Breaking News

ಪಿಚ್ಚರ್ ಅಭಿ ಬಾಕೀ ಹೈ…!!

Spread the love

ಪಿಚ್ಚರ್ ಅಭಿ ಬಾಕೀ ಹೈ…!!


—————————-

ಕ್ಷಮಯಾಧರಿತ್ರಿಯೂ ಕ್ಷಮಿಸಲಿಲ್ಲ
ಈ ಬಾರಿ ಟರ್ಕಿ-ಸಿರಿಯಾದಲಿ
ಮೈ-ಕೊಡವಿ ಕಂಪಿಸಿದಳು!
ಗೊತ್ತಿಲ್ಲ ಮತ್ತೆಲ್ಲಿ, ಯಾವಾಗ
ಭೂತಾಯಿ ಬಾಯ್ಬಿರಿವಳೋ?
ತನ್ನ ಮಕ್ಕಳನೇ ತಾ ಮರೆವಳೋ||

ಇಲ್ಲೂ ಲಾತೂರ್, ಕಛನಲ್ಲಿ
ಆಗೊಮ್ಮೆ ಆಗಿತ್ತು ಭೂಕಂಪನ
ಮಣ್ಣುಪಾಲಾಗಿತ್ತು ಜೀವನ!
ಈಗಲೂ ಆಗೊಮ್ಮೆ, ಈಗೊಮ್ಮೆ
ಅಲ್ಲಲ್ಲಿ ಕಂಪಿಸುತ್ತಿದೆ ಭೂಮಿ
ಕುಸಿಯುತ್ತಿವೆ ಬೆಟ್ಟ-ಗುಡ್ಡ||

ಹಿಮಾಲಯ, ಉತ್ತರ-ಭಾರತ
ಭೂತಾಯಿಯ ತೊಟ್ಟಿಲಂತೆ!
ಅದ್ಯಾವಾಗ ತೂಗುವುದೋ?
ಕೋಟಿ ವರ್ಷಗಳ ಹಿಂದೊಮ್ಮೆ
ಭೂಮಿ ಬುಡಮೇಲಾಗಿತ್ತಂತೆ!
ಕಡಲು-ಪರ್ವತ ಹುಟ್ಟಿದ್ದವಂತೆ||

ಭೂಕಂಪ ಬರೀ ಟ್ರೇಲರ್ ಅಂತೆ
ಪ್ರಳಯದ ಪಿಚ್ಚರ್ ಬಾಕಿ ಇದೆಯಂತೆ!
ಪ್ರಳಯವೇ ಮರುಸೃಷ್ಟಿಗೆ ನಾಂದಿಯಂತೆ!!
ಈ ಟ್ರೇಲರ್, ಪಿಚ್ಚರ್ ಅದೆಷ್ಟು ನಿಜ,
ಅದೆಷ್ಟು ಸುಳ್ಳು? ತಿಳಿದಿಲ್ಲ ಪರಂತೂ
ಮಿತಿಮೀರಿದ ಆಧುನಿಕತೆಯೇ ಮುಳ್ಳು||

ಭೂ ಒಡಲ ಬಗೆದ ರಕ್ಕಸರು ನಾವು
ಭುವಿಯ ಕುರೂಪಗೊಳಿಸಿದವರು ನಾವು
ಕಾಡು ಕಡಿದು ‘ನಾಡು’ ಕಟ್ಟಿದವರು ನಾವು!
ಗಾಳಿ, ನೀರು ಮಲಿನಗೊಳಿಸಿದವರು ನಾವು
ಕಡಲ ಒಡಲಿಗೂ ವಿಷವಿಕ್ಕಿದವರು ನಾವು
ಆಗಸದಲೂ ಕಸ ಚೆಲ್ಲಿದವರು ನಾವು||

ಅಯ್ಯೋ, ತೃಣಾತೀತೃಣ ಕುನ್ನಿಯೇ
ಇನ್ನೂ ಅದೆಷ್ಟು ಕ್ಷಮಿಸೀತು ನಿನ್ನ ಈ ಸೃಷ್ಟಿ?
ಕ್ಷಮೆಗೂ ಇಲ್ಲವೇ ಅದೊಂದು ಮಿತಿ
ಮಿತಿಮೀರಿದರೆ ಖಂಡಿತ ಅಧೋಗತಿ!
ನೀರಮೇಲಿನ ಗುರುಳೆ, ಧರೆ ಮಗುಚಿದರೆ
ನೀನಿಲ್ಲ, ನಿನ್ನ ಮರುಳ ಚನ್ನಬಸವನೂ ಇಲ್ಲ!||

– #ಚನ್ನಬಸಪ್ಪ #ರೊಟ್ಟಿ, #ನೇಸರಗಿ


Spread the love

About Yuva Bharatha

Check Also

ಸೃಷ್ಟಿ ಸಮಷ್ಟಿಯ ಆದಿ…. ಚಿಗುರು ಚೈತನ್ಯದ ಮೂಲ ಯುಗಾದಿ

Spread the loveಸೃಷ್ಟಿ ಸಮಷ್ಟಿಯ ಆದಿ…. ಚಿಗುರು ಚೈತನ್ಯದ ಮೂಲ ಯುಗಾದಿ ಹಿಂದೂ ಪುರಾಣಗಳ ಪ್ರಕಾರ, ಈ ಯುಗಾದಿಯ ಶುಭದಿನದಂದು …

Leave a Reply

Your email address will not be published. Required fields are marked *

17 − four =