Breaking News

SSLC ವಿದ್ಯಾರ್ಥಿಗಳಿಗೆ ಮಾದರಿ ಈ ವಿದ್ಯಾರ್ಥಿ !

Spread the love

SSLC ವಿದ್ಯಾರ್ಥಿಗಳಿಗೆ ಮಾದರಿ ಈ ವಿದ್ಯಾರ್ಥಿ !

ಚಿಕ್ಕಬಳ್ಳಾಪುರ:
ನಗರದ ಅಗಲಗುರ್ಕಿಯ ಬಿಜಿಎಸ್ ಪ್ರೌಢಶಾಲೆ ವಿದ್ಯಾರ್ಥಿ ಎನ್. ಯಶಸ್ ಗೌಡ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಟಾಪರ್ ಆಗಿದ್ದಾರೆ. 625ಕ್ಕೆ 625 ಅಂಕ ಪಡೆದ ರಾಜ್ಯದ ನಾಲ್ಕು ವಿದ್ಯಾರ್ಥಿಗಳಲ್ಲಿ ಯಶಸ್ ಒಬ್ಬರಾಗಿದ್ದಾರೆ.

ಯಶಸ್‌ ಚಿಕ್ಕಬಳ್ಳಾಪುರ ತಾಲ್ಲೂಕಿನ ಮಜ್ಜಿಗೆ ಹೊಸಹಳ್ಳಿಯ ನಾರಾಯಣ ಸ್ವಾಮಿ-ಭಾಗ್ಯಮ್ಮ ದಂಪತಿ ಪುತ್ರ. ಅವರ ತಂದೆ ನಾರಾಯಣ ಸ್ವಾಮಿ ಮೂಲತಃ ಕೃಷಿಕರಾಗಿದ್ದು, ಭಾರತೀಯ ಜೀವ ವಿಮಾ ನಿಗಮದಲ್ಲಿ ಏಜೆಂಟರ್‌ ಆಗಿಯೂ ಕೆಲಸ ಮಾಡುತ್ತಿದ್ದಾರೆ. ತಾಯಿ ಗೃಹಿಣಿ.

 

ನನ್ನ ಈ ಸಾಧನೆಯನ್ನು ತಾತ ಸುಬ್ಬರಾಯಪ್ಪ ಅವರಿಗೆ ಅರ್ಪಿಸುವೆ. ಅವರು ಈಗ ನಿಧನರಾಗಿದ್ದಾರೆ. ಆದರೆ, ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆಯಬೇಕು ಎನ್ನುವ ಆಸೆ ಹೊಂದಿದ್ದರು ಎಂದು ಯಶಸ್ ಗೌಡ ತಿಳಿಸಿದರು.

ಸಾಧನೆಯ ಹಿಂದೆ ತಂದೆ, ತಾಯಿ ಮತ್ತು ಬಿಜಿಎಸ್ ಶಾಲೆಯ ಶಿಕ್ಷಕರು ಇದ್ದಾರೆ. ಮುಂದೆ ಚೆನ್ನಾಗಿ ಓದಿ ಐಟಿ ಕಂಪನಿ ಕಟ್ಟಬೇಕು ಎಂದುಕೊಂಡಿದ್ದೇನೆ ಎಂದರು.

ಅಮ್ಮನೇ ನನಗೆ ಶಕ್ತಿ . ಅಪ್ಪ , ಅಕ್ಕ ಸಹ ಸಪೋರ್ಟ್ ಮಾಡ್ತಿದ್ರು . ಅಕ್ಕ ಈಗ ಎಂಜಿನಿಯರಿಂಗ್ ಮಾಡ್ತಿದ್ದಾರೆ . ನನಗೆ ರಾಜ್ಯಮಟ್ಟದ ಪೂರ್ವಭಾವಿ ಪರೀಕ್ಷೆಯಲ್ಲಿ 625 ಕ್ಕೆ 624 ಬಂದಿತ್ತು . ಪರೀಕ್ಷೆಗಳನ್ನು ಹೇಗೆ ಬರೆಯಬೇಕು ಎನ್ನುವ ಬಗ್ಗೆಯೂ ಪ್ಲಾನ್ ಮಾಡಿಕೊಳ್ತಿದ್ದೆ . ಉತ್ತರ ಪತ್ರಿಕೆಗಳನ್ನು ನೀಟಾಗಿ ಇರಿಸಿಕೊಳ್ತಿದ್ದೆ.
ಚಿತ್ತು – ಕಾಟು ಮಾಡ್ತಾ ಇರಲಿಲ್ಲ . ನಾವು ಓದುವುದು ಎಷ್ಟು ಮುಖ್ಯವೋ ಪ್ರೆಸೆಂಟೇಶನ್ ಮಾಡುವುದೂ ಅಷ್ಟೇ ಮುಖ್ಯವಾಗುತ್ತದೆ . ಹ್ಯಾಂಡ್ ರೈಟಿಂಗ್ ಕೂಡ ಮುಖ್ಯ . ಅದರ ಬಗ್ಗೆಯೂ ಗಮನ ಇರಬೇಕು . ಅಪ್ಪ ಅಮ್ಮ ಒತ್ತಡ ಹಾಕ್ತಿರಲಿಲ್ಲ.

ನಾನು ನೆನಪಿನ ಶಕ್ತಿಗೆ ಟ್ರಿಕ್ ಅನುಸರಿಸಿದೆ . ಕಾನ್ಸೆಪ್ಟ್ ಅರ್ಥ ಮಾಡಿಕೊಂಡರೆ ಇದು ಸುಲಭ . ಕಾನ್ಸೆಪ್ಟ್ ಗಳನ್ನು ಲಿಂಕ್ ಮಾಡಿದರೆ ಪರೀಕ್ಷೆಯಲ್ಲಿ ಸರಿಯಾಗಿ ನೆನಪಿಗೆ ಬರುತ್ತದೆ. ಶಾಲೆಯಲ್ಲಿ ಐದಾರು ಪ್ರಿಪರೇಟರಿ ಪರೀಕ್ಷೆ ಬರೆಸಿದರು . ಅದು ಅನುಕೂಲವಾಯಿತು. ಅಂದಿನ ಪಾಠ ಅಂದೇ ಓದುವುದು ಬಹಳ ಮುಖ್ಯ . ನಾನು ಓದುವ ಮೊದಲು ಮೂರು ಬಾರಿ ಓಂಕಾರ ಹೇಳುತ್ತಿದ್ದೆ . ಈ ಮೂಲಕ ಏಕಾಗ್ರತೆ ಹೆಚ್ಚಿಸಿಕೊಳ್ಳುತ್ತಿದ್ದೆ . ಅವಕಾಶ ಸಿಕ್ಕಾಗ ಆಟ ಆಡ್ತಿದ್ದೆ . ಫ್ರೆಂಡ್ಸ್ ಜತೆಗೆ ಮಾತಾಡ್ತಿದ್ದೆ . ಇದು ನನ್ನ ಮನಸ್ಸನ್ನು ಫ್ರೆಶ್ ಆಗಿಸ್ತಾ ಇತ್ತು . ನಾನು ಮೊಬೈಲ್‌ಗೆ ಅಡಿಕ್ಟ್ ಆಗಿಲ್ಲ . ಮೊಬೈಲ್ ಗೇಮ್ಸ್ ಎಲ್ಲ ನಾನು ಆಡಲ್ಲ . ಬರೀ ಮಾತಾಡೋಕೆ ಮಾತ್ರ ಮೊಬೈಲ್ ಬಳಸ್ತೇನೆ . ನಾನು ಸ್ಟಡಿ ಮೆಟೀರಿಯಲ್ಸ್ ಬಳಸಿಲ್ಲ . ನಮ್ಮ ಟೀಚರ್ಸ್ ಹೇಳಿದ್ದಷ್ಟನ್ನೇ ಮಾಡ್ತಿದ್ದೆ . ಗಣಿತ ನನ್ನ ಇಷ್ಟದ ವಿಷಯ . ಇನ್‌ಸ್ಟಾಗ್ರಾಮ್ ಅಕೌಂಟ್ ಇದ್ದರೂ ನಾನು ಇಡೀ ಒಂದು ವರ್ಷ ಅದನ್ನು ಬಳಸಿಲ್ಲ . ನಮ್ಮ ಶಾಲೆಯ ವಾಟ್ಸಾಪ್ ಗ್ರೂಪ್ ರೆಗ್ಯುಲರ್ ಬಳಸ್ತಾ ಇದ್ದೆ . ನನ್ನ ಟೀಚರ್ಸ್ ಕಳಿಸ್ತಿದ್ದ ಲೆಕ್ಕಗಳನ್ನು ನೋಡಿ ಸಾಲ್ಟ್ ಮಾಡೋಕೆ ಅದನ್ನು ಬಳಸ್ತಾ ಇದ್ದೆ . ನನಗೆ ಸ್ವಂತ ಏನಾದ್ರೂ ಉದ್ಯಮ ಮಾಡಬೇಕು ಎನ್ನುವ ಆಸೆಯಿದೆ.
ಪಿಯುಸಿಯಲ್ಲಿ ಪಿಸಿಎಂಬಿ ತಗೊಳೀನಿ . ಆಮೇಲೆ ನೀಟ್ , ಜೆಇಇ ಎಕ್ಸಾಂ ಬರೆಯುತ್ತೇನೆ.

ನಾನು ಮೊಬೈಲ್‌ಗೆ ಅಡಿಕ್ಟ್ ಆಗಿಲ್ಲ . ಮೊಬೈಲ್ ಗೇಮ್ಸ್ ಆಡ್ತಿರಲಿಲ್ಲ . ಬರೀ ಮಾತಾಡೋಕೆ ಮಾತ್ರ ಮೊಬೈಲ್ ಬಳಸ್ತಿದ್ದೆ . ನಾನು ಸ್ಟಡಿ ಮೆಟಿರೀಯಲ್ಸ್ ಬಳಸಿಲ್ಲ . ನಮ್ಮ ಟೀಚರ್ಸ್ ಹೇಳಿದ್ದಷ್ಟನ್ನೇ ಮಾಡ್ತಿದ್ದೆ ಎನ್ನುತ್ತಾರೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಯಶಸ್ ಗೌಡ. ಚಿಕ್ಕಬಳ್ಳಾಪುರದ ಬಾಲಗಂಗಾಧರನಾಥ ಪ್ರೌಢಶಾಲೆಯ ವಿದ್ಯಾರ್ಥಿ ಯಶಸ್ ಗೌಡ 625 ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಸಾಧಕ. ಹೆಚ್ಚು ಅಂಕ ಬರಬಹುದು ಎಂಬ ನಿರೀಕ್ಷೆಯಿತ್ತು. ನನ್ನ ಹೆಡ್ ಮಾಸ್ಟರ್ ಸಹ ಈ ಬಗ್ಗೆ ಮಾತನಾಡಿದ್ದರು. ನಿರ್ಮಲಾನಂದ ನಾಥ ಸ್ವಾಮೀಜಿ ಆಶೀರ್ವಾದದಿಂದ ಈ ಸಾಧನೆ ಸಾಧ್ಯವಾಯಿತು . ಟೈಮ್ ಮ್ಯಾನೇಜ್‌ಮೆಂಟ್ ನಾನು ಸರಿಯಾಗಿ ಮಾಡ್ತಿದ್ದೆ . ಎಲ್ಲಿಯೂ ಸಮಯ ವ್ಯರ್ಥ ಮಾಡ್ತಾ ಇರ್ಲಿಲ್ಲ . ರಾತ್ರಿ ಹೊತ್ತು 2 ತಾಸು ಶ್ರದ್ಧೆಯಿಂದ ಓಡ್ತಿದ್ದೆ. ಪರೀಕ್ಷೆ ಹತ್ತಿರವಿದ್ದಾಗ ಶಾಲೆಯಲ್ಲಿಯೇ ರಾತ್ರಿ 9 ರವರೆಗೆ ಓದಿಸ್ತಾ ಇದ್ರು . ಮನೆಗೆ ಬಂದು ರಾತ್ರಿ 11 ರವರೆಗೆ ಓಡ್ತಾ ಇದ್ದೆ . ಬೆಳಗ್ಗೆ ಮತ್ತೆ 6.30 ಕ್ಕೆ ಎದ್ದು ಓದುತ್ತಿದ್ದೆ ಎನ್ನುತ್ತಾರೆ ಯಶಸ್ ಗೌಡ.


Spread the love

About Yuva Bharatha

Check Also

ಹಿರೇಬೂದನೂರ : ಭಕ್ತರ ಸನ್ಮಾನ

Spread the loveಹಿರೇಬೂದನೂರ : ಭಕ್ತರ ಸನ್ಮಾನ ಮುರಗೋಡ : ಹಿರೇಬೂದನೂರ ಗ್ರಾಮದ ಶ್ರೀ ಸದ್ಗುರು ಸಂತ ಬಾಳುಮಾಮಾ ದೇವಸ್ಥಾನದ …

Leave a Reply

Your email address will not be published. Required fields are marked *

eight + seventeen =