ಗೋಕಾಕ: ಪೋಲಿಸ್ ಇಲಾಖೆಯಿಂದ ಪ್ರತಿಯೊಬ್ಬರಿಗೂ ಸೂಕ್ತ ಸಮಯದಲ್ಲಿ ಸರಿಯಾದ ಸೇವೆಯೊದಗಿಸಲು ೧೧೨ ಸಂಖ್ಯೆಗೆ ಕರೆ ಮಾಡಿ ತುರ್ತು ಸಹಾಯ ಪಡೆಯಬಹುದಾಗಿದೆ ಎಂದು ಗೋಕಾಕ ಉಪವಿಭಾಗ ಡಿವೈಎಸ್‌ಪಿ ಜಾವೇದ ಇನಾಮದಾರ ಹೇಳಿದರು.
ಅವರು, ನಗರದ ತಮ್ಮ ಕಾರ್ಯಾಲಯದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಸಾರ್ವಜನಿಕರು ಯಾವುದೇ ಅವಘಡಗಳು ಸಂಭವಿಸಿದಾಗ ಅಥವಾ ತುರ್ತು ಪರಿಸ್ಥಿತಿ ಎದುರಾದಾಗ ಇನ್ನು ಮುಂದೆ ೧೧೨ ಸಂಖ್ಯೆಗೆ ಕರೆ ಮಾಡಿ ಸಹಾಯಪಡೆಯಬಹುದು. ರವಿವಾರ ದಿ.೨೪ರಂದು ನಗರದ ಬಸವೇಶ್ವರ ವೃತ್ತದ ಮಾರ್ಗವಾಗಿ ಸಂಗೊಳ್ಳಿರಾಯಣ್ಣ ವೃತ್ತ, ಭಾಫನಾ ಚೌಕ್, ವಾಲ್ಮೀಕಿ ವೃತ್ತ ನಾಕಾ ನಂ೧, ಎಸ್೪ ಆಸ್ಪತ್ರೆ, ಎಪಿಎಮ್‌ಸಿ, ಲಕ್ಷಿö್ಮÃ ಟಾಕೀಸ್, ಎಲ್‌ಇಟಿ ಕಾಲೇಜು ರಸ್ತೆ, ಶ್ರೀ ಮರಕನಟ್ಟಿ ಲಕ್ಷಿö್ಮÃ ದೇವಸ್ಥಾನ ಮಾರ್ಗದಿಂದ ತಹಶೀಲದಾರ ಕಾರ್ಯಾಲಯದ ವರೆಗೆ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಗೋಕಾಕ ಉಪವಿಭಾಗ ವಲಯದ ಪೋಲಿಸ್ ಠಾಣೆಗಳಿಗೆ ೬ ಸುಸಜ್ಜಿತ ವಾಹನಗಳನ್ನು ಸರಕಾರ ಹಂಚಿಕೆ ಮಾಡಿದ್ದು, ಈ ವಾಹನಗಳಿಗೆ ಬೆಳಗಾವಿ ಎಸ್‌ಪಿಯವರ ನೇತ್ರತ್ವದಲ್ಲಿ ಚಾಲನೆ ನೀಡಲಾಗುವದು. ತಮ್ಮ ಸಹಾಯಕ್ಕಾಗಿ ೧೧೨ಕ್ಕೆ ಕರೆ ಮಾಡಿದ ತಕ್ಷಣ, ಡಿಜಿಟಲ್ ನಕ್ಷೆಯ ಮುಖಾಂತರ ನಿಮ್ಮ ಸ್ಥಳವನ್ನು ಗುರುತಿಸಿ, ತುರ್ತುವಾಹನಗಳ ಮೂಲಕ ಕಡಿಮೆ ಸಮಯದಲ್ಲಿ ನಿವಿರುವ ಸ್ಥಳಕ್ಕೆ ಪೋಲಿಸ್ ಸಿಬ್ಬಂಧಿ ತಲುಪುತ್ತಾರೆ. ಇದರಿಂದ ಅಪರಾಧಗಳನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ. ಠಾಣೆಯ ಸಹಾಯಕ್ಕಾಗಿ, ಅಗ್ನಿ ಅವಘಡ ಸೇರಿದಂತೆ ವಿಪತ್ತುಗಳು ಉಂಟಾದ ಸಂದರ್ಭದಲ್ಲಿ ಈ ಎಲ್ಲ ಸೇವೆಗಳು ದಿನದ ೨೪ ಗಂಟೆಗಳು ಕಾರ್ಯನಿರ್ವಹಿಸುವ ೧೧೨ ಸಂಖ್ಯೆಗೆ ಡಯಲ್ ಮಾಡಿದರೆ ೧೫ ಸೆಕೆಂಡುಗಳಲ್ಲಿ ತಮ್ಮ ಕರೆಗೆ ಸ್ಫಂದನೆ ಸಿಗಲಿದೆ ಎಂದು ಡಿವೈಎಸ್‌ಪಿ ಜಾವೇದ ಇನಾಮದಾರ ಹೇಳಿದರು.
Check Also
ಗೋಕಾಕನಲ್ಲಿ ಬಿಜೆಪಿಯಿಂದ ಕಾಂಗ್ರೇಸ್ ವಿರುದ್ಧ ಪ್ರತಿಭಟನೆ.!
Spread the loveಗೋಕಾಕನಲ್ಲಿ ಬಿಜೆಪಿಯಿಂದ ಕಾಂಗ್ರೇಸ್ ವಿರುದ್ಧ ಪ್ರತಿಭಟನೆ.! ಗೋಕಾಕ: ವಿಜಯಪುರ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯ ಹಿಂದು ಧಾರ್ಮಿಕ …