Breaking News

ಆಧಾರ್ ನವೀಕರಣ:ಸ್ಪಷ್ಟತೆಯಿರಲಿ

Spread the love

ಆಧಾರ್ ನವೀಕರಣ:ಸ್ಪಷ್ಟತೆಯಿರಲಿ

ಇತ್ತೀಚೆಗೆ ಮಾಧ್ಯಮಗಳಲ್ಲಿ, ಹತ್ತು ವರ್ಷಗಳ ಹಿಂದೆ ಮಾಡಿಸಿದ ಆಧಾರ್ ಕಾರ್ಡ್‌ಗಳನ್ನು ನವೀಕರಣ ಮಾಡಬೇಕೆಂದು ಸೂಚಿಸಿರುವ ವರದಿಗಳು ಬರುತ್ತಿವೆ. ತುಂಬಾ ಹಳೆಯ ಫೊಟೋ, ವಿಳಾಸ ಮತ್ತಿತರ ವಿವರಗಳನ್ನು ನವೀಕರಿಸುವ ಉದ್ದೇಶದಿಂದ ಇದನ್ನು ಮಾಡುತ್ತಿರಬಹುದು, ಆದರೆ ಈ ವಿಷಯದಲ್ಲಿ ಬಹಳಷ್ಟು ಗೊಂದಲಗಳಿವೆ. ಮೊದಲನೇಯದಾಗಿ ಮೂಲ ಆಧಾರ್ ಕಾರ್ಡ್ ಮಾಡಿಸಿ ಹತ್ತು ವರ್ಷ ಮೀರಿದ ಪ್ರಕರಣಗಳಲ್ಲಿ ಮಾತ್ರ ನವೀಕರಣ ಮಾಡಬೇಕೇ ಅಥವಾ ಯಾವುದಾದರೂ ಕಾರಣದಿಂದ ಆಧಾರ್‌ನಲ್ಲಿ ಬದಲಾವಣೆ ಮಾಡಿದ್ದರೆ ಆ ದಿನದಿಂದ ಹತ್ತು ವರ್ಷಗಳ ನಂತರ ಮಾಡಿಸಬೇಕೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಬೇಕು. ಏಕೆಂದರೆ ನಾನು ಆಧಾರ್ ಕಾರ್ಡ್ ಆರಂಭವಾದ ದಿನಗಳಲ್ಲಿ ಮಾಡಿಸಿದ್ದು, ಹತ್ತು ವರ್ಷಗಳಿಗೊಮ್ಮೆ ನವೀಕರಣ ಮಾಡಬೇಕೆಂಬ ಸೂಚನೆಯಂತೆ ನವೀಕರಣ ಮಾಡಲು ಆಧಾರ್ ಕೇಂದ್ರಕ್ಕೆ ಹೋದರೆ, ಅವರು ಹೇಳಿದ್ದು ಹೀಗೆ: ನಿಮ್ಮ ಕಾರ್ಡ್ 2013ರಲ್ಲಿ ತಿದ್ದುಪಡಿ ಮಾಡಲಾಗಿದೆ. ಸರ್ಕಾರದ ಸೂಚನೆಯಂತೆ 2011ಕ್ಕೂ ಹಿಂದಿನ ಕಾರ್ಡ್‌ಗಳನ್ನು ಮಾತ್ರ ನವೀಕರಣ ಮಾಡಬೇಕಿದೆ! 2013ರಲ್ಲಿ ತಿದ್ದುಪಡಿ ಮಾಡಿದರೂ 2023ಕ್ಕೆ ಹತ್ತುವರ್ಷ ಮುಗಿಯುವುದರಿಂದ ನವೀಕರಣದ ಅಗತ್ಯ ಇದೆಯೆಂದು ಭಾವಿಸಿ ತಿದ್ದುಪಡಿ ಮಾಡಲು ಹೋಗಿದ್ದು, ಸರಿಯಾದ ಮಾಹಿತಿ ನೀಡಿದ್ದರೆ ಅನಗತ್ಯವಾಗಿ ಓಡಾಡುವುದು ತಪ್ಪುತ್ತಿತ್ತು. ಹಾಗೆಯೇ ಇದನ್ನು ಪೂರ್ಣಪ್ರಮಾಣದಲ್ಲಿ ಕಾರ್ಯಗತಗೊಳಿಸಲು ಪ್ರತೀ ಊರಿನಲ್ಲೂ ಸಾಕಷ್ಟು ಸಂಖ್ಯೆಯ ಕೇಂದ್ರಗಳನ್ನೂ ಒದಗಿಸಬೇಕು. ಅಂಚೆ ಕಚೇರಿ, ಬ್ಯಾಂಕ್ ಸೇರಿದಂತೆ ಬಹಳಷ್ಟು ಕೇಂದ್ರಗಳಲ್ಲಿ ಸಿಬಂದಿ ಕೊರತೆಯ ಕಾರಣದಿಂದಾಗಿ ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಚಟುವಟಿಕೆಗಳು ಸ್ಥಗಿತಗೊಂಡಿವೆ. ಅಲ್ಲದೆ ಖಾಸಗಿ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ಮತ್ತು ಫೊಟೋ ತೆಗೆಯುವ ಸೌಲಭ್ಯ ಇಲ್ಲದಿರುವುದರಿಂದ ಸರ್ಕಾರಿ ಕೇಂದ್ರಗಳಲ್ಲಿ ಮಾತ್ರ ಮಾಡಿಸಬೇಕಾಗುತ್ತದೆ. ಸಾಕಷ್ಟು ಸಂಖ್ಯೆಯ ಕೇಂದ್ರಗಳನ್ನು ಒದಗಿಸಿದರೆ ಮಾತ್ರ (ಮುಖ್ಯವಾಗಿ, ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿ) ದಿನವಿಡೀ ಕಾದು ನಿಲ್ಲುವ ಪ್ರಮೇಯ ತಪ್ಪುತ್ತದೆ. ಸಂಬಂಧಿಸಿದವರು ಇದನ್ನು ಗಮನಿಸಲಿ.

★ಮೋಹನದಾಸ ಕಿಣಿ, ಕಾಪು
(ನಿವೃತ್ತ ಕಚೇರಿ ಅಧೀಕ್ಷಕ, ಆರೋಗ್ಯ ಇಲಾಖೆ
ಮತ್ತು ಹವ್ಯಾಸಿ ಬರಹಗಾರ)
~~~~~~~~~~~~~~~~~~~~~
“ಸೌಜನ್ಯ” ಮುಖ್ಯ ರಸ್ತೆ,
ಕಾಪು:574106, ಉಡುಪಿ ಜಿಲ್ಲೆ.
~~~~~~~~~~~~~~~~~~~~
kini.mohandas@gmail.com


Spread the love

About Yuva Bharatha

Check Also

ಸೃಷ್ಟಿ ಸಮಷ್ಟಿಯ ಆದಿ…. ಚಿಗುರು ಚೈತನ್ಯದ ಮೂಲ ಯುಗಾದಿ

Spread the loveಸೃಷ್ಟಿ ಸಮಷ್ಟಿಯ ಆದಿ…. ಚಿಗುರು ಚೈತನ್ಯದ ಮೂಲ ಯುಗಾದಿ ಹಿಂದೂ ಪುರಾಣಗಳ ಪ್ರಕಾರ, ಈ ಯುಗಾದಿಯ ಶುಭದಿನದಂದು …

Leave a Reply

Your email address will not be published. Required fields are marked *

5 × two =