ಮೌಲ್ಯ ಶಿಕ್ಷಣ ಜಾಗೃತಿಗೆ ಬೆಳಗಾವಿಗೆ ಆಗಮಿಸಿದ ಏಕಾಂಗಿ ಬೈಕ್ ಯಾತ್ರೆ
ಯುವ ಭಾರತ ಸುದ್ದಿ ಬೆಳಗಾವಿ :
ವಿವೇಕ ವಿದ್ಯಾ ವಾಹಿನಿ ಟ್ರಸ್ಟ್ ವತಿಯಿಂದ ಟ್ರಸ್ಟಿನ ಸಂಸ್ಥಾಪಕ, ಖ್ಯಾತ ಲೇಖಕ, ವಾಗ್ಮಿ ನಿತ್ಯಾನಂದ ವಿವೇಕವಂಶಿಯವರು ಮೌಲ್ಯ ಶಿಕ್ಷಣದ ಅಗತ್ಯ ಹಾಗೂ ಮಹತ್ವದ ಕುರಿತು ಜನಜಾಗೃತಿ ಮೂಡಿಸುವುದಕ್ಕಾಗಿ 18 ದಿನಗಳ 3,500 ಕ್ಕೂ ಹೆಚ್ಚು ಕಿ.ಮೀಗಳ “ಪ್ರದಕ್ಷಿಣಂ – ವಿವೇಕ ರಾಜ್ಯ ಪರಿಕ್ರಮ!” ಸಂಪೂರ್ಣ ಕರ್ನಾಟಕ ಹಾಗೂ ಅಕ್ಕ ಪಕ್ಕದ ರಾಜ್ಯಗಳ ಗಡಿಜಿಲ್ಲೆಗಳಲ್ಲಿ ಏಕಾಂಗಿ ಬೈಕ್ ಯಾತ್ರೆಯನ್ನು ಮಾಡುತ್ತಿದ್ದಾರೆ.
ದಿ : 16/02/2023ರ ಇಂದು ಬೆಳಿಗ್ಗೆ ಬೆಳಗಾವಿಗೆ ಯಾತ್ರೆ ತಲುಪಿತು. ನಂತರ ಭರತೇಶ್ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಮೌಲ್ಯಶಿಕ್ಷಣ ಕುರಿತು ವಿಶೇಷ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ ನಡೆಯಿತು. ನಿತ್ಯಾನಂದ ವಿವೇಕವಂಶಿಯವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ನಂತರ ಮಾತನಾಡಿದ ಅವರು ಮೌಲ್ಯಶಿಕ್ಷಣದ ಕುರಿತು ಮಕ್ಕಳು, ಶಿಕ್ಷಕರು, ಪೋಷಕರು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ನನ್ನ ಮುಖ್ಯ ಧ್ಯೇಯವಾಗಿದೆ. ಆ ನಿಟ್ಟಿನಲ್ಲಿ 18 ದಿನಗಳಲ್ಲಿ 75ಕ್ಕೂ ಹೆಚ್ಚು ಶಾಲಾ ಕಾಲೇಜುಗಳಲ್ಲಿ 10,000 ಕ್ಕೂ ಹೆಚ್ಚು ವಿದ್ಯಾರ್ಥಿಗಳೊಡನೆ ಸಂವಾದ ನಡೆಯುತ್ತಿದೆ ಎಂದರು.
ಮುಖ್ಯೋಪಾಧ್ಯಾಯ ಅಕ್ಕಿ, ಭರತೇಶ ಎಜ್ಯುಕೇಶನ್ ಟ್ರಸ್ಟ್‌ನ ಕಿರಣ್ ಕಂದ್ರಾಳ್ಕರ್, ಕಾರ್ಯಕರ್ತರಾದ ಉದಯ ಪಾಟೀಲ, ಲಕ್ಷ್ಮಣ ಮೈನಾಲ್ ಇನ್ನಿತರು ಇದ್ದರು.
ಕಾರ್ಯಕ್ರಮದ ನಂತರ ಬೆಳಗಾವಿಯ ರಾಮಕೃಷ್ಣ ಮಿಷನ್ ಆಶ್ರಮಕ್ಕೆ ಭೇಟಿ ನೀಡಿ ಅಲ್ಲಿಂದ ಚಿಕ್ಕೋಡಿಗೆ ತೆರಳಿದರು.