Breaking News

ಅಧಿಕಾರದ ಆಸೆಗಾಗಿ ನಾನು ಬಿಜೆಪಿಗೆ ಬಂದವನಲ್ಲ-ಸಚಿವ ರಮೇಶ್ ಜಾರಕಿಹೊಳಿ!

Spread the love

ಅಧಿಕಾರದ ಆಸೆಗಾಗಿ ನಾನು ಬಿಜೆಪಿಗೆ ಬಂದವನಲ್ಲ: ಸಚಿವ ರಮೇಶ್ ಜಾರಕಿಹೊಳಿ

ಯುವ ಭಾರತ ಸುದ್ದಿ, ಗೋಕಾಕ: ಅಧಿಕಾರದ ಆಸೆಗಾಗಿ ನಾನು ಬಿಜೆಪಿಗೆ ಬಂದವನಲ್ಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೀತ ಶಾ ಅವರ ಆಡಳಿತ ವೈಖರಿ, ಅವರ ತತ್ವಾದರ್ಶಗಳನ್ನು ಮನಗಂಡು ನಾನು ಬಿಜೆಪಿ ಪಕ್ಷ ಸೇರಿದ್ದೆನೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.

ನಗರದ ಸಚಿವರ ಕಾರ್ಯಾಲಯದ ಆವರಣದಲ್ಲಿ ರವಿವಾರದಂದು ನಡೆದ ಬಿಜೆಪಿ ಬೆಂಬಲಿತ ನೂತನ ಗ್ರಾಮ ಪಂಚಾಯತ ಸದಸ್ಯರಿಗೆ ಏರ್ಪಡಿಸಲಾದ ಸತ್ಕಾರ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಭಿವೃದ್ಧಿಯ ಹಿತದೃಷ್ಠಿಯಿಂದ ಬಿಜೆಪಿ ಪಕ್ಷವನ್ನು ಸೇರಿರುವದಾಗಿ ಎಂದರು.

ಬೆಳಗಾವಿ ಲೋಕಸಭಾ ಉಪಚುನಾವಣಾ ಬಿಜೆಪಿ ಟಿಕೆಟ್ ದಿ.ಸುರೇಶ ಅಂಗಡಿ ಕುಟುಂಬದವರಿಗೆ ನೀಡಬೇಕು. ದಿ.ಸುರೇಶ ಅಂಗಡಿ ಅವರ ಪತ್ನಿ ಮಂಗಲಾ ಅಂಗಡಿ ಅಥವಾ ಕುಟುಂಬದ ಯಾರಿಗಾದರೂ ಟೀಕೇಟ್ ನೀಡಬೇಕು ಎಂಬುವುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ಆದ್ರೆ ವರಿಷ್ಠರು ಏನೇ ನಿರ್ಧಾರ ತೆಗೆದುಕೊಂಡರು ಅದಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ತಿಳಿಸಿದ್ದಾರೆ.
ಪಕ್ಷದ ಕಾರ್ಯಕರ್ತರ ಗೊಂದಲದಲ್ಲಿ ಚಿಕ್ಕೋಡಿ, ನಿಪ್ಪಾಣಿ ಕ್ಷೇತ್ರಗಳಲ್ಲಿ ಕಾಂಗ್ರೇಸ್ ಮುನ್ನಡೆ ಸಾಧಿಸಿರಬಹುದು. ನಾನು ಮನಸ್ಸು ಮಾಡಿದರೆ ೨೪ ಗಂಟೆಗಳಲ್ಲಿ ಚಿಕ್ಕೋಡಿ, ನಿಪ್ಪಾಣಿ ಕ್ಷೇತ್ರಗಳಲ್ಲಿ ಗ್ರಾಪಂ ಸದಸ್ಯರನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಬಹುದು. ಕಾಂಗ್ರೇಸ ಮುಖಂಡರು ಇದು ದೊಡ್ಡ ಸಾಧನೆ ಎಂದು ಬಿಗಬಾರದು ಎಂದರು.

ಬೆಳಗಾವಿ ಜಿಲ್ಲೆಯ ಮೂಲೆ ಮೂಲೆಯಲ್ಲಿ ಬಿಜೆಪಿ ಪಕ್ಷವನ್ನು ಗಟ್ಟಿಗೊಳಿಸುವ ಎಲ್ಲ ಪ್ರಯತ್ನವನ್ನು ಮಾಡಲು ಸಿದ್ಧರಿದ್ದೇವೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾದ ನೂತನ ಸದಸ್ಯರು ಗ್ರಾಮ ಮಟ್ಟದಲ್ಲಿ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ, ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಈ ವೇದಿಕೆಯ ಮೇಲೆ ಮಾಜಿ ಶಾಸಕ ಎಮ್ ಎಲ್ ಮುತ್ತೆನ್ನವರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ, ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮಣ್ಣವರ, ನಗರಸಭೆ ಅಧ್ಯಕ್ಷ ಜಯಾನಂದ ಹುಣಶ್ಯಾಳ, ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಪ್ರೇಮಾ ಭಂಡಾರಿ, ಮುಖಂಡರುಗಳಾದ ಶಾಮಾನಂದ ಪೂಜೇರಿ, ಸಿದ್ದಲಿಂಗ ದಳವಾಯಿ, ಡಿ ಎಮ್ ದಳವಾಯಿ, ಸುರೇಶ ಪಾಟೀಲ, ಸಿದ್ಧಗೌಡ ಪಾಟೀಲ, ಜ್ಯೋತಿ ಕೋಲಾರ ಸೇರಿದಂತೆ ಅನೇಕರು ಇದ್ದರು.

 


Spread the love

About Yuva Bharatha

Check Also

ಅಕ್ಕಾ ಅಂದ್ರೆ ಅವರೇ ಅಂತ ಯಾಕೆ ತಿಳ್ಕೊತೀರಿ, ಪೆಗ್ ಅಂದ್ರೆ ಎನರ್ಜಿ ಡ್ರಿಂಕ್-ಮಾಜಿ ಶಾಸಕ ಸಂಜಯ ಪಾಟೀಲ.!

Spread the loveನಾನು ಭಾಷಣದಲ್ಲಿ ಹೆಬ್ಬಾಳಕರ ಹೆಸರನ್ನೆ ತಗೊಂಡಿಲ್ಲ. -ಮಾಜಿ ಶಾಸಕ ಸಂಜಯ ಪಾಟೀಲ.! ಯುವಭಾರತ ಸುದ್ದಿ ಬೆಳಗಾವಿ: ನಾನು …

Leave a Reply

Your email address will not be published. Required fields are marked *

1 + seventeen =