Breaking News

ನಿಮ್ಮ ಮನೆಮಗಳು, ನಿಮ್ಮ ಮನೆಯ ಸೊಸೆಯ ಎನ್ನುವವರ ನಂಬಬೇಡಿ : ರಮೇಶ ಜಾರಕಿಹೊಳಿ ಕಿವಿಮಾತು

Spread the love

ನಿಮ್ಮ ಮನೆಮಗಳು, ನಿಮ್ಮ ಮನೆಯ ಸೊಸೆಯ ಎನ್ನುವವರ ನಂಬಬೇಡಿ : ರಮೇಶ ಜಾರಕಿಹೊಳಿ ಕಿವಿಮಾತು

ಶಾಸಕಿ ಸುಳ್ಳು ಹೇಳುತ್ತಾರೆ. ಗ್ರಾಮೀಣ ಶಾಸಕಿಗೆ ರೂಪ ಮಾತ್ರ ಹೆಣ್ಣುಮಗಳು, ಗುಣ ಮಾತ್ರ ಬೇರೆ ಇದೆ. ಈಗ ನಾನು ನಿಮ್ಮ ಮನೆ ಹೆಣ್ಣುಮಗಳು ಅಂತ ಹೇಳುತ್ತಿದ್ದಾಳೆ, ಅವರನ್ನು ನಂಬಬೇಡಿ. ಗ್ರಾಮೀಣ ಕ್ಷೇತ್ರದಲ್ಲಿ ನಾನು ಯಾವಾಗ ಓಡಾಡಲು ಪ್ರಾರಂಭಿಸಿದಾಗಲೇ ಎಲ್ಲರ ನೆನಪಾಗಿದೆ.‌ಗೆಲ್ಲುವ ಭ್ರಮೆ, ಸೊಕ್ಕು ಈಗ ನಿರಾಸೆಯಾಗಿದೆ.

ಯುವ ಭಾರತ ಸುದ್ದಿ ಬೆಳಗಾವಿ :
ನಾನು ನಿಮ್ಮ ಮನೆಯ ಮಗಳು. ನಿಮ್ಮ ಮನೆಯ ಸೊಸೆ ಎಂದು ಹೇಳಿಕೊಂಡು ಬರುವ ಬೆಳಗಾವಿ ಗ್ರಾಮೀಣ ಶಾಸಕಿಯನ್ನು ನಂಬದಂತೆ ಶಾಸಕ ರಮೇಶ ಜಾರಕಿಹೊಳಿ ಮನವಿ ಮಾಡಿದ್ದಾರೆ.

ಬಿಜೆಪಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಸಮಾವೇಶದಲ್ಲಿ ಅವರು ಮಾತನಾಡಿದ್ದಾರೆ.

ನಾನು ಮಂತ್ರಿಯಾದ ಮೇಲೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನಾನೇ ಸಾಕಷ್ಟು ಕೆಲಸ ಮಾಡಿರುವೆ. ನನ್ನ ಹೆಸರಿನ ಪತ್ರದ ಮೇಲೆ ಕೆಲಸ ನಡೆದವು. ಆದರೆ, ಶಾಸಕಿ ಅದನ್ನು ನಾನೇ ಮಾಡಿದ್ದು ಎಂದು ಹೇಳಿಕೊಂಡು ಅಡ್ಡಾಡುತ್ತಿದ್ದಾರೆ ಎಂದು ಆರೋಪಿಸಿದರು.

ರಾಜಹಂಸಗಡದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಸಿಎಂ ಲೋಕಾರ್ಪಣೆ ಮಾಡಿದ್ದರು. ನಂತರ ಹೆಬ್ಬಾಳ್ಕರ್ ಎರಡನೇ ಬಾರಿಗೆ ಲೋಕಾರ್ಪಣೆ ಮಾಡಿದ್ದನ್ನು ಪ್ರಸ್ತಾಪಿಸಿದ ರಮೇಶ ಜಾರಕಿಹೊಳಿಯವರು ಒಮ್ಮೆ ಲೋಕಾರ್ಪಣೆ ಮಾಡಿದ ನಂತರ ಎರಡನೇ ಬಾರಿ ಲೋಕಾರ್ಪಣೆ ಮಾಡಿದ್ದನ್ನು ಇಡೀ ದೇಶದಲ್ಲಿ ನಾನು ಎಲ್ಲೂ ನೋಡಿಲ್ಲ. ಆ ಹೆಣ್ಣು ಮಗಳದ್ದು ರೂಪ ಅಷ್ಟೇ, ಗುಣಗಳೇ ಬೇರೆ. ಅವರನ್ನು ನಂಬಬೇಡಿ ಎಂದು ಕಿವಿ ಮಾತು ಹೇಳಿದರು.

ರಾಜಹಂಸಗಡ ಕೋಟೆಯನ್ನು ಎರಡನೇ ಬಾರಿ ಉದ್ಘಾಟನೆ ಮಾಡುವ ದುಸ್ಥಿತಿ ಈ ಶಾಸಕರಿಗೆ ಬಂತು. ಶಾಸಕರಿಗೆ ಎಷ್ಟು ಸೊಕ್ಕಿದೆ ಎನ್ನುವುದು ಇದರಿಂದ ಸಾಬೀತಾಗುತ್ತದೆ. ರಾಜ್ಯದ ಮುಖ್ಯಮಂತ್ರಿ ಉದ್ಘಾಟನೆ ಮಾಡಿ ಹೋದರು ಒಬ್ಬ ಹೆಣ್ಣುಮಗಳಾಗಿ ಗೂಂಡಾಗಿರಿ ಪ್ರವೃತಿ ತೋರುತ್ತಿದ್ದಾರೆ. ಒಂದು ವೇಳೆ ಇವರು ಸಚಿವರಾದರೆ ಕ್ಷೇತ್ರದ, ರಾಜ್ಯದ ಗತಿ ಏನು? ಎಂದು ಪ್ರಶ್ನಿಸಿದರು.

ಇನ್ನೊಂದು ತಿಂಗಳಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆ ಆಗಲಿದೆ. ನಮ್ಮಲ್ಲಿ ದುಡ್ಡಿದೆ, ಗೂಂಡಾಗಿರಿ ಮಾಡುತ್ತೇವೆ ಎಂದವರು ಯಾರೂ ಮುಂದೆ ಬಂದಿಲ್ಲ.‌ ಹಣಕ್ಕಿಂತ ಪ್ರೀತಿ ವಿಶ್ವಾಸ ಮುಖ್ಯ.‌ ಕಳೆದ‌ ಐದು ವರ್ಷದ ಹಿಂದೆ ಕಾಂಗ್ರೆಸ್ ಪಕ್ಷದ ಪರವಾಗಿ ಈ ಕ್ಷೇತ್ರಕ್ಕೆ ಬಂದಿದ್ದೆ. ಬಹಳಷ್ಟು ವಿಚಾರ ಮುಂದಿಟ್ಟುಕೊಂಡು ಎಂದೂ ಗೆಲ್ಲದ ಕಾಂಗ್ರೆಸ್ ಗೆಲ್ಲಿಸಿದ್ದೀರಿ. ನೀವು ನಿಮ್ಮ ಆಶೀರ್ವಾದದಿಂದ ಗೆದ್ದ ಶಾಸಕರು, ದುಡ್ಡಿನಿಂದ ಬಂದೆ, ಬೆಂಗಳೂರಿನ ಮಹಾನ್ ನಾಯಕನಿಂದ ಗೆದ್ದು ಬಂದೆ ಎನ್ನಲು ಶುರು ಮಾಡಿದರು.‌ ನಮ್ಮನ್ನು ಹಾಗೂ ನಿಮ್ಮನ್ನು ಮರೆತು ಬಿಟ್ಟರು. ಹಣಕೊಟ್ಟು ಖರೀದಿ ಮಾಡುತ್ತೇವೆ ಎನ್ನುವ ಸೊಕ್ಕು ಶಾಸಕರಲ್ಲಿದೆ ಎಂದು ಕಿಡಿಕಾರಿದರು.
ಗ್ರಾಮೀಣ ಶಾಸಕರು ರಸ್ತೆ, ಗಟಾರು ಬಿಟ್ಟು ಬೇರೆ ಯಾವುದೇ ಅಭಿವೃದ್ಧಿ ಮಾಡಿಲ್ಲ. ಅವರ ಚಮಚಾಗಳು ಕ್ಷೇತ್ರ ನಂದನವನ ಮಾಡಿದ್ದಾರೆಂದು ಹೇಳುತ್ತಿದ್ದಾರೆ. ಅದು ಎಲ್ಲಿಯೂ ಕಾಣುತ್ತಿಲ್ಲ ಎಂದು ಆರೋಪಿಸಿದರು.

ನಾನು‌ ಸಚಿವನಾಗಿದ್ದಾಗ ಗ್ರಾಮದ ದೇವಸ್ಥಾನ ಅಭಿವೃದ್ಧಿ ಮಾಡಿದ್ದೇನೆ. ನಾನು ಸುಳ್ಳು ಹೇಳಿದರೆ ನಾನು ಹಾಳಾಗಲಿ, ಇಲ್ಲ ಅವರು ಹಾಳಾಗಲಿ ಎಂದು ಕಿಡಿಕಾರಿದರು.

ಗ್ರಾಮೀಣ ಕ್ಷೇತ್ರ ನಾನು ರೆಡಿ ಮಾಡಿದ ಕ್ಷೇತ್ರ.‌ ಐದು ವರ್ಷದ ಹಿಂದಿನ ಶಾಸಕರ ವಿಡಿಯೋ ನೋಡಿ, ಈಗಿನ ವಿಡಿಯೋ ನೋಡಿ.‌ಕೈಯಲ್ಲಿನ ವಾಚು, ಎಂತೆಂಥಾ ಕಾರು ಇದೆ.‌‌ ಇವರು ಬೆವರು ಸುರಿಸಿದ್ರಾ? ಹೊಲದಲ್ಲಿ ಕಬ್ಬು ಬೆಳಸಿದ್ರಾ? ಕೇವಲ 3 ವರ್ಷದಲ್ಲಿ ಇಷ್ಟೊಂದು ದುಡ್ಡು ಎಲ್ಲಿಂದ ಬಂತು? ಅವರ ದುಡ್ಡು ತೆಗೆದುಕೊಳ್ಳಿ, ಆದರೆ ವೋಟ್ ಹಾಕಬೇಡಿ, ಹಾಕಿದರೆ ರಾಜ್ಯ ಹಾಳಾಗುತ್ತದೆ ಎಂದು ಹೇಳಿದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

17 + three =