ಬೆಳಗಾವಿಯಲ್ಲಿ ಬಿಜೆಪಿ ವಿಜಯ ಸಂಕಲ್ಪ ಅಭಿಯಾನ ಉದ್ಘಾಟನೆ
ಯುವ ಭಾರತ ಸುದ್ದಿ ಬೆಳಗಾವಿ:
ಪ್ರಧಾನಿ ನರೇಂದ್ರ ಮೋದಿ ವಿಶ್ವ ನಾಯಕನಾಗುವುದರೊಂದಿಗೆ ಭಾರತದ ಪ್ರಗತಿಯನ್ನು ವಿಶ್ವವೆ ನಿಬ್ಬೆರಗಾಗಿ ನೋಡುವಂತೆ ಮಾಡಿದ ಶ್ರೇಯಸ್ಸು ಅವರನ್ನು ಬೆಂಬಲಿಸಿದ ದೇಶದ ಸಮಸ್ತ ಜನತೆಗೆ ಸಲ್ಲುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ ಹೇಳಿದರು.
ನಗರದ ಬಿ.ಕೆ. ಕಂಗ್ರಾಳಿಯಲ್ಲಿ ಬಿಜೆಪಿ ಗ್ರಾಮಾಂತರ ಜಿಲ್ಲೆ ಮತ್ತು ಮಂಡಲ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಅಭಿಯಾನವನ್ನು ಉದ್ಘಾಟನೆಗೊಳಿಸಿ ಮಾತನಾಡಿ,
ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆ ಕಾರ್ಯಗಳನ್ನು ಜನತೆಗೆ ತಿಳಿಸುವ ಮೂಲಕ ಬಿಜೆಪಿಯ ಸಾಧನಾ ಕರ ಪತ್ರವನ್ನು ಮುಟ್ಟಿಸುವ ಉದ್ದೇಶದಿಂದ ಜ.21 ರಿಂದ 29 ರವರೆಗೆ ವಿಜಯ ಸಂಕಲ್ಪ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಈ ಅಭಿಯಾನ ಹಮ್ಮಿಕೊಳ್ಳುವ ಮೂಲಕ ಬಿಜೆಪಿ ಸಾಧನೆಗಳು ಜನಸಾಮಾನ್ಯರನ್ನು ತಲುಪಲಿದೆ. ಪಾಶ್ಚಿಮಾತ್ಯ ದೇಶಗಳು ಇನ್ನು ಕರೋನಾದಿಂದ ಬಳಲುತಿದ್ದರು ದೇಶದ 135 ಕೋಟಿ ಜನರ ಆರೋಗ್ಯ ಕಾಪಾಡಿದ ಪ್ರಧಾನಿಗಳ ಕಾರ್ಯ ಶ್ಲಾಘನೀಯ. ಸ್ಟಾಟಪ್ ಹಾಗೂ ಅತ್ಮ ನಿರ್ಭರ ಕಾರ್ಯಕ್ರಮದಿಂದ ದೇಶ ಸ್ವಾವಲಂಬನೆ ಸಾಧಿಸುತ್ತಿದೆ.
ಈ ಎಲ್ಲ ಕಾರ್ಯಗಳು ಬಿಜೆಪಿಯನ್ನು ಗೆಲುವಿನ ಉತ್ತುಂಗಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಲಿದೆ. ಈ ವಿಜಯ ಸಂಕಲ್ಪ ಅಭಿಯಾನದ ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡ ಫಲಾನುಭವಿಗಳನ್ನು ಮಾತನಾಡಿಸಿ ಬಿಜೆಪಿ ಸರಕಾರಗಳ ಯೋಜನೆಗಳಿಂದ ಈ ಕುಟುಂಬಗಳ ಸಬಲೀಕರಣ ಆಗಿರುವುದನ್ನು ತಿಳಿಸಲಿದ್ದಾರೆ.
ವಾಹನ ಮತ್ತು ಮನೆಯ ಬಾಗಿಲಗೆ ಸ್ಟಿಕರ್ ಹಾಕಿಸುವ ಕೆಲಸವೂ ನಡೆಯಲಿದೆ.
ಮಂಡಲದ ಎಲ್ಲ ಬೂತ್ ಗಳಲ್ಲಿ ಸಭೆಗಳು ನಡೆಸಿ ಭಾರತೀಯ ಜನತಾ ಪಕ್ಷ ಮುಂಬರುವ ಚುನಾವಣೆಯಲ್ಲಿ 150 ಸ್ಥಾನಗಳನ್ನು ಪಡೆಯುವ ಗುರಿಗೆ ಜಿಲ್ಲೆಯಿಂದ ಹೆಚ್ಚಿನ ಸ್ಥಾನಗಳು ಸೆರ್ಪಡೆಯಾಗಲಿದೆ. ಗೆಲುವಿಗಾಗಿ ಪಕ್ಷವು ತಳಹಂತದಿಂದ ಸದೃಢವಾಗಿ ನಿರ್ಮಿಸಲು ಕಾರ್ಯತಂತ್ರಗಳನ್ನು ಮಾಡುತ್ತಿದೆ.
ಪ್ರತಿ ಬೂತ್ ನಲ್ಲಿ ಗೋಡೆಗಳ ಮೇಲೆ ಬಿಜೆಪಿ ಸಾಧನೆ ಬಿಂಬಿಸುವ ಪೇಂಟಿಂಗ್ ಹಾಗೂ ಸದಸ್ಯತ್ವ ಅಭಿಯಾನ ನಡೆಯಲಿದ್ದು ಕ್ಷೇತ್ರದಲ್ಲಿ ಹೊಸ ಕಾರ್ಯಕರ್ತರ ಜೋಡಣೆಯಾಗಲಿದ್ದಾರೆ ಎಂದರು.
ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ ಮಾತನಾಡಿ, ಜನ ಕಲ್ಯಾಣದೆಡೆಗೆ ಬಿಜೆಪಿಯ ಬದ್ಧತೆ ಸಾರಲು ಪ್ರತಿ ಬೂತ್ ದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕವೂ ನಮ್ಮ ಯೋಜನೆಗಳ ಯಶಸ್ಸನ್ನು ಸಾರಲಾಗುವುದು. ಪಕ್ಷದ ಸದಸ್ಯತ್ವ ಅಭಿಯಾನ ಸಂಪೂರ್ಣ ಆನ್‍ಲೈನ್ ಇರಲಿದ್ದು (ಮಿಸ್ಡ್ ಕಾಲ್), ನೋಂದಣಿಯಾದ ಸದಸ್ಯರ ಸಂಖ್ಯೆಯನ್ನು ವೆಬ್‍ಸೈಟಿನಲ್ಲಿ ನೇರವಾಗಿ ನೋಡಬಹುದು. ನೋಂದಣಿ ಪ್ರಕ್ರಿಯೆ ಬಗೆಗೂ ಕಾರ್ಯಕರ್ತರಿಗೆ ಕಾರ್ಯಾಗಾರಗಳನ್ನು ನಡೆಸಲಾಗುತ್ತದೆ. ಜ.29 ರಂದು ನಡೆಯುವ ಮನ್ ಕೀ ಬಾತ್ ಕಾರ್ಯಕ್ರಮ ಕರ್ನಾಟಕದ ಪಾಲಿಗೆ ಮತ್ತಷ್ಟು ವಿಶೇಷವಾಗಿರಲಿದೆ. ಪಕ್ಷದ ಕಾರ್ಯಕರ್ತರು ಹಾಗೂ ಪ್ರಮುಖರು ಒಟ್ಟಿಗೆ ಕೂತು ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮ ಆಲಿಸಲಿದ್ದಾರೆ. ಬೂತ್ ಮಟ್ಟದಿಂದಲೇ ಇದು ನಡೆಯಲಿದ್ದು ಶೇ. 90ರಷ್ಟು ಬೂತ್‍ಗಳು ಮನ್ ಕೀ ಬಾತ್ ಆಲಿಸಿ ಜಿಲ್ಲೆಯು ದಾಖಲೆ ಮಾಡಲಿದೆ ಎಂದರು.
ರಾಜ್ಯ ವಕ್ತಾರ ಎಂ.ಬಿ.ಝಿರಲಿ ಹಾಗೂ ಮಂಡಲ ಅಧ್ಯಕ್ಷ ಧನಂಜಯ ಜಾಧವ ಮಾತನಾಡಿದರು.
ಜಿಲ್ಲಾ ಪದಾಧಿಕಾರಿಗಳಾದ ಪ್ರಮೋದ ಕೋಚೆರಿ, ವಿಠಲ ಹಲಗೇಕರ, ಸುಭಾಷ ಪಾಟೀಲ, ಮಲ್ಲಿಕಾರ್ಜುನ ಮಾದಮ್ಮನವರ, ಯುವರಾಜ ಜಾಧವ, ಎಫ್.ಎಸ್.ಸಿದ್ದನಗೌಡರ, ನೀತಿನ ಚೌಗಲೆ, ವೀರಭದ್ರಯ್ಯ ಪೂಜಾರ,
ರೂಪಾ ಚಿಕ್ಕಲದಿನ್ನಿ, ಅರ್ಚನಾ ಪಾಟೀಲ, ಭಾಗ್ಯಶ್ರೀ ಕೋಕಿತಕರ, ಮನೋಹರ ಕಡಲ್ಕೋರ, ಪ್ರದೀಪ ಪಾಟೀಲ, ನಾರಯಣ ಪಾಟೀಲ, ಅಜೀತ ಹಲಕರಣಿ, ಕಲ್ಲಪ್ಪ ಪಾಟೀಲ, ಮರಘೇಂದ್ರಗೌಡ ಪಾಟೀಲ, ದಾದಾಗೌಡ ಬಿರಾದಾರ, ಶ್ರೇಯಸ್ಸ ನಾಕೋಡಿ ಮುಂತಾದ ನೂರಾರು ಪ್ರಮುಖ ಪದಾಧಿಕಾರಿಗಳು ಇದ್ದರು.
ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ ಗೋಡೆ ಬರಹಕ್ಕೆ ಚಾಲನೆ ನೀಡಿದರೆ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮನೆ ಮನೆಗೆ ಕರ ಪತ್ರ ಹಂಚಿ ಬಾಗಿಲುಗಳಿಗೆ ಬಿಜೆಪಿ ಸ್ಟಿಕರ್ ಅಂಟಿಸಿದರು.