ಡೈಗ್ನೋಸ್ಟಿಕ್ ಸೆಂಟರ್ ಲೋಕಾರ್ಪಣೆಗೊಳಿಸಿದ ಅಂಬಿರಾವ್ ಪಾಟೀಲ

ಯುವ ಭಾರತ ಸುದ್ದಿಗೋಕಾಕ : ನಗರದಲ್ಲಿ ನೂತನವಾಗಿ ಪ್ರಾರಂಭವಾದ ಆತ್ಯಾಧುನಿಕ ಸಲಕರಣೆಗಳನ್ನು ಹೊಂದಿರುವ ಗೋರೋಶಿ ಸ್ಕ್ಯಾನ್ ಮತ್ತು ಡೈಗ್ನೋಸ್ಟೀಕ್ ಸೆಂಟರ್ ನ್ನು ರವಿವಾರದಂದು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಲೋಕಾರ್ಪಣೆ ಮಾಡಿದರು.
ಡೈಗ್ನೋಸ್ಟೀಕ್ ಸೆಂಟರ್ ನಲ್ಲಿ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಫಿಲಿಪ್ಸ್ ಬ್ರಾಡ್ ಬ್ಯಾಂಡ್ ಡಿಜಿಟಲ್ ಇನಜೇನೀಯಾ ಸಿಎಕ್ಸ್ ೧.೫ ಟಿ , ೧೬ ಚಾನಲ್ ಎಂ. ಆರ್.ಐ , ಮೇಮೋಗ್ಯಾಪೀ ಸೇರಿದಂತೆ ಇತರ ಸೌಲಭ್ಯಗಳನ್ನು ಈ ಸ್ಕ್ಯಾನಿಂಗ್ ಸೆಂಟರ ನಲ್ಲಿ ಲಭ್ಯವಿವೆ ಎಂದು ಸೆಂಟರ್ ನ ಮುಖ್ಯ ವೈದ್ಯಾಧಿಕಾರಿ ಡಾ.ಶೆಟ್ಟೆಪ್ಪ ಗೋರೋಶಿ ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಟಿ.ಆರ್.ಕಾಗಲ್, ಮಡೆಪ್ಪ ತೋಳಿನವರ, ಲಕ್ಷ್ಮೀಕಾಂತ ಎತ್ತಿನಮನಿ , ರಾಮಪ್ಪ ಗೋರೋಶಿ, ಡಾ.ಕವಿತಾ ಗೋರೋಶಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
YuvaBharataha Latest Kannada News