Breaking News

ಅರಭಾವಿ ಮಂಡಲದ ಶಕ್ತಿ ಕೇಂದ್ರದ ಅಲ್ಪಾವಧಿ ವಿಸ್ತಾರಕರ ಸಭೆ : ಶಾಸಕ ಬಾಲಚಂದ್ರ ಜಾರಕಿಹೊಳಿಯವರ ದಾಖಲೆ ಅಂತರದ ವಿಜಯಕ್ಕೆ ಶ್ರಮಿಸಿ- ದೇಶಪಾಂಡೆ

Spread the love

ಅರಭಾವಿ ಮಂಡಲದ ಶಕ್ತಿ ಕೇಂದ್ರದ ಅಲ್ಪಾವಧಿ ವಿಸ್ತಾರಕರ ಸಭೆ : ಶಾಸಕ ಬಾಲಚಂದ್ರ ಜಾರಕಿಹೊಳಿಯವರ ದಾಖಲೆ ಅಂತರದ ವಿಜಯಕ್ಕೆ ಶ್ರಮಿಸಿ- ದೇಶಪಾಂಡೆ

ಯುವ ಭಾರತ ಸುದ್ದಿ ಗೋಕಾಕ :
ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಗೆಲುವು ನಿಶ್ಚಿತ. ಆದರೆ ಅವರ ದಾಖಲೆಯ ಗೆಲುವಿನ ಅಂತರವನ್ನು ಇಡೀ ರಾಜ್ಯವೇ ನೋಡುವಂತಾಗಲು ಕಾರ್ಯಕರ್ತರು ಶ್ರಮಿಸಬೇಕೆಂದು ಬಿಜೆಪಿ ಜಿಲ್ಲಾ ಪ್ರ.ಕಾರ್ಯದರ್ಶಿ ಸಂದೀಪ ದೇಶಪಾಂಡೆ ಹೇಳಿದರು.

ಇಲ್ಲಿನ ಎನ್ಎಸ್ಎಫ್ ಕಚೇರಿಯಲ್ಲಿ ಅರಭಾವಿ ಬಿಜೆಪಿ ಮಂಡಲದಿಂದ ವಿಜಯ ಸಂಕಲ್ಪ ಅಭಿಯಾನದ ಪ್ರಯುಕ್ತ ಜರುಗಿದ ಶಕ್ತಿ ಕೇಂದ್ರಗಳ ಪ್ರಮುಖರು ಮತ್ತು ಶಕ್ತಿ ಕೇಂದ್ರಗಳ ಅಲ್ಪಾವಧಿ ವಿಸ್ತಾರಕರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರಕಾರದ ಸಾಧನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಪ್ರತಿಯೊಬ್ಬ ಕಾರ್ಯಕರ್ತರು ದುಡಿಯಬೇಕಾದ ಅಗತ್ಯವಿದೆ ಎಂದು ತಿಳಿಸಿದರು.

ವಿಜಯ ಸಂಕಲ್ಪ ಅಂಗವಾಗಿ ಸರಕಾರದ ಸಾಧನೆಗಳನ್ನು ಬಿತ್ತರಿಸಲು ಕ್ಷೇತ್ರದ ಪ್ರತಿ ಮನೆ-ಮನೆಗೆ ತೆರಳಿ ಕರಪತ್ರಗಳನ್ನು ವಿತರಿಸಬೇಕು. ಪ್ರತಿ ಮತಗಟ್ಟೆಗಳಲ್ಲಿ ಗೋಡೆ ಬರಹ, ಮನೆಮನೆಗೆ- ಕಾರ್- ಬೈಕ್ ಗಳಿಗೆ ಸ್ಟೀಕರ್ ಗಳನ್ನು ಅಂಟಿಸಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ವಿವರಿಸುವುದರ ಮೂಲಕ ಇಲ್ಲಿನ ಶಾಸಕರ ಜನಪ್ರಿಯ ಯೋಜನೆಗಳನ್ನು ಜನರಿಗೆ ತಿಳಿಸಬೇಕು. ಜ.21 ರಿಂದ 29 ರ ವರೆಗೆ ನಡೆಯುವ ಈ ಅಭಿಯಾನದ ಯಶಸ್ಸಿಗೆ ಕಾರ್ಯಕರ್ತರು ದುಡಿಯುವಂತೆ ಅವರು ಹೇಳಿದರು.

ಅಧ್ಯಕ್ಷತೆಯನ್ನು ಮಂಡಲದ ಅಧ್ಯಕ್ಷ ಮಹಾದೇವ ಶೆಕ್ಕಿ ವಹಿಸಿದ್ದರು.

ಜಿಲ್ಲಾ ಉಪಾಧ್ಯಕ್ಷ ಬಸನಗೌಡ ಕೋಳದೂರ, ಅರಭಾವಿ ಮಂಡಲದ ವಿಸ್ತಾರಕ ವೆಂಕಟೇಶ ಲಾಳೆ, ಬಸವರಾಜ ಹಿಡಕಲ್, ದುಂಡಪ್ಪ ನಂದಗಾಂವಿ, ಪರಸಪ್ಪ ಬಬಲಿ, ಪಾಂಡುರಂಗ ಮಹೇಂದ್ರಕರ ಸೇರಿದಂತೆ ಬಿಜೆಪಿ ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

twenty − 14 =