Breaking News

ಬೆಳಗಾವಿ

ಬೆಳಗಾವಿ ದಕ್ಷಿಣದಲ್ಲಿ ಕಣಕ್ಕಿಳಿಯಲು ಕಿರಣ ಜಾಧವ ಶತ ಪ್ರಯತ್ನ !

ಬೆಳಗಾವಿ ದಕ್ಷಿಣದಲ್ಲಿ ಕಣಕ್ಕಿಳಿಯಲು ಕಿರಣ ಜಾಧವ ಶತ ಪ್ರಯತ್ನ ! ಬೆಳಗಾವಿ : ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಕಿರಣ ಜಾಧವ ದೆಹಲಿಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಸದ್ಯ ಅಭಯ್ ಪಾಟೀಲ್ ಬಿಜೆಪಿಯಿಂದ ಶಾಸಕರಾಗಿದ್ದಾರೆ. ಆದರೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಸ್ಪರ್ಧಿಸಲು ಕಿರಣ್ ಜಾಧವ್ ಆಸಕ್ತರಾಗಿದ್ದು ಇದೀಗ ದೆಹಲಿ ಮಟ್ಟದಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ …

Read More »

ಬೆಳಗಾವಿ ಗ್ರಾಮೀಣದಲ್ಲಿ ಮರಾಠಾ ಸಮುದಾಯಕ್ಕೆ ಆದ್ಯತೆ ನೀಡಲು ಅಭ್ಯರ್ಥಿಯೊಂದಿಗೆ ದಿಲ್ಲಿಯಲ್ಲಿ ರಮೇಶ ಜಾರಕಿಹೊಳಿ !

ಬೆಳಗಾವಿ ಗ್ರಾಮೀಣದಲ್ಲಿ ಮರಾಠಾ ಸಮುದಾಯಕ್ಕೆ ಆದ್ಯತೆ ನೀಡಲು ಅಭ್ಯರ್ಥಿಯೊಂದಿಗೆ ದಿಲ್ಲಿಯಲ್ಲಿ ರಮೇಶ ಜಾರಕಿಹೊಳಿ ! ಬೆಳಗಾವಿ : ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಮರಾಠಾ ಸಮಾಜಕ್ಕೆ ವಿಧಾನ ಸಭಾ ಚುನಾವಣೆಯಲ್ಲಿ ಮಣೆ ಹಾಕುವ ನಿಟ್ಟಿನಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಇದೀಗ ದೆಹಲಿ ಮಟ್ಟದಲ್ಲಿ ಪ್ರಯತ್ನ ನಡೆಸಿರುವುದು ತೀವ್ರ ಕುತೂಹಲ ಕೆರಳಿಸಿದೆ. ಈಗಾಗಲೇ ಅವರು ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಮನ್ನೋಳ್ಕರ್ ಅವರನ್ನು ಮುಖ್ಯಮಂತ್ರಿ ಬಸವರಾಜ್ …

Read More »

ಭುಗಿಲೆದ್ದ ಭಾಷಾ ವಿವಾದ ; ಉಭಯ ರಾಜ್ಯಗಳ ವಾಹನಗಳಿಗೆ ಹಾನಿ, ಮಸಿ

  ಬೆಳಗಾವಿ : ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಗಡಿ ವಿವಾದ ಮತ್ತೆ ತಾರಕಕ್ಕೇರಿದೆ. ಈ ಹಿನ್ನಲೆಯಲ್ಲಿ ವಾಹನಗಳಿಗೆ ಮಸಿ ಬಳಿದಿದ್ದಲ್ಲದೇ ಹಾನಿ ಮಾಡಲಾಗಿದೆ. ಕರ್ನಾಟಕದಲ್ಲಿ ಕನ್ನಡ ಸಂಘಟನೆಗಳು ಮಹಾರಾಷ್ಟ್ರದ ವಾಹನಗಳಿಗೆ ಮಸಿ ಬಳಿದಿದ್ದಾರೆ. ಮಹಾರಾಷ್ಟ್ರದಲ್ಲೂ ಶಿವಸೇನೆ ಕಾರ್ಯಕರ್ತರು ಕರ್ನಾಟಕದ ನೋಂದಣಿ ಹೊಂದಿರುವ ವಾಹನಗಳ ಮೇಲೆ ಅಟ್ಟಹಾಸ ಮೆರೆದಿದ್ದಾರೆ. ಮಹಾರಾಷ್ಟ್ರದ ಸಚಿವರಾದ ಚಂದ್ರಕಾಂತ ಪಾಟೀಲ ಮತ್ತು ಶಂಭುರಾಜೇ ದೇಸಾಯಿ ಅವರಿಗೆ ಕರ್ನಾಟಕ ಪ್ರವೇಶ ನಿರಾಕರಿಸಿರುವುದನ್ನು ಪ್ರತಿಭಟಿಸಿ ಮಹಾರಾಷ್ಟ್ರದಲ್ಲಿ ಶಿವಸೇನಾ ಕಾರ್ಯಕರ್ತರು …

Read More »

ಕರ್ನಾಟಕ ಸೇರಲು ಮತ್ತಷ್ಟು ಮಹಾ ಗ್ರಾಮಗಳಿಂದ ಠರಾವ್ !

    ಬೆಳಗಾವಿ : ಮೂಲಭೂತಗಳ ಸೌಲಭ್ಯಗಳ ಕೊರತೆ ಅನುಭವಿಸುತ್ತಿರುವ ಮಹಾರಾಷ್ಟ್ರಕ್ಕೆ ಸೇರಿರುವ ಅಚ್ಚಗನ್ನಡ ಪ್ರದೇಶಗಳು ಇದೀಗ ಕರುನಾಡು ಸೇರುವ ಠರಾವ್ ಅಂಗೀಕರಿಸಿವೆ. ಕನ್ನಡಿಗರು ಹೆಚ್ಚಾಗಿ ವಾಸಿಸುವ ಮಹಾರಾಷ್ಟ್ರದ ಗಡಿಭಾಗದ ಕನ್ನಡ ಪ್ರದೇಶಗಳಿಗೆ ಆ ರಾಜ್ಯ ಸರ್ಕಾರ ಯಾವುದೇ ಮೂಲಭೂತ ಸೌಲಭ್ಯ ಕಲ್ಪಿಸುತ್ತಿಲ್ಲ ಎಂದು ಆರೋಪಿಸಿ ಹಲವು ಗ್ರಾಮ ಪಂಚಾಯಿತಿಗಳು ಇದೀಗ ಮಹಾರಾಷ್ಟ್ರದ ವಿರುದ್ಧ ಸಮರ ಸಾರಿವೆ. ಸುಮಾರು 11 ಗ್ರಾಮ ಪಂಚಾಯಿತಿಗಳು ಈಗ ಠರಾವ್ ಅಂಗೀಕರಿಸಿದ್ದು ನಾವು ನಾವು …

Read More »

ಮಹಾರಾಷ್ಟ್ರ ಸಚಿವರಿಗೆ ಎಚ್ಚರಿಕೆ ರವಾನಿಸಿದ ಕರವೇ!!

ಮಹಾರಾಷ್ಟ್ರ ಸಚಿವರಿಗೆ ಎಚ್ಚರಿಕೆ ರವಾನಿಸಿದ ಕರವೇ!! ಬೆಳಗಾವಿ : ಬೆಳಗಾವಿಯಲ್ಲಿ ಮರಾಠಿ ಭಾಷಿಕರು ಮತ್ತು ಕನ್ನಡಿಗರು ಸೌಹಾರ್ದತೆಯಿಂದ ಬದುಕುತ್ತಿದ್ದು,ಬೆಳಗಾವಿಯ ಮುಗ್ದ ಮರಾಠಿ ಭಾಷಿಕರನ್ನು ಕನ್ನಡಿಗರ ವಿರುದ್ದ ಎತ್ತಿಕಟ್ಟಿ,ಭಾಷಾ ವೈಷಮ್ಯದ ವಿಷ ಬೀಜ ಬಿತ್ತಲು ಬೆಳಗಾವಿಗೆ ಆಗಮಸುತ್ತಿರುವ,ಬೆಳಗಾವಿಯ ಶಾಂತಿಯನ್ನು ಕದಡುವದಕ್ಕಾಗಿಯೇ ಬೆಳಗಾವಿಗೆ ಆಗಮಿಸುತ್ತಿರುವ ಮಹಾರಾಷ್ಟ್ರ ಇಬ್ಬರು ಸಚಿವರಿಗೆ ಬೆಳಗಾವಿ ಪ್ರವೇಶಕ್ಕೆ ಕಡಿವಾಣ ಹಾಕದಿದ್ದರೆ ಕರವೇ ಕಾರ್ಯಕರ್ತರು ಮಹಾರಾಷ್ಟ್ರದ ಇಬ್ಬರು ಸಚಿವರಿಗೆ ಪಾಠ ಕಲಿಸಬೇಕಾಗುತ್ತದೆ ಎಂದು ಕರವೇ ಬೆಳಗಾವಿ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ …

Read More »

10ಕ್ಕೂ ಹೆಚ್ಚು ಮಠಾಧೀಶರೊಂದಿಗೆ ಶಾಸಕ ರಮೇಶ ಜಾರಕಿಹೊಳಿ ಗೌಪ್ಯ ಸಭೆ.!

10ಕ್ಕೂ ಹೆಚ್ಚು ಮಠಾಧೀಶರೊಂದಿಗೆ ಶಾಸಕ ರಮೇಶ ಜಾರಕಿಹೊಳಿ ಗೌಪ್ಯ ಸಭೆ.! ಬೆಳಗಾವಿ: ಗೋಕಾಕ ಶಾಸಕ, ಸಾಹುಕಾರ್ ರಮೇಶ ಜಾರಕಿಹೊಳಿ ಅವರ ಬೆಳಗಾವಿ ನಗರದ‌ ನಿವಾಸದಲ್ಲಿ 10 ಕ್ಕೂ ಹೆಚ್ಚು ಮಠಾಧೀಶರೊಂದಿಗೆ ಗೌಪ್ಯ ಸಭೆ ಆರಂಭಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಹಿಂದುಳಿದ ವರ್ಗಗಳ ಮಠಾಧೀಶರೊಂದಿಗೆ ಶಾಸಕ ರಮೇಶ ಜಾರಕಿಹೊಳಿ ಸಭೆ ನಡೆಸಿದ್ದಾರೆ.‌ ಸುದೀರ್ಘ ಚರ್ಚೆ ನಡೆಸಿದ್ದು, ವಿವಿಧ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Read More »

ಮಮದಾಪೂರ ಗ್ರಾಪಂ ನೂತನ ಅಧ್ಯಕ್ಷ-ಉಪಾಧ್ಯಕ್ಷರಿಂದ ರಮೇಶ ಜಾರಕಿಹೊಳಿ ಅವರಿಗೆ ಸನ್ಮಾನ.!

ಮಮದಾಪೂರ ಗ್ರಾಪಂ ನೂತನ ಅಧ್ಯಕ್ಷ-ಉಪಾಧ್ಯಕ್ಷರಿಂದ ರಮೇಶ ಜಾರಕಿಹೊಳಿ ಅವರಿಗೆ ಸನ್ಮಾನ.! ಗೋಕಾಕ: ತಾಲ್ಲೂಕಿನ ಮಮದಾಪೂರ ಗ್ರಾಮ ಪಂಚಾಯತಗೆ ನೂತನ ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷ ರಮೇಶ ಗಾಣಗಿ, ಉಪಾಧ್ಯಕ್ಷ ಲಕ್ಷ್ಮೀ ಅವರಾದಿ ಅವರು ಶಾಸಕ ರಮೇಶ ಜಾರಕಿಹೊಳಿ ಅವರನ್ನು ಸನ್ಮಾನಿಸಿದರು. ನಂತರ ವಿಧಾನ ಪರಿಷತ ಸದಸ್ಯ ಲಖನ ಜಾರಕಿಹೊಳಿ ಅವರ ಗೃಹ ಕಚೇರಿಗೆ ತೆರಳಿ ಲಖನ ಜಾರಕಿಹೊಳಿ ಅವರನ್ನು ಸನ್ಮಾನಿಸಿದರು. ಶಾಸಕ ರಮೇಶ ಜಾರಕಿಹೊಳಿ ಮತ್ತು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ …

Read More »

ನವರಾತ್ರಿ ಉತ್ಸವದ ಕೊನೆಯದಿನವಾದ ಶುಕ್ರವಾರ ದುರ್ಗಾಮಾತೆಗೆ ವಿಶೇಷ ಪೂಜೆ ಸಲ್ಲಿಸಿದ -ಅಂಬಿರಾವ ಪಾಟೀಲ.!

ನವರಾತ್ರಿ ಉತ್ಸವದ ಕೊನೆಯದಿನವಾದ ಶುಕ್ರವಾರ ದುರ್ಗಾಮಾತೆಗೆ ವಿಶೇಷ ಪೂಜೆ ಸಲ್ಲಿಸಿದ -ಅಂಬಿರಾವ ಪಾಟೀಲ.! ಗೋಕಾಕ: ನವರಾತ್ರಿ ಉತ್ಸವದ ಕೊನೆಯದಿನವಾದ ಶುಕ್ರವಾರದಂದು ಆಚಾರ್ಯ ಗಲ್ಲಿ ನವರಾತ್ರಿ ಉತ್ಸವ ಕಮೀಟಿ ಹಾಗೂ ದುರ್ಗಾಮಾತಾ ದೌಡ್ ಸಂಘಟಕರು ಹಮ್ಮಿಕೊಂಡ ದುರ್ಗಾಮಾತಾ ಉತ್ಸವ ಮೂರ್ತಿಗೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರು ಶ್ರೀ ದುರ್ಗಾಮಾತೆಗೆ ವಿಶೇಷ ಪೂಜೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಆಚಾರ್ಯ ಗಲ್ಲಿ ನವರಾತ್ರಿ ಉತ್ಸವ ಕಮೀಟಿ ಹಾಗೂ ದುರ್ಗಾಮಾತಾ ದೌಡ್ ಸಂಘಟಕರು ಕಾರ್ಮಿಕ …

Read More »

ಶಿಥಿಲೀಕರಣಗೊಂಡಿದ್ದ ಆರೋಗ್ಯ ಇಲಾಖೆಯ ವಸತಿ ಗೃಹಗಳಿಗೆ ಕಾಯಕಲ್ಪ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ!!

ರೋಗಿಗಳ ಅನುಕೂಲಕ್ಕಾಗಿ ಸ್ವಂತ ಹಣ ನೀಡಿ ದುರಸ್ತಿ ಮಾಡಿಸಿ ನವೀಕರಣಗೊಳಿಸಿದ ಮಾದರಿ ಶಾಸಕ.ಬಾಲಚಂದ್ರ ಜಾರಕಿಹೊಳಿ ಅವರ ಜನಪರ ಕಾಳಜಿಗೆ ಷಹಬಾಷ ಎಂದ ಮೂಡಲಗಿ ಜನ!! ಯುವ ಭಾರತ ಸುದ್ದಿ, ಮೂಡಲಗಿ : ಕೋವಿಡ್ ಎರಡನೇ ಅಲೆ ಸಾಕಷ್ಟು ಪರಿಣಾಮ ಬೀರುತ್ತಿರುವುದನ್ನು ಗಂಭೀರವಾಗಿ ಪರಿಗಣ ಸಿರುವ ಅರಬಾವಿ ಕ್ಷೇತ್ರದ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಕ್ಷೇತ್ರದ ಜನರ ಆರೋಗ್ಯ ರಕ್ಷಣೆಗೆ ಕಟಿಬದ್ಧರಾಗಿ ನಿಂತಿದ್ದಾರೆ. ತಮ್ಮ ಸ್ವಂತ ವೆಚ್ಚದಲ್ಲಿ ಮೂಡಲಗಿಯಲ್ಲಿ …

Read More »

ಸಿಪಿಐ ವೆಂಕಟೇಶ್ ಮುರನಾಳ ಸರ್ವಧಿಕಾರಿ ಧೋರಣೆ ಖಂಡಿಸಿ ಮನವಿ!!

  ಸಿಪಿಐ ವೆಂಕಟೇಶ್ ಮುರನಾಳ ಸರ್ವಧಿಕಾರಿ ಧೋರಣೆ ಖಂಡಿಸಿ ಮನವಿ!!   ಯುವ ಭಾರತ ಸುದ್ದಿ, ಮೂಡಲಗಿ : ಗುರುವಾರ ಬೆಳ್ಳಿಗೆ ಪತ್ರಿಕೆ ವಿತರಿಸಿಸುವಾಗ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಸ್ಥಳೀಯ ಸಿಪಿಐ ವೆಂಕಟೇಶ ಮುರನಾಳ ಅವರು ದಿನಪತ್ರಿಕೆಯ ವರದಿಗಾರ ಶಿವಬಸು ಮೋರೆ ಅವರನ್ನು ತಡೆದು ಪ್ರಶ್ನಿಸಿದಾಗ ಪತ್ರಕರ್ತನು ದಿನಪತ್ರಿಕೆ ವಿತರಿಸಿ ಮನೆಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾಗಿಯು ಆತನ ಮಾತನ್ನು ಆಲಿಸದೇ ಪತ್ರಕರ್ತನನ್ನು ಹಿಗ್ಗಾಮುಗ್ಗಾ ಥಳಿಸಿರುವುದು ಖಂಡನೀಯವಾಗಿದೆ ಎಂದು ಮಾಜಿ ಪ್ರೆಸ್ …

Read More »