ಸರಕಾರದ ಯೋಜನೆಗಳನ್ನು ಮನೆ-ಮನಗಳಿಗೆ ತಲುಪಿಸುವ ಕೇಲಸ ಮಾಡಬೇಕು- ದುಂಡಪ್ಪ ಬೆಂಡವಾಡ.!
ಗೋಕಾಕ: ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತಾಪಿ ವರ್ಗಕ್ಕೆ ಅನೇಕ ಜನಪ್ರೀಯ ಯೋಜನೆಗಳನ್ನು ಜಾರಿಗೊಳಿಸಿ, ರೈತರ ಅಭಿವ್ರದ್ಧಿಗೆ ಶ್ರಮಿಸುತ್ತದೆ. ಸರಕಾರದ ಯೋಜನೆಗಳನ್ನು ಕಾರ್ಯಕರ್ತರು ಮನೆ-ಮನಗಳಿಗೆ ತಲುಪಿಸುವ ಕೇಲಸ ಮಾಡಬೇಕು ಎಂದು ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ದುಂಡಪ್ಪ ಬೆಂಡವಾಡ ಹೇಳಿದರು.
ಅವರು, ಶುಕ್ರವಾರದಂದು ನಗರದ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ರೈತ ಮೋರ್ಚಾ ವತಿಯಿಂದ ಹಮ್ಮಿಕೊಂಡ ಕರಪತ್ರ ಹಂಚಿಕೆ ಕಾರ್ಯಕ್ರಮದ ಮುಖ್ಯಅಥಿತಿಗಳಾಗಿ ಭಾಗವಹಿಸಿ ಮಾತನಾಡಿದರು.
ಸರಕಾರ ಕಿಸಾನ್ ಸಮ್ಮಾನ, ವಿದ್ಯಾನಿಧಿ, ಕಿಸಾನ್ ಕ್ರೇಡಿಟ್ ಕಾರ್ಡ, ಫಸಲ್ ಭೀಮಾ ಯೋಜನೆ, ಕೃಷಿ ಸಿಂಚಾಯಿ ಯೋಜನೆ, ಕೃಷಿ ವಿಕಾಸ ಯೋಜನೆ, ಕೃಷಿ ಸಂಜೀವಿನಿ, ನನ್ನ ಬೆಳೆ ನನ್ನ ಹಕ್ಕು ಮತ್ತು ರೈತ ಮಕ್ಕಳಿಗೆ ಮೀಸಲಾತಿ ಸೇರಿ ಹತ್ತು ಹಲವಾರು ಯೋಜನೆಗಳನ್ನು ಸರಕಾರ ಜಾರಿಗೊಳಿಸಿದೆ. ಕೃಷಿ, ಹೈನುಗಾರಿಕೆ ಸಮಬಂಧಪಟ್ಟAತೆ ಹೆಚ್ಚಿನ ಒತ್ತು ನೀಡುತ್ತಿರುವ ಸರಕಾರ ರೈತರನ್ನು ಆರ್ಥಿಕವಾಗಿ ಸÀದೃಢರನ್ನಾಗಿ ಮಾಡುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ ವಹಿಸಿದ್ದರು.
ವೇದಿಕೆಯ ಮೇಲೆ ರೈತ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಆನಂದ ಮೂಡಲಗಿ, ಕಾರ್ಯದರ್ಶಿ ಪ್ರದೀಪ ಸಾಣಿಕೊಪ್ಪ, ಸುರೇಶ ಸನದಿ, ಗ್ರಾಮೀಣ ರೈತ ಮೋರ್ಚಾ ಅಧ್ಯಕ್ಷ ಚನಗೌಡ ಪಾಟೀಲ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಲಕ್ಷö್ಮಣ ತಳ್ಳಿ, ರೈತ ಮೋರ್ಚಾ ಗ್ರಾಮೀಣ ಕಾರ್ಯದರ್ಶಿ ಬಸವಗೌಡ ನಿರ್ವಾಣಿ ಇದ್ದರು.