Breaking News

ಪ್ರಧಾನಿ ಹುಟ್ಟು ಹಬ್ಬಕ್ಕೆ ಗೋಕಾಕ ಬಿಜೆಪಿಯಿಂದ ಹಣ್ಣು ಹಂಪಲು ವಿತರಣೆ.!

Spread the love

ಪ್ರಧಾನಿ ಹುಟ್ಟು ಹಬ್ಬಕ್ಕೆ ಗೋಕಾಕ ಬಿಜೆಪಿಯಿಂದ ಹಣ್ಣು ಹಂಪಲು ವಿತರಣೆ.!

ಯುವ ಭಾರತ ಸುದ್ದಿ, ಗೋಕಾಕ್: ನಮ್ಮ ನೆಚ್ಚಿನ ಪ್ರಧಾನಿಗಳಾದ ನರೇಂದ್ರ ಮೋದಿ ಅವರ ಹುಟ್ಟುಹಬ್ಬವನ್ನು ಕೋವಿಡ್ ನಿಯಮಗಳನ್ನು ಪಾಲನೆ ಮಾಡುವ ಜೊತೆಗೆ ವಿವಿಧ ರೀತಿಯ ಸೇವಾ ಕಾರ್ಯಗಳನ್ನು ಕೈಗೊಂಡು ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದು ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ಹೇಳಿದರು.
ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮ ದಿನದ ಅಂಗವಾಗಿ ಭಾರತೀಯ ಜನತಾ ಪಾರ್ಟಿ ನಗರ ಹಾಗೂ ಗ್ರಾಮೀಣ ಘಟಕದಿಂದ ಕಾರ್ಯಕರ್ತರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಗೂ ಶಿವಾ ಫೌಂಡೇಶನನ ಮಕ್ಕಳಿಗೆ ಹಣ್ಣು ಹಂಪಲು ವಿತರಣೆ ಮಾಡಿ ಮಾತನಾಡಿದರು.
ಬಿಜೆಪಿಯಿಂದ 6 ದಿನಗಳ ಕಾಲ ಸಸಿಗಳನ್ನು ನೆಟ್ಟು, ಪರಿಸರ ಸಂರಕ್ಷಣೆ ಮಾಡುವುದು, ಸಾರ್ವಜನಿಕ ಸ್ಥಳಗಳ ಸ್ವಚ್ಚತೆ, ಹಳ್ಳಿಗಳಲ್ಲಿ ನೈಮಲ್ರ‍್ಯತೆ ಬಗ್ಗೆ ಜಾಗೃತಿ, ಅಸ್ಪತ್ರೆಗಳಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಸೇರಿದಂತೆ ನಾನಾ ಸೇವಾ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಸೇವಾ ಸಪ್ತಾಹ ಕಾರ್ಯಕ್ರಮದಡಿಯಲ್ಲಿ ಪಂಡಿತ್ ದೀನ ದಯಾಳ್, ಗಾಂಧಿ ಜಯಂತಿ ಹಾಗೂ ಪ್ರಧಾನಿಯವರ ಜನ್ಮ ದಿನಾಚರಣೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಚಿವರ ಆಪ್ತಕಾರ್ಯದರ್ಶಿ ಭೀಮಗೌಡ ಪೋಲಿಸಗೌಡರ,  ಧುರೀಣರಾದ ಹನಮಂತ ದುರ್ಗನ್ನವರ, ಸುರೇಸ ಸನದಿ,ಬಿಜೆಪಿ ನಗರ ಘಟಕ ಅಧ್ಯಕ್ಷ ಭೀಮಶಿ ಭರಮಣ್ಣವರ, ಪ್ರಧಾನ ಕಾರ್ಯದರ್ಶಿ ಜಯಾನಂದ ಹುಣಶ್ಯಾಳಿ, ಜಿಲ್ಲಾ ಬಿಜೆಪಿ ಪದಾಧಿಕಾರಿಗಳಾದ ಶಾಮಾನಂದ ಪೂಜಾರಿ, ಬಸವರಾಜ ಹಿರೇಮಠ, ಪ್ರೇಮಾ ಭಂಡಾರಿ, ಜ್ಯೋತಿ ಕೋಲಾರ, ಮುಖಂಡರಾದ ಶಶಿಧರ ದೇಮಶೆಟ್ಟಿ, ಕುಸುಮಾ ಖನಗಾಂವಿ, ಶಿವು ಹಿರೇಮಠ, ಮುತ್ತುರಾಜ ಜಮಖಂಡಿ, ಚಿದಾನಂದ ದೇಮಶೆಟ್ಟಿ, ಕಿರಣ ಡಮಾಮಗರ, ಅನೀಲ ತುರಾಯದಾರ, ಆನಂದ ಉಳ್ಳಾಗಡ್ಡಿ,  ಪಾಟೀಲ, ಕರುಣಾ ಗರುಡಕರ, ಸಚೀನ ಕಮಟೇಕರ, ಮಾರುತಿ ಜಿಂಗಿ, ಬೀರಣ್ಣ ಮೈಲನ್ನವರ, ವಿಶಾಲ ಪಟಗುಂದಿ ಸೇರಿದಂತೆ ಅನೇಕ ಬಿಜೆಪಿ ಕಾರ್ಯಕರ್ತರು ಇದ್ದರು.


Spread the love

About Yuva Bharatha

Check Also

ಮೋದಿಯವರ ಹುಟ್ಟು ಹಬ್ಬದ ನಿಮಿತ್ಯ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಭಿರದಲ್ಲಿ ಯುವನಾಯಕ ಅಮರನಾಥ ಜಾರಕಿಹೊಳಿ ಅವರಿಂದ ರಕ್ತದಾನ.!

Spread the loveಮೋದಿಯವರ ಹುಟ್ಟು ಹಬ್ಬದ ನಿಮಿತ್ಯ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಭಿರದಲ್ಲಿ ಯುವನಾಯಕ ಅಮರನಾಥ ಜಾರಕಿಹೊಳಿ ಅವರಿಂದ ರಕ್ತದಾನ.! …

Leave a Reply

Your email address will not be published. Required fields are marked *

1 + 16 =