Breaking News

ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆಗೆ ಭೂಮಿ ಪೂಜೆ

Spread the love

ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆಗೆ ಭೂಮಿ ಪೂಜೆ

ಯುವ ಭಾರತ ಸುದ್ದಿ ಬಸವನಬಾಗೇವಾಡಿ: ಇಂದು ದೇಶ 75ವರ್ಷ ಬದುಕಿದ್ದರೆ ಅದಕ್ಕೆ ಡಾ. ಬಾಬಾಸಾಹೇಬ ಅಂಬೇಡ್ಕರ ನೀಡಿರುವ ಸಂವಿಧಾನ ಸಾಕ್ಷಿಯಾಗಿದೆ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.
ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ಡಾ.ಡಿ.ಜೆ ಸಾಗರ ಬಣ) ಗ್ರಾಮ ಶಾಖೆ ಉದ್ಘಾಟನೆ ಹಾಗೂ ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ಮೂರ್ತಿ ಪ್ರತಿಷ್ಠಾಪನದ ಭೂಮಿ ಪೂಜೆ ಅಡಿಗಲ್ಲು ಸಮಾರಂಭ ನೇರವರಿಸಿ ಮಾತನಾಡಿದ ಅವರು ದೇಶಕ್ಕೆ ಉತ್ತಮ ಸಂವಿಧಾನ ನೀಡುವ ಮೂಲಕ ಸಮಾನತೆಯನ್ನು ನೀಡಿದವರು ಬಾಬಾಸಾಹೇಬ ಅವರು.ಸಮಾಜವನ್ನ ಕಟ್ಟಬೇಕಾದರೆ ಸಂವಿಧಾನ ಮುಖ್ಯವಾಗುತ್ತದೆ.
ಪ್ರತಿಭೆ ಬಡವರ ಮನೆಯಲ್ಲಿ ಹುಟ್ಟುತ್ತದೆ ಎನ್ನುವುದಕ್ಕೆ ಬಾಬಾಸಾಹೇಬ ಸಾಕ್ಷಿ ಆಗಿದ್ದಾರೆ.ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡುವ ಸಂಸದರಿಗೆ ಭವಿಷ್ಯದಲ್ಲಿ ಅಂತಹ ಹೇಳಿಕೆ ನೀಡಿದಂತೆ ಕ್ರಮ ಕೈಗೊಳ್ಳಬೇಕಾದ ಬಿಜೆಪಿ ಕೇವಲ ನೋಟಿಸ್ ನೀಡಿ ಸುಮ್ಮನಾಗಿರುವದು ವಿಷಾದನೀಯ ಸಂಗತಿ.

ಬಾಬಾಸಾಹೇಬ ಅವರು ನೊಂದವರ ಧ್ವನಿಯಾಗಿದ್ದಾರೆ ಅಂತಹ ಮಹಾನ್ ನಾಯಕನ ವೃತ್ತವನ್ನ ಮಸಬಿನಾಳ ಗ್ರಾಮದಲ್ಲಿ ನಿರ್ಮಿಸುತ್ತಿರುವದು ಸ್ವಾಗತಾರ್ಹವಾಗಿದೆ. ನಿಮಗೆ ಎಲ್ಲ ರೀತಿಯಲ್ಲಿಯು ನನ್ನ ಸಹಾಯ ಸಹಕಾರವಿರುತ್ತದೆ ಎಂದು ಭರವಸೆ ನೀಡಿದರು.

ಡಿ.ಎಸ್.ಎಫ್. ಜಿಲ್ಲಾ ಸಂಚಾಲಕ ವಾಯ್ ಸಿ.ಮಯೂರ ಮಾತನಾಡಿ 1970-74ರ ದಶಕದಲ್ಲಿ ಸ್ಥಾಪನೆಯಾದ ದಲಿತ ಸಂಘರ್ಷ ಸಮಿತಿಯು ಕೇವಲ ಒಂದೇ ಜಾತಿಗೆ ಸಿಮೀತವಾಗಿಲ್ಲ.ದೇಶದಲ್ಲಿ ತುಳಿತಕ್ಕೊಳಗಾದ ಪ್ರತಿಯೊಬ್ಬ ಕೆಳ ವರ್ಗದ ವ್ಯಕ್ತಿಗೆ ಅನ್ಯಾಯವಾದಾಗ ಧ್ವನಿ ಎತ್ತುವ ಮೊಟ್ಟ ಮೊದಲ ಸಂಘಟನೆ ದೇಶದಲ್ಲಿದ್ದರೆ ಅದು ಡಿ.ಎಸ್.ಎಸ್ ಎಂದರು.ನಮಗೆಲ್ಲ ಡಾ ಬಾಬಾಸಾಹೇಬ ಅಂಬೇಡ್ಕರರು ದಾರಿ ದೀಪವಾಗಿದ್ದಾರೆ. ಅವರ ಆಶಯದಂತೆ ನಾವೆಲ್ಲರೂ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು.ಹಳ್ಳಿಗಳು ಜಾತಿ ಕೋಪದಲ್ಲಿ ಮೊಳಗಿವೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಡಿ.ಎಸ್ ಎಸ್ ಸಂಘಟನೆಗಳು ಸ್ಥಾಪನೆಯಾಗಬೇಕು.ನಮ್ಮ ಸಂಘದ ಪದಾಧಿಕಾರಿಗಳು ದುಶ್ಚಟದಿಂದ ದೂರವಿದ್ದು ಅಂಬೇಡ್ಕರ ಅವರ ತತ್ವ ಸಿದ್ಧಾಂತಗಳನ್ನ ಮನೆ ಮನೆಗೆ ತಲುಪಿಸುವ ಕೆಲಸವನ್ನ ನಿರಂತರವಾಗಿಸಬೇಕು ಅಂದಾಗ ಮಾತ್ರ ನೀವೆಲ್ಲರು ನಾಯಕರಾಗಿ ಹೊರ ಹೊಮ್ಮುತ್ತಿರಿ ಎಂದು ನೂತನ ಪದಾಧಿಕಾರಿಗಳಿಗೆ ಕಿವಿ ಮಾತನ್ನ ಹೇಳಿದರು.

ದಲಿತ ಮುಖಂಡರಾದ ಅಭಿಷೇಕ ಚಕ್ರವರ್ತಿ.ಸಿದ್ದು ರಾಯಣ್ಣವರ. ಮಾತನಾಡಿದರು.ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ರೇಖಾ ಬೆಕಿನಾಳ. ಕಾಂಗ್ರೆಸ್ ಮುಖಂಡ ಚಂದ್ರಶೇಖರಗೌಡ ಪಾಟೀಲ. ರಾಹುಲ್ ಕುಬಕಡ್ಡಿ. ಡಿ.ಎಸ್.ಎಸ್ ಮುಖಂಡ ಅರವಿಂದ ಸಾಲವಾಡಗಿ. ಮಹಾಂತೇಶ ಸಾಸಬಾಳ. ಕಾಮೇಶ ಬಜಂತ್ರಿ. ಶರಣಪ್ಪ ಹಳ್ಳಿ. ಅವಿನಾಶ ಬಾಣಿಕೋಲ. ಶರಣು ಮಾದರ ಸೇರಿದಂತೆ ಮುಂತಾದವರು ವೇದಿಕೆಯಲ್ಲಿದ್ದರು. ಮಹಾಂತೇಶ ಚಲವಾದಿ ಸ್ವಾಗತಿಸಿದರು
ವಿನೋದ ನಾಗಾವಿ ನಿರೂಪಿಸಿ ವಂದಿಸಿದರು.


Spread the love

About Yuva Bharatha

Check Also

ಹಿರೇಬೂದನೂರ : ಭಕ್ತರ ಸನ್ಮಾನ

Spread the loveಹಿರೇಬೂದನೂರ : ಭಕ್ತರ ಸನ್ಮಾನ ಮುರಗೋಡ : ಹಿರೇಬೂದನೂರ ಗ್ರಾಮದ ಶ್ರೀ ಸದ್ಗುರು ಸಂತ ಬಾಳುಮಾಮಾ ದೇವಸ್ಥಾನದ …

Leave a Reply

Your email address will not be published. Required fields are marked *

five × two =