Breaking News

ಶಿಕ್ಷಕರಿಗೆ ನೇಷನ್ ಬಿಲ್ಡರ್ ಮತ್ತು ವೃತ್ತಿ ಪರ ಸೇವಾ ಪ್ರಶಸ್ತಿ ಪ್ರದಾನ

Spread the love

ಶಿಕ್ಷಕರಿಗೆ ನೇಷನ್ ಬಿಲ್ಡರ್ ಮತ್ತು ವೃತ್ತಿ ಪರ ಸೇವಾ ಪ್ರಶಸ್ತಿ ಪ್ರದಾನ

ಯುವ ಭಾರತ ಸುದ್ದಿ ಗೋಕಾಕ :
ಜಗತ್ತಿನ ಎಲ್ಲಾ ವೃತ್ತಿಗಳಲ್ಲಿರುವುದು ಸೇವೆ ಮಾಡಲು, ಅದನ್ನು ಸೇವಕನೆಂಬ ಭಾವನೆಯಿಂದ ಮಾಡಿದರೆ ಎತ್ತರಕ್ಕೆರಲು ಸಾಧ್ಯ ಎಂದು ಸಾಹಿತಿ ಡಾ.ಶ್ರೀಶೈಲ ಮಠಪತಿ ಹೇಳಿದರು.
ಶನಿವಾರದಂದು ಸಾಯಂಕಾಲ ನಗರದ ರೋಟರಿ ರಕ್ತ ಬಂಡಾರದ ಆವರಣದಲ್ಲಿ ಆಯೋಜಿಸಿದ್ದ ಶಿಕ್ಷಕರಿಗೆ ನೇಷನ್ ಬಿಲ್ಡರ್ ಮತ್ತು ವೃತ್ತಿ ಪರ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಿಸ್ವಾರ್ಥ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಬದುಕಿಗೆ ಸೇವಾ ಮನೋಭಾವ ಬೇಕು. ಲಿಂಗೈಕ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಸೇವಾ ಮನೋಭಾವನೆ ನಮ್ಮಗೆಲ್ಲ ಮಾರ್ಗದರ್ಶಿಯಾಗಿದೆ.ಶಿಕ್ಷಕರು ಡಾ. ರಾಧಾಕೃಷ್ಣರಂತ ನಿಸ್ವಾರ್ಥ ಮನೋಭಾವವನ್ನು ಬೆಳೆಸಿಕೊಳ್ಳಬೇಕು.ಶಿವ ಸ್ವರೂಪಿ ಕ್ಷಮಾ, ಕರುಣೆ ಇರುವ ಶಿಕ್ಷಕರು ದೇಶವನ್ನು ಕಟ್ಟುವ ಶಿಲ್ಪಿಗಳು ಅಂತವರ ಸನ್ಮಾನ ಮಾದರಿಯಾಗಿದೆ.ಸೇವೆ ಮಾಡುವುದನ್ನು ಉಸಿರಾಗಿಸಿಕೊಂಡ ರೋಟರಿ ಸಂಸ್ಥೆಯವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.
ರೋಟರಿ ಸೇವಾ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಕಲ್ಲೋಳಿ, ಕಾರ್ಯದರ್ಶಿ ಸೋಮಶೇಖರ್ ಮಗದುಮ್ಮ, ರೋಟರಿ ಸಂಸ್ಥೆಯ ಅಧ್ಯಕ್ಷ ಸತೀಶ್ ನಾಡಗೌಡ, ಕಾರ್ಯದರ್ಶಿ ಮಲ್ಲಿಕಾರ್ಜುನ ಈಟಿ, ಇನ್ನರವ್ಹಿಲ್ ಅಧ್ಯಕ್ಷೆ ಆರತಿ ನಾಡಗೌಡ, ಉಪಾಧ್ಯಕ್ಷೆ ಗಿರಿಜಾ ಮುನ್ನವಳ್ಳಿಮಠ ಉಪಸ್ಥಿತರಿದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

eleven + 12 =