Breaking News

ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ನಿಮಿತ್ಯ ಸೇವಾ ಸಮರ್ಪಣೆ- ರಾಜೇಂದ್ರ ಗೌಡಪ್ಪಗೋಳ!!

Spread the love

ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ನಿಮಿತ್ಯ ಸೇವಾ ಸಮರ್ಪಣೆ- ರಾಜೇಂದ್ರ ಗೌಡಪ್ಪಗೋಳ!!

ಯುವ ಭಾರತ ಸುುದ್ದಿ ಗೋಕಾಕ: ಜಗತ್ತಿನ ಅಗ್ರಗಣ್ಯ ನಾಯಕರಾಗಿ ಹೊರಹೋಮ್ಮುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ೭೧ನೇ ಜನ್ಮ ದಿನದ ಅಂಗವಾಗಿ ಸೆ.೧೭ ರಿಂದ ನಿರಂತರವಾಗಿ ೨೦ ದಿನಗಳ ವರೆಗೆ ಸೇವಾ ಮತ್ತು ಸಮರ್ಪಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ಹೇಳಿದರು.
ಅವರು, ಶಾಸಕ ರಮೇಶ ಜಾರಕಿಹೊಳಿ ಅವರ ಗೃಹ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಬಿಜೆಪಿಯಿಂದ ಹಮ್ಮಿಕೊಂಡ ಸೇವಾ ಮತ್ತು ಸಮರ್ಪಣ ಕಾರ್ಯಕ್ರಮ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸೇವಾ ಮತ್ತು ಸಮರ್ಪಣ ಕಾರ್ಯಕ್ರಮದ ಮೂಲಕ ಬಿಜೆಪಿ ಕಾರ್ಯಕರ್ತರು ದೇಶದ ಜನರ ಸೇವೆ ಮಾಡಲು ಸನ್ನದ್ಧರಾಗಿದ್ದಾರೆ. ನರೇಂದ್ರ ಮೋದಿ ಅವರು ತಮ್ಮ ಕಾರ್ಯಕ್ಷಮತೆ ಹಾಗೂ ದೀನದಲಿತರ, ಬಡವರ, ರೈತರ ಮತ್ತು ಸಹಾಯಕ ಜನರಿಗೆ ಆಧಾರ ಸ್ತಂಭವಾಗಿ ಬೆಳೆಯುತ್ತಿದ್ದಾರೆ ಎಂದರು.
ಪ್ರಧಾನಿ ಮೋದಿಜಿಯವರ ಜನ್ಮದಿನದ ಅಂಗವಾಗಿ ೨೦ ದಿನಗಳ ಕಾಲ ದೇಶಾಧ್ಯಂತ ಆರೋಗ್ಯ ಶಿಭಿರ, ರಕ್ತದಾನ, ಸ್ವಚ್ಛ ಭಾರತ, ಕೋವಿಡ್ ಲಸಿಕಾ ಶಿಭಿರ, ಆಹಾರ ವಿತರಣೆ, ಹಣ್ಣು ಹಂಪಲು ವಿತರಣೆ ಸೇರಿ ಹೀಗೆ ವಿವಿಧ ಕಾರ್ಯಗಳನ್ನು ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡಿದ್ದಾರೆAದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕ ಅಧ್ಯಕ್ಷ ಭೀಮಶಿ ಭರಮಣ್ಣವರ, ಶಾಸಕರ ಸಹಾಯಕ ಸುರೇಶ ಸನದಿ, ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಪ್ರೇಮಾ ಭಂಡಾರಿ, ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ ಮೂಡಲಗಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ಪತ್ರಿಕೋದ್ಯಮದ ಬೆಳವಣಿಗೆಯಲ್ಲಿ ಪತ್ರಿಕಾ ವಿತರಕರ ಪಾತ್ರ ಬಹಳ ದೊಡ್ಡದು.- ರಮೇಶ ಜಾರಕಿಹೊಳಿ.!

Spread the loveಪತ್ರಿಕೋದ್ಯಮದ ಬೆಳವಣಿಗೆಯಲ್ಲಿ ಪತ್ರಿಕಾ ವಿತರಕರ ಪಾತ್ರ ಬಹಳ ದೊಡ್ಡದು.- ರಮೇಶ ಜಾರಕಿಹೊಳಿ.! ಗೋಕಾಕ: ಪತ್ರಿಕೆಗಳನ್ನು ಮನೆಗಳಿಗೆ ಸರಿಯಾದ …

Leave a Reply

Your email address will not be published. Required fields are marked *

twelve − nine =