Breaking News

ಗೋಕಾಕ‌ ಬಿಜೆಪಿ ಪಕ್ಷದಿಂದ ಅಂಗವಿಕಲರಿಗೆ ಹಾಗೂ ವೃದ್ಧರಿಗೆ ಪರಿತರ ವಿತರಣೆ.!

Spread the love

ಗೋಕಾಕ‌ ಬಿಜೆಪಿ ಪಕ್ಷದಿಂದ ಅಂಗವಿಕಲರಿಗೆ ಹಾಗೂ ವೃದ್ಧರಿಗೆ ಪರಿತರ ವಿತರಣೆ.!

ಯುವ ಭಾರತ ಸುದ್ದಿ,   ಗೋಕಾಕ್: ಭಾರತೀಯ ಜನತಾ ಪಾರ್ಟಿ‌ ಗೋಕಾಕ ನಗರ ಘಟಕದಿಂದ ಸೇವಾ ಸಪ್ತಾಹ, ಪಂಡಿತ ದೀನದಯಾಳ ಹಾಗೂ ಗಾಂಧೀಜಿ ಜಯಂತಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಅಂಗವಿಕಲರಿಗೆ ಹಾಗೂ ವೃದ್ದರಿಗೆ ಪರಿತರ ವಿತರಣಾ ಕಾರ್ಯಕ್ರಮ ಸೋಮವಾರದಂದು ಜರುಗಿತು.
ಇಲ್ಲಯ ಶ್ರೀ ಮೆರಕನಟ್ಟಿ ಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಅಂಗವಿಕಲರಿಗೆ ಹಾಗೂ ವೃದ್ಧರಿಗೆ ಪರಿತರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಅಬ್ಬಾಸ ದೇಸಾಯಿ, ಬಸವರಾಜ ಆರೇನ್ನವರ, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಪ್ರೇಮಾ ಭಂಡಾರಿ, ಬಿಜೆಪಿ ನಗರಾಧ್ಯಕ್ಷ ಭೀಮಶಿ ಭರಮನ್ನವರ, ಜಿಲ್ಲಾ ಮುಖಂಡರಾದ ಶಾಮಾನಂದ ಪೂಜಾರಿ, ಬಸವರಾಜ ಹಿರೇಮಠ, ಶಕೀಲ ಧಾರವಾಡಕರ, ನಗರ ಪ್ರಧಾನ ಕಾರ್ಯದರ್ಶಿ ಜಯಾನಂದ, ಮುಖಂಡರಾದ ಶಶಿಧರ ದೇಮಶೆಟ್ಟಿ, ಲಕ್ಷ್ಮಣ ಖಡಕಭಾಂವಿ, ಲಕ್ಕಪ್ಪ ತಹಶಿಲ್ದಾರ, ಲಕ್ಷ್ಮಣ ತಳ್ಳಿ, ಗುಡ್ಡಾಕಾಯು, ಹುಣಶ್ಯಾಳ, ಶಿವಾನಂದ ಹಿರೇಮಠ, ಯಮನಪ್ಪ ತಾರಿಹಾಳ, ರವಿ ಪೂಜಾರಿ, ಮಲ್ಲಿಕಾರ್ಜುನ ಕರಲೇಪ್ಪಗೋಳ, ಲಕ್ಷ್ಮೀ ಪಾಟೀಲ, ಜ್ಯೋತಿ ಕೋಲಾರ, ಕರುಣಾ ಗರುಡಕರ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.


Spread the love

About Yuva Bharatha

Check Also

ಮೋದಿಯವರ ಹುಟ್ಟು ಹಬ್ಬದ ನಿಮಿತ್ಯ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಭಿರದಲ್ಲಿ ಯುವನಾಯಕ ಅಮರನಾಥ ಜಾರಕಿಹೊಳಿ ಅವರಿಂದ ರಕ್ತದಾನ.!

Spread the loveಮೋದಿಯವರ ಹುಟ್ಟು ಹಬ್ಬದ ನಿಮಿತ್ಯ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಭಿರದಲ್ಲಿ ಯುವನಾಯಕ ಅಮರನಾಥ ಜಾರಕಿಹೊಳಿ ಅವರಿಂದ ರಕ್ತದಾನ.! …

Leave a Reply

Your email address will not be published. Required fields are marked *

1 × 1 =