ಕಾರ್ಯನಿರತ ಪತ್ರಕರ್ತರ ಧ್ವನಿಯ ಪದಾಧಿಕಾರಿಗಳಿಗೆ ಸನ್ಮಾನ! ಯುವ ಭಾರತ ಸುದ್ದಿ ಕೊಲ್ಹಾರ : ಪಟ್ಟಣದ ಅಂಜುಮನ್ ಇಸ್ಲಾಂ ಕಮಿಟಿ ಹಾಗೂ ಅಂಜುಮನ್ ಪಬ್ಲಿಕ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ವತಿಯಿಂದ ಸಾಮಾಜಿಕ ಪ್ರದರ್ಶನ ಹಾಗೂ ಆಹಾರ ಹಬ್ಬ ಕಾರ್ಯಕ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ಧ್ವನಿಯ ವಿಜಯಪುರ ಜಿಲ್ಲಾ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಇರ್ಫಾನ್ ಬೀಳಗಿ,ಕೊಲ್ಹಾರ ತಾಲ್ಲೂಕಾಧ್ಯಕ್ಷರಾಗಿ ಆಯ್ಕೆಯಾದ ದಸ್ತಗಿರ ಬಿದರಿ ಅವರಿಗೆ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ದಿಗಂಬರೇಶ್ವರ ಮಠದ ಕಲ್ಲಿನಾಥ ಶ್ರೀಗಳು, …
Read More »ಹಪ್ಸಾ ಕಲಾದಗಿಗೆ ಪ್ರಶಸ್ತಿ ಪ್ರದಾನ!
ಹಪ್ಸಾ ಕಲಾದಗಿಗೆ ಪ್ರಶಸ್ತಿ ಪ್ರದಾನ! ಯುವ ಭಾರತ ಸುದ್ದಿ ಕೊಲ್ಹಾರ : ಬಣ್ಣದಮನೆ ಸಾಂಸ್ಕೃತಿಕ ವೇದಿಕೆ, ಗದಗ ಹಾಗೂ ಕರ್ನಾಟಕ ಬಾಲವಿಕಾಸ ಅಕಾಡೆಮಿ, ಧಾರವಾಡ ಇವರು ಆಯೋಜಿಸಿದ್ದ ಚಿಣ್ಣರ ಚಿತ್ರ ಚಿತ್ತಾರ ಎಂಬ ರಾಜ್ಯ ಮಟ್ಟದ ಮಕ್ಕಳ ಚಿತ್ರ ಕಲೋತ್ಸವ ಸ್ಪರ್ಧೆಯಲ್ಲಿ ಪಟ್ಟಣದ ಸಿಕ್ಯಾಬ್ ಪ್ರೌಢ ಶಾಲೆಯ ವಿದ್ಯಾರ್ಥಿನಿ ಕುಮಾರಿ ಹಪ್ಸಾ ಎಚ್ ಕಲಾದಗಿ ಪುಟ್ಟ ಕಲಾವಿದೆ ಪ್ರಶಸ್ತಿಗೆ ಭಾಜನಳಾಗಿದ್ದಾಳೆ. ಗದಗದ ಈಚೆಗೆ ನಡೆದ ಮಕ್ಕಳ ರಾಜ್ಯ ಮಟ್ಟದ ಕಲೋತ್ಸವದ …
Read More »ವಿಸ್ಕ ಅಗ್ರೋ ಕೃಷಿ ರತ್ನ ಪ್ರಶಸ್ತಿ ಪಡೆದ ಮಲಘಾಣ ಗ್ರಾಮದ ರೈತ:ಲಕ್ಷ್ಮಣ ನಿಂಗನೂರು!
ವಿಸ್ಕ ಅಗ್ರೋ ಕೃಷಿ ರತ್ನ ಪ್ರಶಸ್ತಿ ಪಡೆದ ಮಲಘಾಣ ಗ್ರಾಮದ ರೈತ:ಲಕ್ಷ್ಮಣ ನಿಂಗನೂರು! ಯುವ ಭಾರತ ಸುದ್ದಿ ಕೊಲ್ಹಾರ: ನಿರ್ಜನವಾಗಿದ್ದ, ಮಡ್ಡಿ ಭೂಮಿ ಹೊಂದಿದ್ದ ಈ ಪ್ರದೇಶ ಎಂ.ಬಿ.ಪಾಟೀಲರವರ ಪ್ರಯತ್ನದ ಫಲವಾಗಿ ನೀರಾವರಿಗೆ ಒಳಪಟ್ಟು ಇಂದು ಬಂಗಾರವನ್ನು ಬೆಳೆಯುವ ಭೂಮಿಯಾಗಿದೆ.ಭೂಮಿಯ ದರವೂ ಹೆಚ್ಚಿದೆ ಎಂದು ಡಾ.ಮಹಾಂತೇಶ ಬಿರಾದಾರ ಹೇಳಿದರು. ಕೊಲ್ಹಾರ ತಾಲೂಕಿನ ಮಲಘಾಣದ ಲಕ್ಷಣ ಶಿವಪ್ಪ ನಿಂಗನೂರ ಅವರ ತೋಟದಲ್ಲಿ ವಿಸ್ಕ ಅಗ್ರೋ ಕಂಪನಿದವರು ಏರ್ಪಡಿಸಿದ ಈರುಳ್ಳಿ ಬೆಳೆಯ ಕಾರ್ಯಕ್ರಮದಲ್ಲಿ …
Read More »ಝಳಕಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ!
ಝಳಕಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ! ಯುವ ಭಾರತ ಸುದ್ದಿ ಝಳಕಿ : ಗ್ರಾಮೀಣ ಪ್ರದೇಶದ ಬಡ ಜನರಿಗೆ ಬಿ ಎಲ್ ಡಿ ಇ ಆಸ್ಪತ್ರೆ ಸಂಜೀವಿನಿಯಾಗಿದೆ, ಅಲ್ಲದೇ ಗ್ರಾಮೀಣ ಭಾಗದ ಜನರ ಆರೋಗ್ಯದ ಬಗ್ಗೆಯು ಅಪಾರ ಕಾಳಜಿ ಹೊಂದಿದ ಸಂಸ್ಥೆಯಾಗಿದೆ ಎಂದು ಗ್ರಾಪಂ ಅಧ್ಯಕ್ಷ ಸಣ್ಣಪ್ಪ ತಳವಾರ ಹೇಳಿದರು. ಝಳಕಿ ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜ ಆವರಣದಲ್ಲಿ ನಡೆದ ನಿಮ್ಮ ಗ್ರಾಮಕ್ಕೆ ನಮ್ಮ ಆರೋಗ್ಯ ಸೇವೆ ಬೃಹತ್ …
Read More »ಗ್ರಾಮ ಸ್ವರಾಜ್ಯಕಾಗಿ ಗ್ರಾಮ ಪಂಚಾಯತಿ ಸದಸ್ಯರು ಬೆಂಗಳೂರು ಚಲೋ!
ಗ್ರಾಮ ಸ್ವರಾಜ್ಯಕಾಗಿ ಗ್ರಾಮ ಪಂಚಾಯತಿ ಸದಸ್ಯರು ಬೆಂಗಳೂರು ಚಲೋ! ಯುವ ಭಾರತ ಸುದ್ದಿ ಕೊಲ್ಹಾರ : ಕೋವಿಡ್ ಸಂದರ್ಭದಲ್ಲಿ ಮೃತಪಟ್ಟಿರುವ ಗ್ರಾಮ ಪಂಚಾಯತಿ ನೌಕರರ ಕುಟುಂಬಕ್ಕೆ ಜಿಲ್ಲಾ ಪಂಚಾಯತಿ ಹಾಗೂ ತಾಲೂಕ ಪಂಚಾಯತಿಗಳಲ್ಲಿ ಲಭ್ಯವಿರುವ ತೆರಿಗೆ ಹಣದಲ್ಲಿ ಪ್ರತಿ ಕುಟುಂಬಕ್ಕೆ 30 ಲಕ್ಷ ರೂಪಾಯಿ ಪರಿಹಾರ ಧನವನ್ನು ನೀಡಬೇಕು ಎಂದು ಕೊಲ್ಹಾರ ತಾಲೂಕಾ ಗ್ರಾಮ ಪಂಚಾಯತಿ ಸದಸ್ಯರ ಒಕ್ಕೂಟದ ಅಧ್ಯಕ್ಷ ಪ್ರದೀಪ ಪಾಟೀಲ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ …
Read More »ಬೆಳಗಾವಿ ವಿವಾದ ; ಅಮಿತ್ ಶಾ ಮಧ್ಯಸ್ಥಿಕೆಗೆ ಮಹಾರಾಷ್ಟ್ರ ಭಾರಿ ಒತ್ತಡ
ಯುವ ಭಾರತ ಸುದ್ದಿ ದೆಹಲಿ : ಸುಪ್ರೀಂ ಕೋರ್ಟ್ ನಲ್ಲಿ ಗಡಿ ವಿವಾದ ಇದೆ. ಈ ನಡುವೆ ಮಹಾರಾಷ್ಟ್ರ ಕೇಂದ್ರ ಗೃಹ ಸಚಿವರ ಮಧ್ಯಸ್ಥಿಕೆಗೆ ಒತ್ತಾಯಿಸುತ್ತಿದೆ. ಇದು ಮಹಾರಾಷ್ಟ್ರಕ್ಕೆ ಸುಪ್ರೀಂಕೋರ್ಟ್ ನೀಡುವ ತೀರ್ಪಿನ ಮೇಲೆ ಅನುಮಾನ ಇಲ್ಲವೋ ಎಂಬಂತಾಗಿದೆ. ಸುಪ್ರೀಂಕೋರ್ಟ್ ನೀಡುವ ತೀರ್ಪನ್ನು ಕಾದು ನೋಡುವಷ್ಟು ತಾಳ್ಮೆ ಮಹಾರಾಷ್ಟ್ರಕ್ಕೆ ಇಲ್ಲ ಎನ್ನುವಷ್ಟರ ಮಟ್ಟಿಗೆ ಆ ರಾಜ್ಯ ಈಗ ಅವಸರದಲ್ಲಿದೆ. ಗಡಿ ವಿವಾದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ …
Read More »ಸಂಸತ್ತಿನಲ್ಲಿ ಗಡಿ ವಿವಾದ ಕೆದಕಿದ ಮಹಾ ಸಂಸದೆ !
ಸಂಸತ್ತಿನಲ್ಲಿ ಗಡಿ ವಿವಾದ ಕೆದಕಿದ ಮಹಾ ಸಂಸದೆ ! ದೆಹಲಿ : ಬೆಳಗಾವಿ ವಿವಾದವನ್ನು ಮಹಾರಾಷ್ಟ್ರ ಸಂಸದರು ಸಂಸತ್ತಿನಲ್ಲಿ ಪ್ರಸ್ತಾಪಿಸಲು ಮುಂದಾಗಿರುವುದು ಕಂಡುಬಂದಿದೆ. ಬೆಳಗಾವಿ ಗಡಿ ವಿವಾದ ಸಂಬಂಧ ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಿರುದ್ಧ ಎನ್ ಸಿಪಿ ನಾಯಕಿ ಸುಪ್ರಿಯಾ ಸುಳೆ ಇಂದು ತೀವ್ರ ವಾಗ್ದಾಳಿ ನಡೆಸಿದರು. ಮಹಾರಾಷ್ಟ್ರ ಸಂಸದರು ಲೋಕಸಭೆಯಲ್ಲೂ ಗಡಿ ವಿವಾದದ ಕಿಚ್ಚು ಹೊತ್ತಿಸಲು ಮುಂದಾಗಿದ್ದಾರೆ.ಎನ್ ಸಿಪಿ ಸದಸ್ಯೆ ಸುಪ್ರಿಯಾ ಸುಳೆ ಅವರು, ಉಭಯ ರಾಜ್ಯಗಳಲ್ಲಿ …
Read More »ನಾಳೆಯ ವಿಚಾರಣೆ ಸಂಬಂಧ ಸಿಎಂ ಮಹತ್ವದ ಚರ್ಚೆ!!
ನಾಳೆಯ ವಿಚಾರಣೆ ಸಂಬಂಧ ಸಿಎಂ ಮಹತ್ವದ ಚರ್ಚೆ!! ದೆಹಲಿ : ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ವಿಚಾರಣೆ ನ.30 ರಂದು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹಿರಿಯ ವಕೀಲ ಮುಕುಲ್ ರೋಹಟಗಿ ಅವರನ್ನು ಮಂಗಳವಾರ ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದರು. ನ್ಯಾಯಾಲಯದಲ್ಲಿ ವಾದ ಮಂಡನೆಗೆ ಸಕಲ ಸಿದ್ದತೆ ನಡೆದಿದೆ. ಮಹಾರಾಷ್ಟ್ರ ರಾಜ್ಯದ ಕೆಲವು ಹಳ್ಳಿಗಳ ಜನ ಕರ್ನಾಟಕ ಸೇರಲು ಒಲವು …
Read More »ಹನಿ ಟ್ರ್ಯಾಪ್ : ಬ್ಲ್ಯಾಕಮೇಲ ಮಾಡಲು ಹೋಗಿ ಜೈಲಿಗೆ ಸೇರಿದ ದುರುಳರು
ಹನಿ ಟ್ರ್ಯಾಪ್ : ಬ್ಲ್ಯಾಕಮೇಲ ಮಾಡಲು ಹೋಗಿ ಜೈಲಿಗೆ ಸೇರಿದ ದುರುಳರು ಬೆಳಗಾವಿ .ಜು.30: ಜಮಖಂಡಿ ಮೂಲದ ವ್ಯಕ್ಯಿಯೋರ್ವನನ್ನು ಹನಿ ಟ್ರ್ಯಾಪ್ ಬಲೆಗೆ ಕೆಡವಿ ,ಆತನಿಂದ 10 ಲಕ್ಷ ರೂ ನೀಡುವಂತೆ ಹೇಳಿ ವ್ಯಕ್ತಿಯನ್ನು ಬ್ಲ್ಯಾಕ್ ಮೇಲ ಮಾಡಲು ಹೊರಟಿದ್ದ ಐದು ಜನರ ದುರುಳರು ಇದೀಗ ಬೆಳಗಾವಿ ಹಿಂಡಲಗಾ ಜೈಲಿನ ಅತಿಥಿಗಳಾಗಿದ್ದಾರೆ. ಹಲವು ದಿನಗಳಿಂದ ಜಮಖಂಡಿ ಮೂಲದ ವ್ಯಕ್ಯಿಯ ಜೊತೆ ನಯವಾದ ಮತ್ತು ಸುಮಧುರ ಮಾತುಗಳಿಂದ ಸ್ನೇಹ ಬೆಳೆಸಿದ ಮೂವರು …
Read More »ರಾಜ್ಯದಲ್ಲಿ 5503 ಬೆಳಗಾವಿಯಲ್ಲಿ 279 ಜನರಿಗೆ ಕೊರೊನಾ ಸೊಂಕು
ರಾಜ್ಯದಲ್ಲಿ 5503 ಬೆಳಗಾವಿಯಲ್ಲಿ 279 ಜನರಿಗೆ ಕೊರೊನಾ ಸೊಂಕು ಬೆಳಗಾವಿ. ಜು.29: ರಾಜ್ಯದಲ್ಲಿ ಕೊರೊನಾ ಸೊಂಕು ತನ್ನ ಅಟ್ಟಹಾಸ ಮುಂದುವರೆಸಿದ್ದು, ಇಂದು ರಾಜ್ಯದಲ್ಲಿ 5503 ಜನರಿಗೆ ಕೊರೊನಾ ಸೊಂಕು ತಗುಲಿದೆ. ರಾಜ್ಯದಲ್ಲಿ ಇಂದು 92 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 279 ಜನರಿಗೆ ಕೊರೊನಾ ಸೊಂಕು ತಗುಲಿದ್ದು, 3 ಜನ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಇಂದುಬ2397 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ . ಬೆಂಗಳೂರು ನಗರ -2270, …
Read More »