಲೂಕಿನ ರೈತರಿಗೆ ಬೇಕಾಗುವ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ದಾಸ್ತಾನು ಮತ್ತು ಪೂರೈಕೆ ಕುರಿತು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಅಲ್ಲದೇ ತಾಲ್ಲೂಕಿನ ರೈತರು ಬೀಜ ಮತ್ತುರಸಗೊಬ್ಬರಗಳಿಗಾಗಿ ಆತಂಕ ಪಡೆಬೇಕಾಗಿಲ್ಲಾ ಅವಶ್ಯಕತೆಗೆ ಅನುಗುಣವಾಗಿ ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ರೈತರಲ್ಲಿ ಮನವಿ ಮಾಡಿದರು.
ರೈತರು ಕೃಷಿ ಇಲಾಖೆಯಿಂದ ವಿತರಿಸಲಾಗುತ್ತಿರುವ ಪ್ರಮಾಣೀಕರಿಸಿದ ಬಿತ್ತನೆ ಬೀಜಗಳನ್ನು ಪಡೆದು ಹೆಚ್ಚಿನ ಇಳುವರಿ ತೆಗೆಯಲು ಸೂಚಿಸಿದರು. ತಾಲ್ಲೂಕಿನ ಗೋಕಾಕ, ಅಂಕಲಗಿ, ಮಮದಾಪೂರ, ಖನಗಾಂವ ಉರುಬಿನಟ್ಟಿ & ಬಳೋಬಾಳ ಗ್ರಾಮಗಳಲ್ಲಿ ಬೀಜ ವಿತರಣಾ ಕೇಂದ್ರಗಳಲ್ಲಿ ಗೋವಿನಜೋಳ, ಜೋಳ, ಸೋಯಾಬಿನ ಸೂರ್ಯಕಾಂತಿ ಹೆಸರು ಮತ್ತು ಸಜ್ಜೆ ಬೀಜಗಳನ್ನು ರಿಯಾಯಿತಿ ದರದಲ್ಲಿ ಕೃಷಿ ಇಲಾಖೆಯಿಂದ ವಿತರಿಸಲಾಗುತ್ತಿದ್ದು, ರೈತರು ತಮ್ಮ ಪಹಣಿ ಹಾಗೂ ಆಧಾರ ಕಾರ್ಡ್ ನೀಡಿ ಬೀಜ ಪಡೆಯಲು ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ಎಮ್ ಎಮ್.ನದಾಫ್ ರವರು ಸೂಚಿಸಿದ್ದಾರೆ.
ರೈತರು ಮಳಿಗೆಯಿಂದ ಬೀಜ ಖರೀದಿಸುವಾಗ ಕಡ್ಡಾಯವಾಗಿ ಅಧಿಕೃತ ರಶೀದಿ ಪಡೆಯಬೇಕು. ಅಧಿಕೃತವಾಗಿ ಕೃಷಿ ಇಲಾಖೆಯಿಂದ ಬೀಜ ಪರವಾನಗಿ ಪಡೆದ ಮಾರಾಟಗಾರರಿಂದ ಮಾತ್ರ ಬೀಜ ಖರೀದಿಸಬೇಕು. ಚೀಲದ ಮೇಲೆ ನಮೂದಿಸಿರುವಂತೆ ತೂಕ ಇದೆಯೇ ಅಥವಾ ಇಲ್ಲವೋ ಎಂಬುದನ್ನು ಪರೀಕ್ಷಿಸಬೇಕು. ಬಿತ್ತನೆ ಬೀಜ ಉತ್ಪಾದಿಸಿದ ದಿನಾಂಕ ಪರಿಶೀಲಿಸಬೇಕು. ಉತ್ಪಾದಕರು ಮಾರಾಟಗಾರರ ವಿಳಾಸ ಪರಿಶೀಲಿಸಿ ರೈತರು ಗುಣಮಟ್ಟದ ಬೀಜ ಖರೀದಿಸುವಂತೆ ಸಲಹೆ ನೀಡಿದ್ದಾರೆ. ಗೋಕಾಕ
ಮೂಡಲಗಿ ತಾಲ್ಲೂಕುಗಳಿಗೆ ಬೇಕಾದ ರಸಗೊಬ್ಬರಗಳು, ಪಿಕೆಪಿಎಸ್, ಟಿಎಪಿಸಿಎಮ್‌ಎಸ್ ಮತ್ತು ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಲಭ್ಯವಿದೆ. ರೈತರು ಖರೀಸಿದಿಸುವಾಗ ಜಾಗೃತರಾಗಿ ಖರೀದಿಸಬೇಕು. ಮಾರಾಟಗಾರರು ಮಾರಾಟ ಬೆಲೆಗಿಂತ ಹೆಚ್ಚಿನ ಬೆಲೆ ತೆಗೆದುಕೊಂಡಲ್ಲಿ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ಸೂಚಿಸಿದ್ದಾರೆ. ರಸಗೊಬ್ಬರ ಮಾರಾಟಗಾರರು ರೈತರಿಂದ ಹೆಚ್ಚಿನ ಬೆಲೆ ತೆಗೆದುಕೊಂಡಲ್ಲಿ ಅಂತಹ ಮಾರಾಟಗಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಹಾಗೂ ಅವರ ಪರವಾನಿಗೆಯನ್ನು ರದ್ದು ಪಡಿಸಲಾಗುವುದೇಂದು ಎಚ್ಚರಿಕೆ ನೀಡಿರುತ್ತಾರೆ.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಟಿ ಆರ್ ಕಾಗಲ, ಮಡ್ಡೆಪ್ಪ ತೋಳಿನವರ, ಶಾಸಕರ ಆಪ್ತ ಸಹಾಯಕರಾದ ಲಕ್ಷ್ಮೀಕಾಂತ ಎತ್ತಿನಮನಿ, ಸುರೇಶ ಸನದಿ ಹಾಜರಿದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

1 × five =