Breaking News

ಸೋತವರು-ಗೆದ್ದವರು ನಮ್ಮವರೇ, ಆದ್ರೆ ಸೋತವರನ್ನೂ ಪ್ರೀತಿಸುತ್ತೇನೆ: ಸಚಿವ ಜಾರಕಿಹೊಳಿ‌

Spread the love

ಸೋತವರು-ಗೆದ್ದವರು ನಮ್ಮವರೇ, ಆದ್ರೆ ಸೋತವರನ್ನೂ ಪ್ರೀತಿಸುತ್ತೇನೆ: ಸಚಿವ ಜಾರಕಿಹೊಳಿ‌

ಯುವ ಭಾರತ ಸುದ್ದಿ ಗೋಕಾಕ: ಚಿವರು, ಶಾಸಕರು ಮಾಡದಂತ ಕೆಲಸಗಳನ್ನು ಗ್ರಾಮ ಪಂಚಾಯತ ಸದಸ್ಯರು ಮಾಡಬಹುದು. ಸರಕಾರದ ಅನುದಾನ ನೇರವಾಗಿ ಗ್ರಾಮ ಪಂಚಾಯತಗಳಿಗೆ ಬರುತ್ತದೆ ಇದನ್ನು ಸದುಪಯೋಗ ಪಡೆಸಿಕೊಂಡು ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುವಂತೆ ನೂತನ ಗ್ರಾಪಂ ಸದಸ್ಯರಿಗೆ ಸಚಿವ ರಮೇಶ ಜಾರಕಿಹೊಳಿ ಕಿವಿ ಮಾತು ಹೇಳಿದರು.

ನಗರದ ಸಚಿವರ ಕಾರ್ಯಾಲಯದ ಆವರಣದಲ್ಲಿ ಹಮ್ಮಿಕೊಂಡ ಗ್ರಾಮ ಪಂಚಾಯತ ನೂತನ ಸದಸ್ಯರ ಸತ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ, ಸತತ ನಾಲ್ಕನೇ ಬಾರಿಗೆ ಗೋಕಾಕ ಮತಕ್ಷೇತ್ರದ ಎಲ್ಲ ಪಂಚಾಯತಿಗಳು ನಮ್ಮ ತೆಕ್ಕೆಗೆ ಬಂದಿವೆ. ಜಾರಕಿಹೊಳಿ ಕುಟುಂಬದ ಮೇಲೆ ಪ್ರೀತಿ ವಿಶ್ವಾಸವಿಟ್ಟು ಆಶೀರ್ವದಿಸುತ್ತಿರುವದರಿಂದ ರಾಜ್ಯ ಮಟ್ಟದಲ್ಲಿ ಬೆಳೆದು ನಿಂತಿರುವೆ ಎಂದರು.

ಮನಸ್ಸು ಮಾಡಿದರೆ ಎಲ್ಲ ಪಂಚಾಯತಿಗಳಲ್ಲಿ ಅವಿರೋಧ ಆಯ್ಕೆ ಮಾಡಬಹುದಿತ್ತು, ಒಳ್ಳೆಯ ಅಭ್ಯರ್ಥಿಗಳ ಆಯ್ಕೆಯ ಉದ್ದೇಶದಿಂದ ಈ ಬಾರಿಯ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಅವಿರೋಧ ಆಯ್ಕೆಮಾಡದೇ ಸ್ಫರ್ಧಿಸಲು ಅವಕಾಶ ಮಾಡಿಕೊಡಲಾಯಿತು. ಸೋತವರು ಮತ್ತು ಗೆದ್ದವರು ನಮ್ಮವರೇ ಆದರೆ ಸೋತವರನ್ನು ಪ್ರೀತಿಸುತ್ತೆನೆ ಎಂದರು.

ಗೋಕಾಕ ಮತಕ್ಷೇತ್ರಗಳ ಗ್ರಾಮ ಪಂಚಾಯತಗಳಲ್ಲಿಯ ೯ಜನ ಸದಸ್ಯರು ಮಾತ್ರ ಬಿಜೆಪಿಯಿಂದ ಹೊರಗಿದ್ದಾರೆ. ಅವರಲ್ಲಿ ಐವರು ನನ್ನನ್ನು ಸಂಪರ್ಕಿಸಿದ್ದಾರೆ. ಗ್ರಾಪಂ ಸದಸ್ಯರು ಗ್ರಾಮದಲ್ಲಿ ಪ್ರತಿ ದಿನ ಇರುವವರು ತಾವಾಗಿರುತ್ತಿರಿ, ಇದರಿಂದ ಗ್ರಾಮದ ಸಮಸ್ಯೆಗಳು ನಿಮಗೆ ಗೊತ್ತಿರುತ್ತವೆ. ತಾವುಗಳು ಜನರ ಧ್ವನಿಯಾಗಿ, ಗ್ರಾಮದ ಅಭಿವೃದ್ಧಿಗೆ ಕೆಲಸ ಮಾಡಬೇಕು. ನಿಮಗೆ ಎಲ್ಲ ರೀತಿಯ ಸಹಕಾರವನ್ನು ನೀಡಲಾಗುತ್ತದೆ ಎಂದು ಭರವಸೆ ನೀಡಿದರು. 

ಯೋಗಿಕೊಳ್ಳದ ಗಟ್ಟಿ ಬಸವಣ್ಣ ದೇವಸ್ಥಾನ ಬಳಿ ಡ್ಯಾಂ ನಿರ್ಮಾಣಕ್ಕೆ ೧೦೦೦ ಸಾವಿರ ಕೋಟಿ ರೂಗಳ ಅನುದಾನ ಮಂಜುರಾಗಿದ್ದು, ಶೀಘ್ರದಲ್ಲೆ ಟೆಂಡರ್ ಕರೇದು ಕಾಮಗಾರಿ ಕೈಗೆತ್ತಿಕೊಳ್ಳಲಾಗುವದು. ಮುಖ್ಯಮಂತ್ರಿ ಯಡಿಯೂರಪ್ಪನವರ ನೇತ್ರತ್ವದಲ್ಲಿ ಗೋಕಾಕ ಹಾಗೂ ಬೆಳಗಾವಿ ಮಾದರಿಯಾಗಿ ಮಾಡಲಾಗುವದು ಎಂದರು.
ಮುಂಬರುವ ಲೋಕಸಭಾ ಚುನಾವಣೆ ಹಾಗೂ ತಾಪಂ, ಜಿಪಂ ಚುನಾವಣೆಗಳಲ್ಲಿ ಬಿಜೆಪಿಯ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾರ್ಯಪ್ರವೃತ್ತರಾಗುವಂತೆ ಸಚಿವ ರಮೇಶ ಜಾರಕಿಹೊಳಿ ಕಾರ್ಯಕರ್ತರಿಗೆ ಕರೆ ನೀಡಿದರು.

‘ನನಗೆ ಆದರ್ಶರಾದ ಕೇಂದ್ರ ಗೃಹ ಸಚಿವ ಅಮೀತ್ ಶಾ  ಜ. 16ಕ್ಕೆ ಬೆಳಗಾವಿಗೆ ಆಗಮಿಸಲಿದ್ದು, ಎಲ್ಲ ಕ್ಷೇತ್ರಗಳ  2 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಬಿಜೆಪಿ ಪಕ್ಷದ ಶಕ್ತಿಯನ್ನು ತೋರಿಸಬೇಕು’ ಎಂದು ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಇದೇ ಸಂದರ್ಭದಲ್ಲಿ ಸಚಿವ ರಮೇಶ ಜಾರಕಿಹೊಳಿ ಅವರು ಗೋಕಾಕ ಮತಕ್ಷೇತ್ರದಲ್ಲಿ ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯತನ 300ಕ್ಕೂ ಹೆಚ್ಚು  ಸದಸ್ಯರನ್ನು ಸತ್ಕರಿಸಿದರು.


Spread the love

About Yuva Bharatha

Check Also

ಅಕ್ಕಾ ಅಂದ್ರೆ ಅವರೇ ಅಂತ ಯಾಕೆ ತಿಳ್ಕೊತೀರಿ, ಪೆಗ್ ಅಂದ್ರೆ ಎನರ್ಜಿ ಡ್ರಿಂಕ್-ಮಾಜಿ ಶಾಸಕ ಸಂಜಯ ಪಾಟೀಲ.!

Spread the loveನಾನು ಭಾಷಣದಲ್ಲಿ ಹೆಬ್ಬಾಳಕರ ಹೆಸರನ್ನೆ ತಗೊಂಡಿಲ್ಲ. -ಮಾಜಿ ಶಾಸಕ ಸಂಜಯ ಪಾಟೀಲ.! ಯುವಭಾರತ ಸುದ್ದಿ ಬೆಳಗಾವಿ: ನಾನು …

Leave a Reply

Your email address will not be published. Required fields are marked *

one × three =