Breaking News

ಮಮದಾಪೂರ ಗ್ರಾಪಂ ನೂತನ ಅಧ್ಯಕ್ಷ-ಉಪಾಧ್ಯಕ್ಷರಿಂದ ರಮೇಶ ಜಾರಕಿಹೊಳಿ ಅವರಿಗೆ ಸನ್ಮಾನ.!

Spread the love

ಮಮದಾಪೂರ ಗ್ರಾಪಂ ನೂತನ ಅಧ್ಯಕ್ಷ-ಉಪಾಧ್ಯಕ್ಷರಿಂದ ರಮೇಶ ಜಾರಕಿಹೊಳಿ ಅವರಿಗೆ ಸನ್ಮಾನ.!


ಗೋಕಾಕ: ತಾಲ್ಲೂಕಿನ ಮಮದಾಪೂರ ಗ್ರಾಮ ಪಂಚಾಯತಗೆ ನೂತನ ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷ ರಮೇಶ ಗಾಣಗಿ, ಉಪಾಧ್ಯಕ್ಷ ಲಕ್ಷ್ಮೀ ಅವರಾದಿ ಅವರು ಶಾಸಕ ರಮೇಶ ಜಾರಕಿಹೊಳಿ ಅವರನ್ನು ಸನ್ಮಾನಿಸಿದರು.
ನಂತರ ವಿಧಾನ ಪರಿಷತ ಸದಸ್ಯ ಲಖನ ಜಾರಕಿಹೊಳಿ ಅವರ ಗೃಹ ಕಚೇರಿಗೆ ತೆರಳಿ ಲಖನ ಜಾರಕಿಹೊಳಿ ಅವರನ್ನು ಸನ್ಮಾನಿಸಿದರು.
ಶಾಸಕ ರಮೇಶ ಜಾರಕಿಹೊಳಿ ಮತ್ತು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರ ನೇತ್ರತ್ವದಲ್ಲಿ ಮಮದಾಪೂರ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಜರುಗಿತ್ತು.
ಗ್ರಾಪಂ ಸದಸ್ಯರುಗಳಾದ ಸುರೇಶ ಸನದಿ, ಕೆಂಪಣ್ಣ ಮೈಲನ್ನವರ, ಜಗದೀಶ್ ಇಟ್ನಾಳ, ಕಲ್ಲಪ್ಪ ಸಿಂಗಾಡಿ, ಭದ್ರು ಮೈಲನ್ನವರ, ಭೀಮಶಿ ಚಿಕ್ಕನ್ನವರ, ಬಸು ಚಿಕ್ಮನ್ನವರ, ಶಿವಪ್ಪ ದಳವಾಯಿ, ಎಲ್ ಅರ್ ವಗ್ಗನ್ನವರ, ಸುನೀಲ ಅವರಾದಿ, ಮುತ್ತೆಪ್ಪ ರಕ್ಷಿ, ಸಿದ್ಧಲಿಂಗ ಪೂಜೇರಿ ಮುಖಂಡರಾದ ಪರಗೌಡ ಪಾಟೀಲ ಸೇರಿದಂತೆ ಮಮದಾಪೂರ, ಶಿವಾಪೂರ, ದುಂಡಾನಟ್ಟಿ ಅನೇಕರು ಇದ್ದರು.


Spread the love