Breaking News

ಹೈನುಗಾರಿಕೆ ಅಭಿವೃದ್ಧಿಗೆ ಸರಕಾರ ಹಲವಾರು ಯೋಜನೆ ಜಾರಿಗೊಳಿಸಿದೆ-ಡಾ.ಕಮತ

Spread the love


ಗೋಕಾಕ: ಪಶು ಸಂಗೋಪನಾ ಇಲಾಖೆ ಮೂಲಕ ಸರಕಾರ ಬಡವರನ್ನು ಆರ್ಥಿಕವಾಗಿ ಸಬಲಗೊಳಿಸಲು ಹೈನುಗಾರಿಕೆ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಮಹಿಳೆಯರು ಇದರ ಸದುಪಯೋಗ ಪಡಿಸಿಕೊಂಡು ಲಾಭಗಳಿಸುವಂತೆ ತಾಲೂಕ ಪಶು ಸಂಗೋಪನಾ ಇಲಾಖೆ ಸಹಾಯ ನಿರ್ದೇಶಕ ಡಾ. ಮೋಹನ ಕಮತ ಹೇಳಿದರು.
ಅವರು, ತಾಲೂಕಿನ ಅರಭಾಂವಿಮಠದಲ್ಲಿ ನಬಾರ್ಡ ಹಾಗೂ ಕೃಷಿಮಿತ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡ ಸ್ವಸಹಾಯ ಸಂಘಗಳ ಸದಸ್ಯರಿಗೆ ಹೈನುಗಾರಿಕೆ ಕೌಶಲ್ಯದ ಉನ್ನತೀಕರಣದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಪಶುಪಾಲನೆ ಕಡಿಮೆಯಾಗುತ್ತಿದೆ. ಇಂತಹ ತರಬೇತಿಗಳನ್ನು ಮಹಿಳೆಯರು ಪಡೆದು ಹೈನುಗಾರಿಕೆಯಿಂದ ಹೆಚ್ಚು ಆದಾಯ ಪಡೆಯುವಂತೆ ಕಿವಿಮಾತು ಹೇಳಿದರು. ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಳ್ಳಲು ಹಾಗೂ ಬ್ಯಾಂಕ್‌ಗಳು ನೀಡಿದ ಸಾಲವನ್ನು ಸಕಾಲಕ್ಕೆ ಮರಳಿಸಿದಾಗ ಯೋಜನೆಗಳ ಯಶಸ್ಸು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರಭಾಂವಿ ಪಟ್ಟಣ ಪಂಚಾಯತ ಉಪಾಧ್ಯಕ್ಷೆ ಸುಶೀಲಾ ಸಗರಿ ವಹಿಸಿದ್ದರು.
ವೇದಿಕೆಯ ಮೇಲೆ ಕೃಷಿಮಿತ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಶ್ರೀಮಂತ ಸದಲಗಿ, ಅರಭಾಂವಿ ಪಶು ವೈದ್ಯಾಧಿಕಾರಿ ಡಾ. ಬಂಬಲಾಡಿ, ಲಕ್ಷö್ಮಣ ಸಿದ್ನಾಳ, ಮಹಾದೇವ ಸಿದ್ನಾಳ ಉಪಸ್ಥಿತರಿದ್ದರು.


Spread the love

About Yuva Bharatha

Check Also

ಅಕ್ಕಾ ಅಂದ್ರೆ ಅವರೇ ಅಂತ ಯಾಕೆ ತಿಳ್ಕೊತೀರಿ, ಪೆಗ್ ಅಂದ್ರೆ ಎನರ್ಜಿ ಡ್ರಿಂಕ್-ಮಾಜಿ ಶಾಸಕ ಸಂಜಯ ಪಾಟೀಲ.!

Spread the loveನಾನು ಭಾಷಣದಲ್ಲಿ ಹೆಬ್ಬಾಳಕರ ಹೆಸರನ್ನೆ ತಗೊಂಡಿಲ್ಲ. -ಮಾಜಿ ಶಾಸಕ ಸಂಜಯ ಪಾಟೀಲ.! ಯುವಭಾರತ ಸುದ್ದಿ ಬೆಳಗಾವಿ: ನಾನು …

Leave a Reply

Your email address will not be published. Required fields are marked *

fourteen + 6 =