ಲೊಳಸೂರ ಸೇತುವೆ ಪುನರ್ ನಿರ್ಮಿಸಲು ೫೦ ಕೋಟಿ ಅನುಮೋದನೆ-ರಮೇಶ ಜಾರಕಿಹೊಳಿ.!
ಗೋಕಾಕ: ಗೋಕಾಕ ನಗರ ಮತ್ತು ಲೋಳಸೂರ ಗ್ರಾಮಕ್ಕೆ ಹೊಂದಿಕೊAಡಿರುವ ರಾಜ್ಯ ಹೆದ್ದಾರಿ ೩೧ರ ಜತ್ತ-ಜಾಂಬೋಟಿ ರಸ್ತೆಯ ಘಟಪ್ರಭಾ ನದಿಗೆ ಅಡ್ಡಲಾಗಿರುವ ಲೊಳಸೂರ ಸೇತುವೆಯ ಪುನರ್ ನಿರ್ಮಾಣಕ್ಕೆ ಸರಕಾರದಿಂದ ಅನುಮೋದನೆ ನೀಡಲಾಗಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಮಂಗಳವಾರದAದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಲೊಕೋಪಯೋಗಿ ಇಲಾಖೆಯಿಂದ ೫೦ಕೋಟಿ ರೂ ವೆಚ್ಚದಲ್ಲಿ ಲೊಳಸೂರ ಸೇತುವೆ ಪುನರ್ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದ್ದು, ಶೀಘ್ರವೇ ಡಿಪಿಆರ್ ತಯಾರಿಸಿ, ಟೆಂಡರ್ ಕರೆಯಲಾಗುವದು. ಎಂದರು.
ಸುಮಾರು ೫೦ ವರ್ಷಗಳ ಹಳೆಯದಾಗಿರುವ ಲೊಳಸೂರ ಸೇತುವೆ, ಕಳೆದ ಹಲವು ವರ್ಷಗಳಿಂದ ಪ್ರವಾದ ಪರಿಸ್ಥಿತಿ ಎದುರಾಗಿ ಸೇತುವೆ ಹಾನಿಗೊಳಗಾಗಿದೆ. ಅಲ್ಲದೇ ಜನರ ಸಂಚಾರಕ್ಕೆ ಅಸ್ತವ್ಯಸ್ಥವಾಗುತ್ತಿತ್ತು. ಈ ಬಗ್ಗೆ ಸರಕಾರಕ್ಕೆ ಸೇತುವೆ ಪುನರ್ ನಿರ್ಮಿಸಲು ಮನವಿ ಮಾಡಲಾಗಿತ್ತು, ಮನವಿಗೆ ಸ್ಫಂಧಿಸಿದ ಸರಕಾರ ಲೊಳಸೂರ ಸೇತುವೆಯನ್ನು ಪುನರ್ ನಿರ್ಮಾಣ ಮಾಡಲು ಕೆಆರ್‌ಡಿಸಿಎಲ್ ವತಿಯಿಂದ ಯೋಜನಾ ವರದಿ ತಯಾರಿಸಲು ಲೋಕೋಪಯೋಗಿ ಇಲಾಖೆಗೆ ಸೂಚಿಸಿದೆ. ಸೇತುವೆ ಪುನರ್ ನಿರ್ಮಾಣ ಕಾಮಗಾರಿ ಶೀಘ್ರದಲ್ಲೆ ಕೈಗೆತ್ತಿಕೊಳ್ಳಲಾಗುವದು ಎಂದು ಶಾಸಕರು ತಿಳಿಸಿದ್ದಾರೆ.