Breaking News

ಭಾರತ ಪ್ರಜಾಪ್ರಭುತ್ವದ ಜನನಿ : ಸುಧಾಂಶು ತ್ರಿವೇದಿ

Spread the love

ಭಾರತ ಪ್ರಜಾಪ್ರಭುತ್ವದ ಜನನಿ : ಸುಧಾಂಶು ತ್ರಿವೇದಿ

ಯುವ ಭಾರತ ಸುದ್ದಿ ಬೆಳಗಾವಿ:
ಪ್ರಪಂಚದಲ್ಲಿ ಪ್ರಜಾಪ್ರಭುತ್ವದ ಜನನ12 ಶತಮಾನದಲ್ಲಿ ಕರ್ನಾಟಕದಲ್ಲಿ ಬಸವಣ್ಣ ಅನುಭವ ಮಂಟಪದೊಂದಿಗೆ ಜಾರಿಗೆ ತಂದಿರುವದು ಇತಿಹಾಸ. ಅದು ಇಂದು ಸಂಕಷ್ಟದಲ್ಲಿ ಇದೆ ಎಂದು ತಿಳಿಸುವ ಬುದ್ದಿಭ್ರಮಣೆ ಹೊಂದಿದವರು ಇದನ್ನು ತಿಳಿದುಕೊಳ್ಳಬೇಕು ಎಂದು ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ಅವರು ಬಸವಣ್ಣನವರನ್ನು ನೆನಪಿಸಿದರು.
‌‌
ಮಹಾನಗರದ ಉದ್ಯಮಭಾಗದ ಪೌಲ್ಟ್ರಿಯಲ್ಲಿ ನಡೆದ ಪ್ರಬುದ್ದರ ಗೋಷ್ಠಿಯಲ್ಲಿ ಮಾತನಾಡಿ, ಭಾರತದ ಜ್ಯೋತಿಶ್ಯಾಸ್ತ್ರ ಸಾವಿರಾರು ವರ್ಷಗಳ ಮುಂದಿನ ಭವಿಷ್ಯ ಹೇಳುವ ಸಂಕಲ್ಪ ಹೊಂದಿದ ಭಾರತದ ಸಂಸ್ಕೃತಿಯ ಬಗ್ಗೆ ಮಾತನಾಡುವವರು ಮೊದಲು ಈ ಭೂಮಿಯ ಸಂಸ್ಕೃತಿ ತಿಳಿದುಕೊಳ್ಳಬೇಕು.
ಸಾವಿರಾರು ವರ್ಷಗಳ ಹಿಂದೆ ನಿರ್ಮಾಣವಾಗಿರುವ ದೇವಸ್ಥಾನಗಳ ಮೂರ್ತಿಯ ಮೇಲೆ ನಿರ್ದಿಷ್ಟ ದಿನ ಸೂರ್ಯನ ಬೆಳಕು ಸ್ಪರ್ಶಮಾಡುವ ಇಂಜನಿಯರಿಂಗ್ ವ್ಯವಸ್ಥೆ ಹೇಗಿತ್ತು ಎನ್ನುವುದನ್ನು ಅರ್ಥೈಸಿಕೊಳ್ಳಬೇಕು. ಬರುವ ಮುಂದಿನ 25 ವರ್ಷಗಳಲ್ಲಿ ಐದು ಗುರಿಗಳ ಮೂಲಕ ಮುನ್ನುಗ್ಗೊಣ, ಭಾರತ ಪ್ರಪಂಚದ ಗುರುವಿನ ಸ್ಥಾನಕ್ಕೆ ಏರಲೆಬೇಕು. ದೇಶವಾಸಿಗಳ ತಲೆಯಲ್ಲಿರುವ ಗುಲಾಮಗಿರಿ ವ್ಯವಸ್ಥೆ ಹೋಗಲಾಡಿಸಬೇಕು. ಎಲ್ಲರೂ ಕಾಯಕಮಯವಾಗಬೇಕು. ಎಲ್ಲರೂ ಸೇರಿ ದೇಶದ ಅಭಿವೃದ್ಧಿಗೆ ಕೈ ಜೋಡಿಸುವದು ಎಂದರು.

ಪ್ರಕೃತಿಯಲ್ಲಿ ಬರುವ ಎಲ್ಲ ಜೀವಿಗಳಿಗೆ ತನ್ನ ದುಡಿಮೆಯ ಭಾಗದಲ್ಲಿ ನಿಡುತ್ತಾ ಉದಾತ್ತ ಜೀವನ ಸಾಗಿಸುವ ಕೃಷಿಕನ ಜೀವನ ನಮಗೆಲ್ಲ ಆದರ್ಶವಾಗಿದ್ದು ಆ ನಿಟ್ಟಿನಲ್ಲಿ ಮೋದಿಜಿಯವರು ತಮ್ಮ ಅಧಿಕಾರವಧಿಯಲ್ಲಿ ಜನಧನ್ ಖಾತೆ, ಬೆಟಿ ಪಡಾವೋ ಬೆಟಿ ಬಚಾವೋ, ಸ್ವಚ್ಛ ಭಾರತ ಕಾರ್ಯಕ್ರಮಗಳು ಯಾವ ರಾಜಕಾರಣದ ಉಪಯೋಗಕ್ಕಾಗಿ ಅಲ್ಲ ಎನ್ನುವದನ್ನು ಅರ್ಥೈಸಿಕೊಳ್ಳಬೇಕು.
ದೇಶದಲ್ಲಿ ಒಂದು ರುಪಾಯಿ ಭ್ರಷ್ಟಾಚಾರ ನಡೆಯದಂತೆ ಫಲಾನುಭವಿಗಳ ಖಾತೆಗೆ ನೇರ ವರ್ಗಾವಣೆ ತಂದು ರಾಜೀವ ಗಾಂಧಿ ಅವರ ಕಾಲದ 85 ಪ್ರತಿಶತ ಭ್ರಷ್ಟಾಚಾರ ತಡೆಗಟ್ಟಲಾಗಿದೆ ಎಂದು ಕಾಂಗ್ರೆಸ್ ನಾಯಕರ ಹೇಳಿಕೆಗೆ ಟಾಂಗ್ ಕೊಟ್ಟರು.

ಭಾರತ ಮೋದಿಯವರ ಕಾಲಘಟ್ಟದಲ್ಲಿ ಆಟೋಮೊಬೈಲ್ ಕ್ಷೇತ್ರದಲ್ಲಿ ಚೀನಾ, ಜಪಾನ್‌ ‌ದೇಶಗಳನ್ನು ಹಿಂದಕ್ಕೆ ಹಾಕಿದರೆ ಮೊಬೈಲ್ ಫೋನ್ ತಯಾರಿಕೆಯಲ್ಲಿ ದ್ವಿತೀಯ ಸ್ಥಾನದಲ್ಲಿ ಇದ್ದೆವೆ. ಜನತೆಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಅಭಿವೃದ್ಧಿ ನೀಡುವ ಮೂಲಕ ವಿಕಾಸಕ್ಕೆ ಮೊದಲನೆ ಅದ್ಯತೆ ನಿಡಲಾಗುತ್ತಿದೆ. ವಿದೇಶಿ ಬಂಡವಾಳ ಹೂಡಿಕೆ ಹರಿದು ಬರುತಿದ್ದು ದೇಶದಲ್ಲಿ ಕರ್ನಾಟಕ ಮೊದಲನೆ ಸ್ಥಾನದಲ್ಲಿದೆ.
ಕಾಶ್ಮೀರದಲ್ಲಿ 370 ರದ್ದುಮಾಡಿರುವದು, ಮಸೂದ ಅಜರ್ ಅಂತರರಾಷ್ಟ್ರೀಯ ಭಯೋತ್ಪಾದಕ ಎಂದು ಘೋಷಿಸಿದ್ದು, ಗಡಿ ರೇಖೆಯಲ್ಲಿ ಚೀನಾ ದೇಶಕ್ಕೆ ಸೆಡ್ಡುಹೊಡಿದಿದ್ದು ಚೀನಾ ದೇಶಕ್ಕೆ ಭಾರತ ಸೆಡ್ಡು ಹೊಡೆದಿದೆ. ಭಾರತೀಯರಾಗಿ ನಾವೆಲ್ಲ ಮುಂದುವರೆಯೋಣ ಬರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ‌ ಧನ ಮತ್ತು ಜ್ಞಾನದ ಪ್ರತಿಕವಾದ ಕಮಲಕ್ಕೆ‌ ತಮ್ಮ‌ ಮತ‌ ನಿಡುವ ಮೂಲಕ ಭಾರತವನ್ನು ಜಗದ್ಗುರುವನ್ನಾಗಿಸುವ ಸಂಕಲ್ಪ‌ಮಾಡೋಣ ಎಂದರು.
ರಾಜ್ಯ ವಕ್ತಾರ ಎಮ್.ಬಿ.ಝಿರಲಿ ಸ್ವಾಗತಿಸಿ ನಿರೂಪಿಸಿದರು. ಶಾಸಕ ಅಭಯ ಪಾಟೀಲ‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೇಮೆಂದ್ರ ಪೋರವಾಲ್,ರಾಮ ಭಂಡಾರಿ ಇದ್ದರು. ಕಾರ್ಯಕ್ರಮದಲ್ಲಿ ನೂರಾರು ಉದ್ಯಮಿಗಳು, ಉಪನ್ಯಾಸಕರು, ಶಿಕ್ಷಣ ತಜ್ಞರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

four × 4 =