Breaking News

ಬದುಕಿನಲ್ಲಿ ಮಹಾನ್ ಪುರುಷರ ಜೀವನ ಆದರ್ಶ ಅಳವಡಿಸಿಕೊಳ್ಳಿ

Spread the love

ಬದುಕಿನಲ್ಲಿ ಮಹಾನ್ ಪುರುಷರ ಜೀವನ ಆದರ್ಶ ಅಳವಡಿಸಿಕೊಳ್ಳಿ

ಯುವ ಭಾರತ ಸುದ್ದಿ ಬಸವನಬಾಗೇವಾಡಿ : ಶಿವಯೋಗಿ ಸಿದ್ಧರಾಮೇಶ್ವರರು 12ನೇ ಶತಮಾನದಲ್ಲಿ ಜನಪಯೋಗಿ ಕೆರೆ ಕಟ್ಟಿಸುವ ಮೂಲಕ ಕಾಯಕಯೋಗಿಯಾಗಿ ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ. ಅವರು ರಚಿಸಿದ ವಚನಗಳು ಪ್ರತಿಯೊಬ್ಬರ ಜೀವನಕ್ಕೆ ದಾರಿದೀಪವಾಗಿವೆ ಇಂತಹ ಮಹಾನ್ ಪುರುಷರ ಜೀವನ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಿವಾನಂದ ಮಂಗಾನವರ ಹೇಳಿದರು.

ಪಟ್ಟಣದ ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ ಭಾನುವಾರ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ಧರಾಮೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮುಖಂಡರಾದ ಅರವಿಂದ ಸಾಲವಾಡಗಿ, ಪರಶುರಾಮ ಜಮಖಂಡಿ, ಸಿದ್ರಾಮ ಪಾತ್ರೋಟಿ ಮಾತನಾಡಿದರು.

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಭವಾನಿ ಪಾಟೀಲ, ಎಸ್.ಶ್ರೀನಿವಾಸ, ಬಿ.ಜಿ.ದಾನಿ, ಮಂಜು ಹಳ್ಳೂರ, ಉದಯ ಮಾಂಗಲೇಕರ, ರಮೇಶ ಮ್ಯಾಗೇರಿ ಇದ್ದರು.

ಪಟ್ಟಣದ ತಾಲ್ಲೂಕು ಪಂಚಾಯತಿ ಹಳೆ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ಹಾಗೂ ಶಿವಯೋಗಿ ಸಿದ್ಧರಾಮೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಶಿವರುದ್ರಯ್ಯ ಹಿರೇಮಠ, ಗೌರವಾಧ್ಯಕ್ಷ ಬಸವಾರಜ ಸೋಮಪೂರ, ಎ.ಎಂ.ಹಳ್ಳೂರ, ಎಸ್.ಬಿ.ನಡಕಟ್ಟಿ, ಶಿವಾನಂದ ಮಂಗಾನವರ, ರವಿ ರಾಠೋಡ, ಅಶೋಕ ಚಲವಾದಿ, ಬಿ.ವಿ.ಚಕ್ರಮನಿ, ಎಸ್.ಪಿ.ಮಡಿಕೇಶ್ವರ, ಬಸವರಾಜ ನಾಯ್ಕೋಡಿ, ವಿನೂತ ಕಲ್ಲೂರ, ಪ್ರಭಾಕರ ಖೇಡದ, ವೈ.ಎನ್.ಮಿಣಜಗಿ, ಬಸವರಾಜ ಮೇಟಿ, ಶ್ರೀಶೈಲ ಹಾದಿಮನಿ, ಮಹಾದೇವಿ ಬಿರಾದಾರ, ಕಾಶೀನಾಥ ಅವಟಿ ಇದ್ದರು.


Spread the love

About Yuva Bharatha

Check Also

ಹಿರೇಬೂದನೂರ : ಭಕ್ತರ ಸನ್ಮಾನ

Spread the loveಹಿರೇಬೂದನೂರ : ಭಕ್ತರ ಸನ್ಮಾನ ಮುರಗೋಡ : ಹಿರೇಬೂದನೂರ ಗ್ರಾಮದ ಶ್ರೀ ಸದ್ಗುರು ಸಂತ ಬಾಳುಮಾಮಾ ದೇವಸ್ಥಾನದ …

Leave a Reply

Your email address will not be published. Required fields are marked *

16 − three =