ವಿಶ್ವಕಪ್ ಕ್ರಿಕೆಟ್ : ಪಾಕಿಸ್ತಾನಕ್ಕೆ ಹೀನಾಯ ಸೋಲುಣಿಸಿದ ಭಾರತೀಯ ವೀರ ಮಹಿಳೆಯರು ಯುವ ಭಾರತ ಸುದ್ದಿ ಕೇಪ್ ಟೌನ್ : 19 ವರ್ಷದ ರಿಚಾ ಘೋಷ್ 31 ಹಾಗೂ ರೋಡ್ರಿಗಸ್ 53 ಅವರ ಅತ್ಯಮೂಲ್ಯ ಬ್ಯಾಟಿಂಗ್ ನೆರವಿನಿಂದ ಭಾರತ ಇಂದು ವನಿತೆಯರ ವಿಶ್ವ ಕಪ್ ಕ್ರಿಕೆಟ್ ನಲ್ಲಿ ಗೆಲುವು ಸಾಧಿಸಿತು. ಪಾಕಿಸ್ತಾನವನ್ನು ಏಳು ವಿಕೆಟ್ ಅಂತರದಿಂದ ಸೋಲಿಸಿತು. ಚೊಚ್ಚಲ ಪ್ರಶಸ್ತಿ ನಿರೀಕ್ಷೆಯಲ್ಲಿರುವ ಭಾರತ ತಂಡವು ಮಹಿಳೆಯರ ಟಿ 20 ವಿಶ್ವಕಪ್ …
Read More »ಯುದ್ದೋಪಾದಿಯಲ್ಲಿ ಬಿಜೆಪಿ ಬಲಪಡಿಸುವೆ : ಕಾರ್ಯಕರ್ತರಿಗೆ ರಣೋತ್ಸಾಹ ತುಂಬಿದ ರಮೇಶ ಜಾರಕಿಹೊಳಿ
ಯುದ್ದೋಪಾದಿಯಲ್ಲಿ ಬಿಜೆಪಿ ಬಲಪಡಿಸುವೆ : ಕಾರ್ಯಕರ್ತರಿಗೆ ರಣೋತ್ಸಾಹ ತುಂಬಿದ ರಮೇಶ ಜಾರಕಿಹೊಳಿ ಯುವ ಭಾರತ ಸುದ್ದಿ ಗೋಕಾಕ: ದೇಶದಲ್ಲಿ ಹಾಗೂ ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿಯಲು ಪಕ್ಷದ ಕಾರ್ಯಕರ್ತರ ನಿಷ್ಠಾವಂತರ ಸೇವೆಯೆ ಕಾರಣವೆಂದು ಮಾಜಿ ಸಚಿವ ಹಾಗೂ ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಅವರು, ರವಿವಾರದಂದು ಸಂಜೆ ನಗರದ ಮಯೂರ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಭಾರತೀಯ ಜನತಾ ಪಾರ್ಟಿಯ ಗೋಕಾಕ ವಿಧಾನಸಭಾ ಮತಕ್ಷೇತ್ರದ ಬೂತ್ …
Read More »ವೈದ್ಯ ಮಹಾಂತೇಶ ನಿಧನ
ವೈದ್ಯ ಮಹಾಂತೇಶ ನಿಧನ ಯುವ ಭಾರತ ಸುದ್ದಿ ಗೋಕಾಕ : ನಗರದ ಬಣಗಾರ ಓಣಿಯ ನಿವಾಸಿ, ಎಲುಬು ಮತ್ತು ಕೀಲುಗಳು ಆಸ್ಪತ್ರೆಯ (ಸವದತ್ತಿ ) ವೈದ್ಯರಾದ ಮಹಾಂತೇಶ ಮ ಹೊಲಿ(58) ದಿ.10 ರಂದು ಚಿಕಿತ್ಸೆ ಫಲಿಸದೆ ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ ಸೇರಿದಂತೆ ಅಪಾರ ಬಂಧು ಬಳಗ ಬಿಟ್ಟು ಅಗಲಿದ್ದಾರೆ.
Read More »ಸಂಘಟಿತ ಹೋರಾಟದಿಂದ ಸರ್ವಾಂಗೀಣ ಪ್ರಗತಿ ಸಾಧ್ಯ: ಶಾಸಕ ರಮೇಶ ಜಾರಕಿಹೊಳಿ
ಸಂಘಟಿತ ಹೋರಾಟದಿಂದ ಸರ್ವಾಂಗೀಣ ಪ್ರಗತಿ ಸಾಧ್ಯ: ಶಾಸಕ ರಮೇಶ ಜಾರಕಿಹೊಳಿ ಗೋಕಾಕದಲ್ಲಿಂದು ಕ್ಷತ್ರೀಯ ಮರಾಠಾ ಸಮಾಜದ ಸಮಾವೇಶವನ್ನು ಉದ್ಘಾಟಿಸಿದ ರಮೇಶ ಜಾರಕಿಹೊಳಿ. ಗೋಕಾಕ: ಕ್ಷತ್ರೀಯ ಮರಾಠಾ ಸಮಾಜದವರು ಸಂಘಟಿತರಾದರೆ ಜಿಲ್ಲೆಯ ೧೮ ವಿಧಾನ ಸಭಾ ಕ್ಷೇತ್ರಗಳ ಪೈಕಿ ಕನಿಷ್ಠ ೧೦ಕ್ಷೇತ್ರಗಳಲ್ಲಿ ನಿರ್ಣಾಯಕರಾಗುತ್ತಾರೆ. ಅದರಲ್ಲಿ ಮೂರು ಕ್ಷೇತ್ರಗಳಲ್ಲಿ ನಿರಾಯಾಸವಾಗಿ ಗೆಲವು ಸಾಧಿಸಬಹುದು ಎಂದು ಗೋಕಾಕ ಶಾಸಕ, ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಭಾನುವಾರದಂದು ನಗರದ ನ್ಯೂ ಇಂಗ್ಲೀಷ ಶಾಲೆಯ ಆವರಣದಲ್ಲಿ …
Read More »ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರು ಘೋಷಣೆ ಮಾಡಿದ ಯಡಿಯೂರಪ್ಪ
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರು ಘೋಷಣೆ ಮಾಡಿದ ಯಡಿಯೂರಪ್ಪ ಯುವ ಭಾರತ ಸುದ್ದಿ ಶಿವಮೊಗ್ಗ: ಇಲ್ಲಿನ ಸೋಗಾನೆ ವಿಮಾನ ನಿಲ್ದಾಣಕ್ಕೆ ‘ರಾಷ್ಟ್ರಕವಿ ಕುವೆಂಪು ಅವರ ಹೆಸರು ಇಡಲಾಗುವುದು ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್ ಯಡಿಯೂರಪ್ಪ ಹೇಳಿದರು. ನಗರದಲ್ಲಿ ಭಾನುವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ನಾಡು ಕಂಡ ಶ್ರೇಷ್ಠ ಕವಿ ಕುವೆಂಪು ಅವರ ಕೊಡುಗೆ ಅಪಾರ. ಆದ್ದರಿಂದ ಅವರ ಹೆಸರೇ ಸೂಕ್ತ ಎಂದು ತೀರ್ಮಾನಿಸಲಾಗಿದೆ ಎಂದರು. …
Read More »ಆಂಧ್ರಪ್ರದೇಶ ರಾಜ್ಯಪಾಲರಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ದಕ್ಷಿಣ ಕನ್ನಡದ ಎಸ್.ಅಬ್ದುಲ್ ನಜೀರ್ ನೇಮಕ !
ಆಂಧ್ರಪ್ರದೇಶ ರಾಜ್ಯಪಾಲರಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ದಕ್ಷಿಣ ಕನ್ನಡದ ಎಸ್.ಅಬ್ದುಲ್ ನಜೀರ್ ನೇಮಕ ! ಯುವ ಭಾರತ ಸುದ್ದಿ ದೆಹಲಿ : ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬೆಳುವಾಯಿ ಮೂಲದವರಾದ ಕೆಲ ದಿನಗಳ ಹಿಂದಷ್ಟೇ ನಿವೃತ್ತರಾಗಿದ್ದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಅವರನ್ನು ಆಂಧ್ರಪ್ರದೇಶದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. 1958ರ ಜನವರಿ 5ರಂದು ಜನಿಸಿದ್ದ ಅಬ್ದುಲ್ ನಜೀರ್ ಫೆಬ್ರವರಿ 18, 1983 ರಂದು ವಕೀಲರಾಗಿ …
Read More »ಮಹಾರಾಷ್ಟ್ರದ ನೂತನ ರಾಜ್ಯಪಾಲರಾಗಿ ರಮೇಶ ಬೈಸ್
ಮಹಾರಾಷ್ಟ್ರದ ನೂತನ ರಾಜ್ಯಪಾಲರಾಗಿ ರಮೇಶ ಬೈಸ್ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ರಾಜೀನಾಮೆಯನ್ನು ರಾಷ್ಟ್ರಪತಿಗಳು ಇಂದು ಅಂಗೀಕರಿಸಿದ್ದಾರೆ. ಅವರ ಸ್ಥಾನಕ್ಕೆ ಜಾರ್ಖಂಡ್‌ನ ರಾಜ್ಯಪಾಲ ರಮೇಶ್ ಬೈಸ್ ಮಹಾರಾಷ್ಟ್ರದ ನೂತನ ರಾಜ್ಯಪಾಲರಾಗಲಿದ್ದಾರೆ. ಜಾರ್ಖಂಡ್‌ಗೆ ಸಿ.ಪಿ. ರಾಧಾಕೃಷ್ಣನ್ , ಅರುಣಾಚಲ ಪ್ರದೇಶಕ್ಕೆ ಕೆ.ಟಿ.ಪರ್ನಯ್ಕ್ , ಸಿಕ್ಕಿಂಗೆ ಎಲ್.ಪಿ. ಆಚಾರ್ಯ , ಅಸ್ಸಾಂಗೆ ಜಿ.ಸಿ.ಕಟಾರಿಯಾ , ಹಿಮಾಚಲ ಪ್ರದೇಶಕ್ಕೆ ಶಿವಪ್ರತಾಪ್ ಶುಕ್ಲಾ ಹೊಸ ರಾಜ್ಯಪಾಲರಾಗಲಿದ್ದಾರೆ. ಯುವ ಭಾರತ ಸುದ್ದಿ ಮುಂಬಯಿ : ಮಹಾರಾಷ್ಟ್ರ …
Read More »ಸಂಬಂಧ
ಸಂಬಂಧ ————- ಇರದಿದ್ದರೆ, ನೆನಪಿಗೆ ಮರೆವು, ಮರೆವಿಗೆ ನೆನಪು, ಹುಚ್ಚನಾಗುತ್ತಿದ್ದ ಮನುಷ್ಯ; ಎರಡೂ ಕೂಡಿಯೆ ರೂಪಿಸುತ್ತವೆ ಅವನ ಮುಂಭವಿಷ್ಯ. ಡಾ. ಬಸವರಾಜ ಸಾದರ.
Read More »BREAKING NEWS ಕೊನೆಗೂ ಪತ್ತೆ : ಅಪಹರಣಕ್ಕೊಳಗಾದ ಉದ್ಯಮಿ ಶವವಾಗಿ ಪತ್ತೆ ?
BREAKING NEWS ಕೊನೆಗೂ ಪತ್ತೆ : ಅಪಹರಣಕ್ಕೊಳಗಾದ ಉದ್ಯಮಿ ಶವವಾಗಿ ಪತ್ತೆ ? ಯುವ ಭಾರತ ಸುದ್ದಿ ಗೋಕಾಕ : ಶುಕ್ರವಾರ ಸಂಜೆ ಅಪಹರಣಕ್ಕೆ ಒಳಗಾದ ಉದ್ಯಮಿಯ ಶವ ಕೊಲೆಯಲ್ಲಿ ಪರ್ಯವಸನಗೊಂಡಿದೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ. ರಾಜು/ಮುನ್ನಾ ಝಂವರ ಎಂಬ ಗೋಕಾಕ ನಗರದ ಉದ್ಯಮಿ ಶುಕ್ರವಾರ ಸಂಜೆ 6:00 ರ ಸುಮಾರಿಗೆ ನಗರದ ಸಿಟಿ ಹೆಲ್ತ್ ಕೇರ್ ವೈದ್ಯ ಸಚಿನ್ ಶಿರಗಾಂವಿ ಜೊತೆ ಸೇರಿ ಮಾತುಕತೆ ನಡೆಸಿದ ನಂತರ …
Read More »15 ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ
15 ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ ಯುವ ಭಾರತ ಸುದ್ದಿ ಬೆಂಗಳೂರು: 15 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಶನಿವಾರ (ಫೆ. 11) ಆದೇಶ ಹೊರಡಿಸಿದೆ. ಈ ಸಂಬಂಧ ಅಧಿಸೂಚನೆ ಹೊರಡಿಸಿದ್ದು, ಬಿಡಿಎ ಆಯುಕ್ತರಾಗಿ ಜಿ. ಕುಮಾರ್ ನಾಯಕ್ ಅವರನ್ನು ನೇಮಿಸಲಾಗಿದೆ. ವರ್ಗಾವಣೆ ಆಗಿರುವ ಐಎಎಸ್ ಅಧಿಕಾರಿಗಳ ಪಟ್ಟಿ ಈ ಕೆಳಗಿನಂತಿದೆ. ಡಾ. ರಮಣ ರೆಡ್ಡಿ ಇ.ವಿ. ಐಎಎಸ್: ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಸರ್ಕಾರ ಮತ್ತು ಅಭಿವೃದ್ಧಿ …
Read More »