Breaking News

ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಈರಣ್ಣ ಬೆಕಿನಾಳ ಆಯ್ಕೆ

Spread the love

ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ
ಈರಣ್ಣ ಬೆಕಿನಾಳ ಆಯ್ಕೆ

ಯುವ ಭಾರತ ಸುದ್ದಿ ಬಸವನಬಾಗೇವಾಡಿ :
ಐತಿಹಾಸಿಕ ಅಗ್ರಹಾರವಾಗಿದ್ದ ತಾಲೂಕಿನ ಮನಗೂಳಿ ಪಟ್ಟಣದಲ್ಲಿ ಡಿ.೨೫ ರಂದು ನಡೆಯಲಿರುವ ಬಸವನಬಾಗೇವಾಡಿ ತಾಲೂಕಿನ ೯ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಐತಿಹಾಸಿಕ ಅಗ್ರಹಾರವಾಗಿದ್ದ ಇಂಗಳೇಶ್ವರ ಗ್ರಾಮದ ಹಿರಿಯ ಸಾಹಿತಿ ಈರಣ್ಣ ಬೆಕಿನಾಳ ಅವರು ಆಯ್ಕೆಯಾಗಿದ್ದಾರೆ.
ಇವರು ೩೪ ವರ್ಷ ಕಾಲ ಅಂಚೆ ಇಲಾಖೆಯಲ್ಲಿ ಅಂಚೆ ಸಹಾಯಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಇವರು ತಮ್ಮ ಅಂಚೆ ಇಲಾಖೆಯ ವೃತ್ತಿಯ ಜೊತೆಗೆ ಸಾಹಿತ್ಯ ರಚನೆ, ಸಾಂಸ್ಕ್ರತಿಕ ಮತ್ತು ಜನಪದ ಕಾರ್ಯಕ್ರಮಗಳ ಸಂಘಟನೆ,ನಾಟಕ ರಚನೆ ಮತ್ತು ಪ್ರಯೋಗದಲ್ಲಿ ತೊಡಗಿಕೊಳ್ಳುವ ಪ್ರವೃತ್ತಿ ಬೆಳೆಸಿಕೊಳ್ಳುವ ಮೂಲಕ ಸಾಹಿತ್ಯ ಲೋಕದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.
ಇವರು ಸಿದ್ದಲಿಂಗ ಪ್ರಿಯ ಗೊಲ್ಲಾಳೇಶತನಯ ಎಂಬ ಅಂಕಿತ ನಾಮದೊಂದಿಗೆ ೬೦೦ ಕ್ಕೂ ಅಽಕ ಆಧುನಿಕ ವಚನಗಳನ್ನು ರಚಿಸುವ ಮೂಲಕ ಆಧುನಿಕ ವಚನಕಾರರಾಗಿ ಗುರುತಿಸಿಕೊಂಡಿದ್ದಾರೆ. ಇದುವರೆಗೂ ಇವರು ದುಡ್ಡಿನ ದುರಾಚಾರ, ಯಾರ ಮಗು, ದಲಿತೋದ್ಧಾರ ಬಸವಣ್ಣ, ಅಕ್ಕಮಹಾದೇವಿ, ಮಾಯೆ ಮಾರುಹೋದಳು, ಇಂಗಳೇಶ್ವರ ಸಿದ್ದಲಿಂಗ ಶಿವಯೋಗಿಗಳು, ಮೌನ ಸಂದೇಶ, ಪ್ರೇಮ ಗುಚ್ಛ, ಲೋಕಾತ್ಮ-ಆಧ್ಯಾತ್ಮ, ವಚೋ ವಿಸ್ತರ,ಭಾವ-ಅನುಭಾವ, ನುಡಿ-ಕನ್ನಡ ಸೇರಿದಂತೆ ಕವನ ಸಂಕಲನ, ವಚನ ಸಂಕಲನ, ನಾಟಕ, ರೂಪಕ, ಜೀವನ ಚರಿತೆ,ಸಂಪಾದನ ಕೃತಿ ಸೇರಿದಂತೆ ೨೪ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ.ಇನ್ನೂ ಮೂರು ಕೃತಿಗಳು ಅಚ್ಚಿನಲ್ಲಿವೆ.
ಇವರ ಸಾಹಿತ್ಯ ಸೇವೆಗೆ ೨೦೧೦ ರಲ್ಲಿ ಬಸವ ಸಮಿತಿಯಿಂದ ಬಿ.ಡಿ.ಜತ್ತಿ ಸ್ಮರಣೋತ್ಸವದ ಅಭಿನಂದನಾ ಪತ್ರ, ೨೦೧೧ ರಲ್ಲಿ ಬಸವ ಸಮಿತಿಯಿಂದ ಬಸವ ಜಯಂತಿ ಪ್ರಶಂಸನಾ ಪತ್ರ, ೨೦೧೧ ರಲ್ಲಿ ಆರೂಢಶ್ರೀ ಪ್ರಶಸ್ತಿ, ಸುವರ್ಣ ಕರ್ನಾಟಕ ರಾಜೋತ್ಸವ ಪ್ರಶಸ್ತಿ, ಕಾಯಕ ಯೋಗಿ, ೨೦೧೩ ಚುಟುಕು ಮಂದಾರ, ೨೦೧೪ ರಲ್ಲಿ ಬಸವ ಚೇತನ ಪ್ರಶಸ್ತಿಗಳು ಸಂದಿವೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

eighteen − twelve =