Breaking News

ನವೀಕೃತ ಗಣಪತಿ ದೇವಸ್ಥಾನ ಉದ್ಘಾಟಿಸಿದ ಡಾ.ಸೋನಾಲಿ ಸರ್ನೋಬತ್

Spread the love

ನವೀಕೃತ ಗಣಪತಿ ದೇವಸ್ಥಾನ ಉದ್ಘಾಟಿಸಿದ ಡಾ.ಸೋನಾಲಿ ಸರ್ನೋಬತ್

ಯುವ ಭಾರತ ಸುದ್ದಿ ಖಾನಾಪುರ :
ಕಣಕುಂಬಿಯ ಮಾವುಲಿ ದೇವಸ್ಥಾನದಲ್ಲಿ ನವೀಕೃತ ಗಣಪತಿ ದೇವಸ್ಥಾನವನ್ನು ಡಾ. ಸೋನಾಲಿ ಸರ್ನೋಬತ್ ಉದ್ಘಾಟಿಸಿದರು.
ಕಣಕುಂಬಿಯಲ್ಲಿ 12 ವರ್ಷಗಳ ನಂತರ ಮಾವುಲಿ ಜಾತ್ರೆ ನಡೆಯುತ್ತಿದೆ.
ಇಲ್ಲಿ ಮಲಪ್ರಭಾ ಮತ್ತು ಮಹದಾಯಿ ಎಂಬ ಎರಡು ನದಿಗಳ ಉಗಮ ಪುರಾತನ ರಾಮೇಶ್ವರ ದೇವಸ್ಥಾನದ ಬಳಿ ನಡೆಯುತ್ತದೆ.
ಡಾ. ಸರ್ನೋಬತ್ ಅವರು ಈ ಸಾಂಪ್ರದಾಯಿಕ ಸಮಾರಂಭದಲ್ಲಿ ಮಾವುಲಿ ದೇವಿಯ ಆಶೀರ್ವಾದ ಪಡೆದರು. ಬಳಿಕ ಗಣಪತಿ ದೇವಸ್ಥಾನ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಟ್ರಸ್ಟಿ ರಘುನಾಥ ದಳವಿ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಡಾ. ಸೋನಾಲಿ ಸರ್ನೋಬತ್ ಅವರು ಈ ಶುಭ ಸಂದರ್ಭದಲ್ಲಿ ಮಾವುಲಿ ದೇವಿ ಟ್ರಸ್ಟ್‌ಗೆ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.
ಬಿಜೆಪಿ ಕಾರ‌್ಯಕರ್ತರಾದ ಆನಂದ ಪಾಟೀಲ, ಅರ್ಜುನ ಗಾವಡಾ, ಅನಿತಾ ಕೋಮಸ್ಕರ್, ಕಾವ್ಯ ಔಂದಕರ್, ಗಂಗಾ ತಳವಾರ, ಸಚಿನ್ ಪವಾರ, ಅನಂತ ಗಾವಡಾ, ಬಾಳೇಶ ಚವ್ಹಾಣವರ, ಭೀಮಸೇನ ಅಗಸರ, ಸಂಜೀವ್ ಕರ್ಕಿ, ಅನುಸೂಯಾ ಅಗಸರ, ಗಣಪತಿ ಗಾವಡೆ ಉಪಸ್ಥಿತರಿದ್ದರು. ನಂತರ ಡಾ ಸೋನಾಲಿ ಸರ್ನೋಬತ್ ಮತ್ತು ಬೆಂಬಲಿಗರು ಚಿಗುಳೆ ಗ್ರಾಮಕ್ಕೆ ಭೇಟಿ ನೀಡಿದರು.
ಅಲ್ಲಿ ಡಾ. ಸರ್ನೋಬತ್ ಮತ್ತು ತಂಡವು ಮಹತಾರ್ಬಾಯಿ ದೇವಸ್ಥಾನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಸಭಿಕರನ್ನು ಉದ್ದೇಶಿಸಿ ಮಾತನಾಡಿದರು.
ಡಾ.ಸರ್ನೋಬತ್ ಅವರು ವಕೀಲ ರಾಜು ಬಾಗೇವಾಡಿ ಅವರೊಂದಿಗೆ ಸಂಪರ್ಕ ರಸ್ತೆ ಮತ್ತು ಮೊಬೈಲ್ ಟವರ್‌ಗಳ ಕುರಿತು ಗ್ರಾಮಸ್ಥರ ಕೆಲವು ಸಮಸ್ಯೆಗಳನ್ನು ಚರ್ಚಿಸಿದರು.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

five × four =