Breaking News

ವೈದ್ಯರು ದೈವಸ್ವರೂಪಿಗಳು- ಶಾಸಕ ಬಾಲಚಂದ್ರ ಜಾರಕಿಹೊಳಿ!

Spread the love

ವೈದ್ಯರು ದೈವಸ್ವರೂಪಿಗಳು- ಶಾಸಕ ಬಾಲಚಂದ್ರ ಜಾರಕಿಹೊಳಿ!

 

ಯುವ ಭಾರತ ಸುದ್ದಿ ಮೂಡಲಗಿ : ಕೋವಿಡ್ ಸಮಯದಲ್ಲಿ ತಮ್ಮ ಜೀವದ ಹಂಗು ತೊರೆದು ಅನೇಕ ಜೀವಗಳನ್ನು ಉಳಿಸಿರುವ ವೈದ್ಯರು ನಮಗೆ ನಿಜವಾಗಿಯೂ ದೈವಸ್ವರೂಪಿ ಎಂದು ಶಾಸಕ ಮತ್ತು ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ವೈದ್ಯರ ಕಾರ್ಯಗಳಿಗೆ ಮೆಚುಗೆ ವ್ಯಕ್ತಪಡಿಸಿದರು.
ಬುಧವಾರದಂದು ಪಟ್ಟಣದ ಕನಕರಡ್ಡಿಯವರ ಆಸ್ಪತ್ರೆಯ ಆವರಣದಲ್ಲಿ ದಿ.ಶ್ರೀಮತಿ ಭೀಮವ್ವ ಲಕ್ಷö್ಮಣರಾವ ಜಾರಕಿಹೊಳಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಹಾಗೂ ವೆಂಕಟೇಶ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಸ್ವಾಸ್ಥö್ಯ ಕಾಪಾಡುವಲ್ಲಿ ವೈದ್ಯರ ಪಾತ್ರ ಮುಖ್ಯವಾಗಿದ್ದು, ರೋಗಿಗಳ ಸೇವೆಯನ್ನು ಮಾಡುತ್ತಿರುವ ವೈದ್ಯರು ನಮಗೆ ದೇವರಂತೆ ಕಾಣುತ್ತಾರೆ ಎಂದು ಹೇಳಿದರು.

 

ಮೂಡಲಗಿಯಲ್ಲಿ ವೆಂಕಟೇಶ ಆಸ್ಪತ್ರೆಯಲ್ಲಿ ಜರುಗಿದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರವನ್ನು ಉದ್ಘಾಟಿಸಿದ ಬಾಲಚಂದ್ರ ಜಾರಕಿಹೊಳಿ

ತಮ್ಮ ಪೂಜ್ಯ ತಾಯಿ-ತಂದೆ ಅವರ ಸ್ಮರಣಾರ್ಥವಾಗಿ ನಡೆಯುತ್ತಿರುವ ಉಚಿತ ಆರೋಗ್ಯ ಶಿಬಿರದ ಪ್ರಯೋಜನವನ್ನು ಮೂಡಲಗಿ ಭಾಗದ ಬಡ ರೋಗಿಗಳು ಪಡೆದುಕೊಳ್ಳುತ್ತಿರುವುದು ಸಂತಸದ ಸಂಗತಿಯಾಗಿದೆ. ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ಸಿಗುವದಾಗಬೇಕು.ಈ ದಿಸೆಯಲ್ಲಿ ಮೂಡಲಗಿ ಭಾಗದಲ್ಲಿ ಉತ್ತಮ ವೈದ್ಯಕೀಯ ಸೌಲಭ್ಯಗಳನ್ನು ನೀಡಿ ಬಡ ರೋಗಿಗಳ ಸೇವೆಗೈಯುತ್ತಿರುವ ಡಾ.ಕನಕರಡ್ಡಿ ದಂಪತಿಗಳ ಕಾರ್ಯ ಶ್ಲಾಘನೀಯವೆಂದು ಪ್ರಶಂಸಿಸಿದರು.
ಇಂದಿನ ಆಹಾರ ಪದ್ಧತಿಯಿಂದ ರೋಗಗಳು ಹರಡುತ್ತಿವೆ. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅವಶ್ಯವಾಗಿದೆ, ಆದ್ದರಿಂದಲೇ ನಮ್ಮ ಹಿರಿಯರು ಸಂಪತ್ತಿಗಿಂತ ಆರೋಗ್ಯವೇ ಭಾಗ್ಯವೆಂದು ಹೇಳಿದ್ದಾರೆ. ಹಿರಿಯರು ಆಡಿರುವ ಮಾತು ಇಂದಿಗೂ ಸತ್ಯವಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಸಾನಿಧ್ಯವನ್ನು ಸ್ಥಳೀಯ ಶಿವಬೋಧರಂಗ ಮಠದ ದತ್ತಾತ್ರೇಯಬೋಧ ಸ್ವಾಮಿಜಿ ಮತ್ತು ಸುಣಧೋಳಿಯ ಶಿವಾನಂದ ಸ್ವಾಮಿಜಿ ವಹಿಸಿ ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ಪುರಸಭೆ ಮಾಜಿ ಅಧ್ಯಕ್ಷ ಎಸ್.ಆರ್.ಸೋನವಾಲ್ಕರ ವಹಿಸಿದ್ದರು.ಪ್ರಾಸ್ತಾವಿಕವಾಗಿ ಮಾತನಾಡಿದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶ್ರೀನಿವಾಸ ಕನಕರಡ್ಡಿ ಅವರು ಈ ಭಾಗದಲ್ಲಿ ನಮ್ಮ ಆಸ್ಪತ್ರೆಯು ರೋಗಿಗಳ ಚಿಕಿತ್ಸೆಗಾಗಿ ಎಲ್ಲ ರೀತಿಯ ವೈದ್ಯಕಿಯ ಸೌಲಭ್ಯಗಳನ್ನು ಹೊಂದಿದೆ. ಸಾಮಾಜಿಕವಾಗಿಯೂ ಬಡ ರೋಗಿಗಳ ಅನುಕೂಲಕ್ಕಾಗಿ ನಮ್ಮ ಆಸ್ಪತ್ರೆ ಸೇವೆಗೆ ಬದ್ಧವಾಗಿದೆ ಎಂದು ತಿಳಿಸಿದರು.
ಸಮಾರಂಭದ ವೇದಿಕೆಯಲ್ಲಿ ಮಾಜಿ ಶಾಸಕ ಡಾ.ಸಾರ್ವಭೌಮ ಬಗಲಿ, ಅಶೋಕ ಅಂಗಡಿ, ಡಾ.ವೀಣಾ ಕನಕರಡ್ಡಿ, ಡಾ.ಎಮ್.ಡಿ.ದಿಕ್ಷೀತ, ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಡಾ. ರಾಹುಲ ಬೆಳವಿ, ಡಾ.ಪ್ರವೀಣ ಕುಮಾರ ಹೊಂಗಲ, ಡಾ.ಸೌಮ್ಯಾ ಕನಕರಡ್ಡಿ, ಡಾ.ರವಿಕಾಂತ ಪಾಟೀಲ, ಡಾ.ರವಿ ಇಂಚಲಕರAಜಿ, ಡಾ.ವಿಶಾಲ ಕಡೇಲಿ, ಡಾ.ಎಮ್.ಎಮ್.ಮೇದಾರ, ಡಾ.ಸವೀತಾ ಕರ್ಲವಾಡ, ಡಾ.ಜಗದೀಶ ಸೂರನ್ನವರ, ಡಾ.ರಾಘವೇಂದ್ರ ನಾಲವತ್ತವಾಡ ಇದ್ದರು.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

seventeen − thirteen =