Breaking News

Yuva Bharatha

ಮಂಡ್ಯದಲ್ಲಿ ಮುಂದಿನ 87 ನೇ ಅಖಿಲ ಭಾರತ ಕನ್ನಡ ‌ಸಾಹಿತ್ಯ ಸಮ್ಮೇಳನ

ಮಂಡ್ಯದಲ್ಲಿ ಮುಂದಿನ 87 ನೇ ಅಖಿಲ ಭಾರತ ಕನ್ನಡ ‌ಸಾಹಿತ್ಯ ಸಮ್ಮೇಳನ ಯುವ ಭಾರತ ಸುದ್ದಿ ಹಾವೇರಿ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕ್ಕರೆ ನಾಡು ಆತಿಥ್ಯ ಒದಗಿಸಲಿದೆ. ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ‌ಸಾಹಿತ್ಯ ಸಮ್ಮೇಳನ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿದೆ. ಬಳ್ಳಾರಿ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಜಿಲ್ಲೆಗಳ ಅಧ್ಯಕ್ಷರು ಮುಂದಿನ ಸಾಹಿತ್ಯ ಸಮ್ಮೇಳನಕ್ಕೆ ಆತಿಥ್ಯ …

Read More »

ಕನ್ನಡಪ್ರಭ ಸತ್ಯ ಎಂದೇ ಖ್ಯಾತರಾಗಿದ್ದ ಮಾಜಿ ಸಂಪಾದಕ ಕೆ.ಸತ್ಯನಾರಾಯಣ ವಿಧಿವಶ

ಕನ್ನಡಪ್ರಭ ಸತ್ಯ ಎಂದೇ ಖ್ಯಾತರಾಗಿದ್ದ ಮಾಜಿ ಸಂಪಾದಕ ಕೆ.ಸತ್ಯನಾರಾಯಣ ವಿಧಿವಶ ಯುವ ಭಾರತ ಸುದ್ದಿ ಬೆಂಗಳೂರು :                  ಹಿರಿಯ ಪತ್ರಕರ್ತ, ಕನ್ನಡ ಪ್ರಭ ಮಾಜಿ ಸಂಪಾದಕ ಕೆ‌. ಸತ್ಯನಾರಾಯಣ(87) ಭಾನುವಾರ ಬೆಳಗ್ಗೆ ನಿಧನರಾದರು. ಬೆಂಗಳೂರಿನ ಜಯನಗರದ ಎಲ್ಐಸಿ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಅವರು ನಿಧನರಾಗಿದ್ದಾರೆ. ತಾಯ್ನಾಡು ಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಕಾಲಿಟ್ಟಿದ್ದ ಅವರು ಕನ್ನಡಪ್ರಭದಲ್ಲಿ ಮೂರು ದಶಕಗಳಿಗೂ ಹೆಚ್ಚು …

Read More »

ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭೀಮಶಂಕರ ಬಿಸನಾಳಗೆ 2 ಪದಕ

ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭೀಮಶಂಕರ ಬಿಸನಾಳಗೆ 2 ಪದಕ ಯುವ ಭಾರತ ಸುದ್ದಿ ದೇವರಹಿಪ್ಪರಗಿ :        ನ್ಯಾಷನಲ್ ಸ್ಪೋರ್ಟ್ಸ್ ಫೆಡರೇಶನ್ ಆಫ್ ಇಂಡಿಯಾ ಅಂಡರ್-19,ಜ.7 ಮಧ್ಯಪ್ರದೇಶದಲ್ಲಿ ಜರುಗಿದ ಓಪನ್ ನ್ಯಾಷನಲ್ ಚಾಂಪಿಯನ್ ಶಿಪ್-2023ನಲ್ಲಿ ರಾಷ್ಟ್ರಮಟ್ಟದ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಬೆಳ್ಳಿ ಹಾಗೂ 3000 ಮೀಟರ್ ಓಟದಲ್ಲಿ ಬಂಗಾರದ ಪದಕ ಗೆಲ್ಲುವ ಮೂಲಕ ರಾಜ್ಯ ಹಾಗೂ ಜಿಲ್ಲೆಗೆ ಹೆಸರು ತಂದಿದ್ದಾರೆ. ತಾಲೂಕಿನ ಪಡಗಾನೂರ ಗ್ರಾಮದ ಖ್ಯಾತ ಹಾಡ್ಕಿ …

Read More »

ಸಾಹಿತ್ಯ ಸಮ್ಮೇಳನ : ಕರದಂಟು ನಾಡಿಗೆ ಕೂಡಿ ಬಾರದ ಯೋಗ !

ಸಾಹಿತ್ಯ ಸಮ್ಮೇಳನ : ಕರದಂಟು ನಾಡಿಗೆ ಕೂಡಿ ಬಾರದ ಯೋಗ ! ಬೆಟಗೇರಿ ಕೃಷ್ಣಶರ್ಮ, ಬಸವರಾಜ ಕಟ್ಟಿಮನಿ ಅವರಂತಹ ಮೇರು ಸಾಹಿತಿಗಳನ್ನು ಗೋಕಾವಿ, ಕುಂದರನಾಡು ಕನ್ನಡ ನಾಡಿಗೆ ನೀಡಿದೆ. ಆದರೆ, ಕನ್ನಡ ಸಾಹಿತ್ಯ ಪರಿಷತ್ತು ಮಾತ್ರ ಕರದಂಟು ನಾಡಿನಲ್ಲಿ ಇದುವರೆಗೆ ಸಾಹಿತ್ಯ ಸಮ್ಮೇಳನ ನಡೆಸಲು ಆಸಕ್ತಿ ವಹಿಸದೆ ಇರುವುದು ಬೇಸರದ ಸಂಗತಿ. ಯುವ ಭಾರತ ಸುದ್ದಿ ಬೆಳಗಾವಿ : ಕನ್ನಡ ಸಾಹಿತ್ಯ ಪರಿಷತ್ತು ಇದುವರೆಗೆ ಒಟ್ಟು 86 ಅಖಿಲ ಭಾರತ …

Read More »

ಸೂರ್ಯ ಭರ್ಜರಿ ಶತಕ !

ಸೂರ್ಯ ಭರ್ಜರಿ ಶತಕ ! ಯುವ ಭಾರತ ಸುದ್ದಿ ರಾಜ್ ಕೋಟ್ : ವಿಶ್ವದ ನಂಬರ್ ಒನ್ ಕ್ರಿಕೆಟಿಗ ಭಾರತದ ಸೂರ್ಯ ಕುಮಾರ್ ಯಾದವ್ ಭರ್ಜರಿ ಶತಕ ಬಾರಿಸಿದ್ದಾರೆ. ಶ್ರೀಲಂಕಾ ವಿರುದ್ಧ ಟಿ20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಅವರು ಇಂದು 9 ಸಿಕ್ಸರ್ ಬಾರಿಸಿದ್ದಾರೆ. ಆಲ್ರೌಂಡರ್ ಆಕ್ಷರ್ ಪಟೇಲ್ ಇಂದು ಸಹ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಅವರು ನಾಲ್ಕು ಬೌಂಡರಿ ನೆರವಿನಿಂದ 21 ರನ್ ಗಳಿಸಿದ್ದಾರೆ. ಶುಭಮನ್ ಗಿಲ್ 46 ರನ್, …

Read More »

ಈರವ್ವ ಹಿರೇಮಠ ಇನ್ನಿಲ್ಲ

ಈರವ್ವ ಹಿರೇಮಠ ಇನ್ನಿಲ್ಲ ಯುವ ಭಾರತ ಸುದ್ದಿಗೋಕಾಕ :                  ತಾಲೂಕಿನ ಕಪರಟ್ಟಿ ಕಳ್ಳಿಗುದ್ದಿ ಶ್ರೀಮಠದ ಸ್ವಾಮೀಜಿಗಳಾದ ಶ್ರೀ ಬಸವರಾಜ ಸ್ವಾಮಿಯವರ ಮಾತೋಶ್ರೀ ಶ್ರೀಮತಿ ಈರವ್ವ ಮಾದೇವಯ್ಯ ಹಿರೇಮಠ (80) ದಿ. 7ರಂದು ಲಿಂಗೈಕ್ಯರಾಗಿರುತ್ತಾರೆ. ಮಾತೋಶ್ರೀ ಯವರು ಪುತ್ರ, ಇಬ್ಬರು ಪುತ್ರಿಯರು, ಸೊಸೆ, ಮೊಮ್ಮಕ್ಕಳು, ಶ್ರೀಮಠದ ಅಪಾರ ಸದ್ಬಕ್ತರನ್ನು ಬಿಟ್ಟು ಅಗಲಿರುತ್ತಾರೆ.

Read More »

ಹಿಂದೂ ಸಂಘಟನೆ ಕಾರ್ಯಕರ್ತ ರವಿ ಕೋಕಿತ್ಕರ್ ಮೇಲೆ ಫೈರಿಂಗ್

ಹಿಂದೂ ಸಂಘಟನೆ ಕಾರ್ಯಕರ್ತ ರವಿ ಕೋಕಿತ್ಕರ್ ಮೇಲೆ ಫೈರಿಂಗ್ ಯುವ ಭಾರತ ಸುದ್ದಿ ಬೆಳಗಾವಿ : ಹಿಂದೂಪರ ಸಂಘಟನೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಯುವನಾಯಕ ರವಿ ಕೋಕಿತ್ಕರ್ ಮೇಲೆ ಇಂದು ಸಂಜೆ ಹಿಂಡಲಗಾ ಗ್ರಾಮದಲ್ಲಿ ಫೈರಿಂಗ್ ಮಾಡಲಾಗಿದೆ. ಅವರು ಇಂದು ಸಂಜೆ ಕಾರಿನಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಫೈರಿಂಗ್ ಮಾಡಲಾಗಿದೆ. ಅವರ ಕುತ್ತಿಗೆ ಗುಂಡು ತಗಲಿದೆ. ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ.

Read More »

ಸದಾಶಿವ ಆಯೋಗದ ವರದಿ ಜಾರಿ ವಿರೋಧಿಸಿ ಜ.10ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ.!

ಸದಾಶಿವ ಆಯೋಗದ ವರದಿ ಜಾರಿ ವಿರೋಧಿಸಿ ಜ.10ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ.! ಗೋಕಾಕ: ಅಸಂವಿಧಾನಕ ಹಾಗೂ ಅವ್ಶೆಜ್ಞಾನಿಕ ಅಂಶಗಳನ್ನು ಒಳಗೊಂಡಿರುವ ಸದಾಶಿವ ಆಯೋಗದ ವರದಿ ಜಾರಿಗೊಳಿಸುವದನ್ನು ವಿರೋಧಿಸಿ ಜ.೧೦ರಂದು ಬೆಂಗಳೂರಿನ ಮೆಜೆಸ್ಟಿಕ ರೈಲು ನಿಲ್ದಾಣದಲ್ಲಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಬೆಳಗಾವಿ ಜಿಲ್ಲಾ ಭೋವಿ ಸೋಶಿಯಲ್ ವೇಲ್ಪೇರ್ ಸೋಸೈಟಿಯ ಅಧ್ಯಕ್ಷ ಲಕ್ಷö್ಮಣ ಗಾಡಿವಡ್ಡರ ಹೇಳಿದರು. ಅವರು, ಶನಿವಾರದಂದು ಸಂಜೆ ನಗರದಲ್ಲಿ ಸದಾಶಿವ ಆಯೋಗದ ವರದಿ ಜಾರಿಗೊಳಿಸುವದನ್ನು ವಿರೋಧಿಸಿ …

Read More »

ಕಾರ್ಮಿಕರ ಏಳಿಗೆಗಾಗಿ ಇಲಾಖೆ ನಿರಂತರವಾಗಿ ಶ್ರಮಿಸಲಿದೆ; ವೆಂಕಟೇಶ ಶಿಂದಿಹಟ್ಟಿ

ಕಾರ್ಮಿಕರ ಏಳಿಗೆಗಾಗಿ ಇಲಾಖೆ ನಿರಂತರವಾಗಿ ಶ್ರಮಿಸಲಿದೆ; ವೆಂಕಟೇಶ ಶಿಂದಿಹಟ್ಟಿ ಯುವ ಭಾರತ ಸುದ್ದಿ ಬೆಳಗಾವಿ: ರಾಷ್ಟ್ರದ ಪ್ರಗತಿಯಲ್ಲಿ ಕಾರ್ಮಿಕರ ಪಾತ್ರ ಅತ್ಯಂತ ಪ್ರಮುಖವಾದದ್ದು, ಪ್ರಸ್ತುತ ದಿನಮಾನಗಳಲ್ಲಿ ಅವರ ಸೇವೆಯನ್ನು ಪರಿಗಣಿಸಿ ಸರ್ಕಾರ ಸೌಲಭ್ಯಗಳ ಭತ್ಯೆ ಹೆಚ್ಚಿಸಿರುವುದು ಸ್ವಾಗತಾರ್ಹ ನಡೆ ಎಂದು ಕಾರ್ಮಿಕ ಉಪ ಆಯುಕ್ತ ವೆಂಕಟೇಶ ಅಪ್ಪಯ್ಯ ಶಿಂದಿಹಟ್ಟಿ ಸಂತಸ ವ್ಯಕ್ತಪಡಿಸಿದರು. ನಗರದ ಕಾರ್ಮಿಕ ಭವನದಲ್ಲಿ ರಾಜಾ ಲಖಮಗೌಡ ಕಾನೂನು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ “ಕಾರ್ಮಿಕ ರಕ್ಷಣೆಯಲ್ಲಿ ಕಾನೂನು” ಎಂಬ ಎರಡು …

Read More »

ಅಂತರ್ ವಿವಿ ಅಥ್ಲೆಟಿಕ್ಸ್ : ಕೋಚ್/ ಮ್ಯಾನೇಜರ್ ಆಗಿ ರಿಚಾ ರಾವ್ ನೇಮಕ

ಅಂತರ್ ವಿವಿ ಅಥ್ಲೆಟಿಕ್ಸ್ : ಕೋಚ್/ ಮ್ಯಾನೇಜರ್ ಆಗಿ ರಿಚಾ ರಾವ್ ನೇಮಕ ಯುವ ಭಾರತ‌ ಸುದ್ದಿ ಬೆಳಗಾವಿ : ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಅಥ್ಲೆಟಿಕ್ಸ್ (ಪುರುಷ ಮತ್ತು ಮಹಿಳಾ) ತಂಡಗಳು ನೈಋತ್ಯ ವಲಯ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸಲು ಚೆನ್ನೈನ ಟಿಎನ್ ಪಿಇಎಸ್ ವಿಶ್ವವಿದ್ಯಾನಿಲಯಕ್ಕೆ ತೆರಳುತ್ತಿವೆ. ಜನವರಿ 9 ರಿಂದ 12 ರವರೆಗೆ ಚಾಂಪಿಯನ್‌ಶಿಪ್ ನಡೆಯಲಿದ್ದು, ಬೆಳಗಾವಿ ಬಿ.ವಿ.ಬೆಲ್ಲದ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಡಾ. ರಿಚಾ …

Read More »