Breaking News

ಕೇಂದ್ರ ಸರಕಾರದ ವಿರುದ್ಧ ಕಾಂಗ್ರೇಸ್ ಪ್ರತಿಭಟನೆ.!

Spread the love


ಗೋಕಾಕ: ಕಳೆದ ಮೂರು ತಿಂಗಳಿನಿAದ ಕೃಷಿ ವಿರೋಧಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವAತೆ ಆಗ್ರಹಿಸಿ ದೆಹಲಿಯ ಗಡಿಗಳಲ್ಲಿ ಕೂಳಿತಿರುವ ರೈತರ ಬಗ್ಗೆ ತಾತ್ತಸಾರ ಭಾವನೆ ತಾಳಿರುವ ಮತ್ತು ದಿನನಿತ್ಯ ಏರಿಕೆಯಾಗುತ್ತಿರುವ ತೈಲಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಯ ಬಗ್ಗೆ ಕಾಳಜಿ ಮಾಡದಿರುವ ಕೇಂದ್ರ ಸರಕಾರದ ನೀತಿಯನ್ನು ವಿರೋಧಿಸಿ ನಗರದಲ್ಲಿ ಗೋಕಾಕ ಮತ್ತು ಅರಭಾವಿ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಬುಧವಾರದಂದು ನಗರದ ಸಂಗೋಳ್ಳಿ ರಾಯಣ್ಣ ವೃತ್ತದಿಂದ ಪ್ರತಿಭಟನೆ ಮೆರವಣಿಗೆ ನಡೆಯಿಸಿ ಬಸವೇಶ್ವರ ವೃತ್ತಕ್ಕೆ ಆಗಮಿಸಿ ಕೆಲಕಾಲ ರಸ್ತೆ ತಡೆ ನಡೆಯಿಸಿ ನಂತರ ತಹಶೀಲ್ದಾರ್ ಕಛೇರಿಗೆ ತೆರಳಿ ಮನವಿ ಅರ್ಪಿಸಿದರು.
ದೇಶಕ್ಕೆ ಸ್ವಾತಂತ್ರ‍್ಯ ದೊರಕಿದ ಸಮಯದಲ್ಲಿ ಆಹಾರಧ್ಯಾನ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಕಾಂಗ್ರೆಸ್ ಪಕ್ಷದ ಸರಕಾರ ಮುಂದಾಲೋಚನೆ ಮಾಡಿ ಹಸಿರು ಕ್ರಾಂತಿಗೆ ಬೆಂಬಲಿಸಿದ ಪರಿಣಾಮ ಇಂದು ಬೇರೆ ದೇಶಗಳಿಗೆ ಆಹಾರಧ್ಯಾನ ರಪ್ತು ಮಾಡುವ ಸ್ಥಿತಿಗೆ ದೇಶ ಬಂದಿದೆ. ಆದರೆ ಕೇಂದ್ರದ ನರೇಂದ್ರ ಮೋದಿ ಸರಕಾರ ರೈತರ ಬೆನ್ನೆಲುಬು ಮುರಿಯಲು ಹಾಗೂ ಭಂಡವಾಳ ಶಾಯಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮೂರು ಕೃಷಿ ಕಾನೂನುಗಳನ್ನು ತರುವದಲ್ಲದೆ ಎಪಿಎಂಸಿಗಳನ್ನು ಮುಚ್ಚುವ ಹೂನ್ನಾರ ನಡೆಸಿದ್ದು, ಅತ್ಯಂತ ಖಂಡನೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲಬೆಲೆ ಇಳಿದರು ಕೂಡಾ ಪ್ರತಿದಿನ ಪ್ರೆಟ್ರೋಲ್, ಡಿಸೇಲ್ ಹಾಗೂ ಸಾರ್ವಜನಿಕರಿಗೆ ಅತ್ಯಾವಶ್ಯಕವಾದ ಅಡುಗೆ ಅನಿಲ ಬೆಲೆ ಏರಿಕೆ ಮಾಡಿ ಜನಸಾಮಾನ್ಯರಿಗೆ ತೊಂದರೆ ನೀಡುವುದಲ್ಲದೆ ಬೆಲೆ ಏರಿಕೆಗೆ ಆಸ್ವದ ಕೊಟ್ಟಿದ್ದು ಕೇಂದ್ರ ಸರಕಾರದ ವಿಫಲತೆಗೆ ಕಾರಣ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಕೂಡಲೇ ಕೇಂದ್ರ ಸರಕಾರ ರೈತ ವಿರೋಧಿ ಕಾನೂನುಗಳನ್ನು ತಕ್ಷಣದಿಂದ ವಜಾಗೋಳಿಸಬೇಕು ಹಾಗೂ ತೈಲಬೆಲೆ ಕಡಿಮೆ ಮಾಡಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.
ಪ್ರತಿಭಟನೆಯಲ್ಲಿ ರಾಹುಲ ಹಾಗೂ ಪ್ರೀಯಾಂಕಾ ಜಾರಕಿಹೊಳಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ಕಾಂಗ್ರೆಸ್ ಮುಖಂಡರಾದ ಅರವಿಂದ ದಳವಾಹಿ, ಗುರುರಾಜ ಪೂಜೇರಿ, ಕಲ್ಲಪ್ಪಗೌಡಾ ಲಕ್ಕಾರ, ನಜೀರ ಶೇಖ್, ವಿವೇಕ ಜತ್ತಿ, ಬಸವರಾಜ ಹೊಳೆಯಾಚೆ, ಪ್ರಕಾಶ ಡಾಂಗೆ, ಲಗಮಣ್ಣ ಕಳಸನ್ನವರ, ಇಮ್ರಾನ ತಪಕಿರ, ಹನುಮಂತ ಗೋಪಾಳಿ, ಪರಸಪ್ಪ ತಿಮ್ಮಯನವರ, ಮಂಜೂಳಾ ರಾಮಗಾನಟ್ಟಿ, ಕಲ್ಪನಾ ಜೋಶಿ, ನೇಹಲಾ ಹೂಲಿಕಟ್ಟಿ, ಈರಣ್ಣಾ ಜನ್ಮಟ್ಟಿ, ಪ್ರವೀಣ ಶಿಪ್ರಿ ಸೇರಿದಂತೆ ಅನೇಕರು ಇದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

three × five =