Breaking News

ಕನ್ನಡಪ್ರಭ ಸತ್ಯ ಎಂದೇ ಖ್ಯಾತರಾಗಿದ್ದ ಮಾಜಿ ಸಂಪಾದಕ ಕೆ.ಸತ್ಯನಾರಾಯಣ ವಿಧಿವಶ

Spread the love

ಕನ್ನಡಪ್ರಭ ಸತ್ಯ ಎಂದೇ ಖ್ಯಾತರಾಗಿದ್ದ ಮಾಜಿ ಸಂಪಾದಕ ಕೆ.ಸತ್ಯನಾರಾಯಣ ವಿಧಿವಶ

ಯುವ ಭಾರತ ಸುದ್ದಿ ಬೆಂಗಳೂರು :                  ಹಿರಿಯ ಪತ್ರಕರ್ತ, ಕನ್ನಡ ಪ್ರಭ ಮಾಜಿ ಸಂಪಾದಕ ಕೆ‌. ಸತ್ಯನಾರಾಯಣ(87) ಭಾನುವಾರ ಬೆಳಗ್ಗೆ ನಿಧನರಾದರು. ಬೆಂಗಳೂರಿನ ಜಯನಗರದ ಎಲ್ಐಸಿ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಅವರು ನಿಧನರಾಗಿದ್ದಾರೆ. ತಾಯ್ನಾಡು ಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಕಾಲಿಟ್ಟಿದ್ದ ಅವರು ಕನ್ನಡಪ್ರಭದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿದ್ದರು. ಕನ್ನಡದ ಕೆಲ ಹೆಸರಾಂತ ಪತ್ರಕರ್ತರನ್ನು ಅವರು ರೂಪಿಸಿದ್ದರು.

ಕನ್ನಡಪ್ರಭ ಸತ್ಯ ಎಂದೇ ಅವರು ಖ್ಯಾತರಾಗಿದ್ದ ಅವರು ಕನ್ನಡ ಪತ್ರಿಕೋದ್ಯಮದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದರು. ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಮನೆಯಂಗಳದಲ್ಲಿ ಮನೆದುಂಬಿ ಕಾರ್ಯಕ್ರಮದಲ್ಲಿ ಕೆ. ಸತ್ಯನಾರಾಯಣ ಅವರನ್ನು ಸತ್ಕರಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ್ದ ಅವರು ಪತ್ರಕರ್ತ ಎಂದ ಮೇಲೆ ಪತ್ರಕರ್ತ ಅಷ್ಟೇ. ಕಿರಿಯ, ಹಿರಿಯ ಎಂದು ಹೇಳುವುದು ನನಗೆ ಸರಿ ಕಾಣುವುದಿಲ್ಲ. ನಮ್ಮ ಕಾಲದಲ್ಲಿ ಪತ್ರಕರ್ತರಿಗೆ ಇಷ್ಟು ಅನುಕೂಲ ಇರಲಿಲ್ಲ. ಕಷ್ಟಪಟ್ಟು ವರದಿಗಾರಿಕೆ, ಪತ್ರಿಕೆ ಕೆಲಸ ಮಾಡುತ್ತಿದ್ದೆವು. ಪತ್ರಕರ್ತರಿಗೆ ಸಂಬಳ ಕಡಿಮೆ ಇತ್ತು. ಈಗ ಪೈಪೋಟಿ ಹೆಚ್ಚಾಗಿದೆ. ಪತ್ರಕರ್ತರಿಗೆ ಯೋಗ್ಯ ಸಂಬಳ ಸಿಗುತ್ತಿದೆ. ಹಾಗೆ ನೋಡಿದರೆ ಪತ್ರಕರ್ತರ ಪಾಲಿಗೆ ಈಗ ಒಳ್ಳೆಯ ಕಾಲ ಬಂದಿದೆ. ಅವಕಾಶ ಹೆಚ್ಚಿಸಿಕೊಂಡು ಬೆಳೆಯಲು ಅವಕಾಶವಿದೆ ಎಂದಿದ್ದರು.

ಕನ್ನಡಪ್ರಭ ಪತ್ರಿಕೆಗೆ ಹೆಸರು :
1967 ರಲ್ಲಿ ಪತ್ರಿಕೆ ಪ್ರಾರಂಭಿಸಬೇಕು ಎಂದು ಎಲ್ಲರೂ ಟೈಟಲ್ ಗಾಗಿ ಚರ್ಚೆ ನಡೆಸಿದ್ದರು. ಆಗ ನಾನೆ ಕನ್ನಡ ಪ್ರಭ ಎನ್ನುವ ಹೆಸರು ಸೂಚಿಸಿದೆ. ನೋಡಿದರೆ, ದೆಹಲಿಯಿಂದ ಕನ್ನಡ ಪ್ರಭ ಹೆಸರೇ ಒಪ್ಪಿಗೆಯಾಗಿ ಬಂತು ಎಂದು ಹಳೆಯ ನೆನಪು ಮೆಲುಕು ಹಾಕಿದ್ದರು.

ಪತ್ರಕರ್ತರು ಯಾರ ಮುಲಾಜಿಗೂ ಒಳಗಾಗಬಾರದು. ಸರ್ಕಾರ ಕೂಡ ಪತ್ರಕರ್ತರ ವೃತ್ತಿಯಲ್ಲಿ ಮೂಗು ತೂರಿಸಬಾರದು. ಹಸ್ತಕ್ಷೇಪ ಹೆಚ್ಚಿದರೆ ಪತ್ರಕರ್ತರ ಸ್ವಾತಂತ್ರ್ಯಕ್ಕೆ ಧಕ್ಕೆ ಆಗುತ್ತದೆ. ‌ಅದನ್ನು ಯಾರೂ ಮಾಡಬಾರದು ಎಂದು ಅಂದು ಅವರು ತಮ್ಮ ಸರ್ಕಾರಕ್ಕೆ ಪ್ರತಿ ಪ್ರತಿಕ್ರಿಯಾಗಿ ಅವರು ಮಾತನಾಡಿದ್ದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

eighteen − thirteen =