6ನೇ ಗೋಕಾಕ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಈಶ್ವರಚಂದ್ರ ಬೆಟಗೇರಿ ಆಯ್ಕೆ.!
ಗೋಕಾಕ: ಗೋಕಾಕ ತಾಲೂಕ ಮಟ್ಟದ ೬ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಬರುವ ಡಿಸೆಂಬರ್18 ರಂದು ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಜರುಗಲಿದೆ ಎಂದು ಗೋಕಾಕ ತಾಲೂಕಾ ಕ.ಸಾ.ಪ ಅಧ್ಯಕ್ಷೆ ಶ್ರೀಮತಿ ಭಾರತಿ ಮದಭಾವಿ ಹೇಳಿದರು.
ಅವರು, ತಾಲೂಕಿನ ಎಲ್ಲ ಸಾಹಿತಿಗಳು ಮತ್ತು ಕನ್ನಡಪರ ಸಂಘಟನೆಗಳೊ0ದಿಗೆ 6ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಕುರಿತ ಪೂರ್ವಭಾವಿ ಸಭೆಯಲ್ಲಿ ಈ ವಿಷಯ ತಿಳಿಸಿ, ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿಣಿ ಸಮಿತಿ ಮತ್ತು ಗೋಕಾಕ ತಾಲೂಕಿನ ಎಲ್ಲ ಸಾಹಿತಿಗಳ, ಕಲಾವಿದರ ಮತ್ತು ಕನ್ನಡಪರ ಸಂಘಟನೆಗಳ ತೀರ್ಮಾನದಂತೆ ತಾಲೂಕ ಮಟ್ಟದ ೬ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ನಾಡಿನ ಹಿರಿಯ ಜಾನಪದ ಕಲಾವಿದ, ಸಾಹಿತಿ ಈಶ್ವರಚಂದ್ರ ಬೆಟಗೇರಿಯವರನ್ನು ಆಯ್ಕೆಮಾಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಪ್ರೊ. ಚಂದ್ರಶೇಖರ ಅಕ್ಕಿ, ಪ್ರೊ. ಜಿ ವಿ ಮಳಗಿ, ಮಹಾಲಿಂಗ ಮಂಗಿ, ಡಾ. ಸಿ ಕೆ ನಾವಲಗಿ, ಡಾ. ವಿ ಎ ಪಂಗನ್ನವರ, ಮಹಾಂತೇಶ ತಾಂವಶಿ, ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ, ಜಯಾನಂದ ಮಾದರ, ಪುಷ್ಪ ಮುರಗೋಡ ಮಾತನಾಡಿದರು.
ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲ ಪದಾಧಿಕಾರಿಗಳು, ಸಾಹಿತಿಗಳು, ಕಲಾವಿದರು ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರುಗಳು ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಈಶ್ವರಚಂದ್ರ ಬೆಟಗೇರಿಯವರ ನಿವಾಸಕ್ಕೆ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದರು.
ಸಭೆಯಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಜಿ ಬಿ ಬಳಗಾರ, ಆಯ್ ಎ ದೇಯನ್ನವರ, ಶಕುಂತಲಾ ಹಿರೇಮಠ, ಶಿವಲೀಲಾ ಪಾಟೀಲ, ಬಸವರಾಜ ಮುರಗೊಡ, ಈಶ್ವರ ಮಮದಾಪೂರ, ಲಕ್ಷ್ಮಣ ಸೊಂಟಕ್ಕಿ, ಎಂ ಬಿ ಬಳಗಾರ, ಜಯಾ ಚುನಮುರಿ, ಎನ್, ಆರ್. ಪಾಟೀಲ, ಡಾ. ಸುರೇಶ ಹನಗಂಡಿ, ಅರಿಹಂತ ಬಿರಾದಾರ ಪಾಟೀಲ, ಇಸ್ಮಾಯಿಲ್ ಇಳಕಲ್, ರಾಜೇಶ್ವರಿ ಒಡೆಯರ, ಆರ್ ಎಲ್ ಮಿರ್ಜಿ ಉಪಸ್ಥಿತರಿದ್ದರು.
ಕಾರ್ಯದರ್ಶಿಗಳಾದ ಪ್ರೊ. ಸುರೇಶ ಮುದ್ದಾರ ಸ್ವಾಗತಿಸಿದರು. ಪ್ರೋ ಮಹಾನಂದ ಪಾಟೀಲ ವಂದಿಸಿದರು.