Breaking News

ಸ್ಫೋಟಗೊಳ್ತು ಕೊರೊನಾ !

Spread the love

ಸ್ಫೋಟಗೊಳ್ತು ಕೊರೊನಾ !

ಯುವ ಭಾರತ ಸುದ್ದಿ ದೆಹಲಿ :ಚೀನಾ ಸೇರಿದಂತೆ ವಿಶ್ವದ ಕೆಲ ದೇಶಗಳಲ್ಲಿ ಮತ್ತೆ ಕೊರೊನಾ ಪ್ರಕರಣಗಳು ಸ್ಫೋಟಗೊಂಡಿವೆ. ಇದರಿಂದ ಜನ ತಲ್ಲಣಗೊಳ್ಳುವಂತಾಗಿದೆ.

ಭಾರತಕ್ಕೆ ನಾಲ್ಕನೇ ಅಲೆಯ ಭೀತಿ ಎದುರಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚರಿಕೆ ನೀಡಿದೆ.

ಆದ್ದರಿಂದ ಕೊರೊನಾ ವೈರಸ್ ನ್ನು ಹೇಗೆ ಎದುರಿಸಬೇಕು ಎಂಬ ಕುರಿತು ಕೇಂದ್ರ ಆರೋಗ್ಯ ಸಚಿವ ಮಾನ್ಸುಕ್ ಮಾಂಡವೀಯ ಅವರ ಅಧ್ಯಕ್ಷತೆಯಲ್ಲಿ ಇಂದು ಮಹತ್ವದ ಸಭೆ ನಡೆಯಲಿದೆ. ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ವೈದ್ಯಕೀಯ ತಜ್ಞರು ಭಾಗವಹಿಸಲಿದ್ದಾರೆ. ಕೊರೋನಾ ತವರು ಎನಿಸಿಕೊಂಡಿರುವ ಚೀನಾದಲ್ಲಿ ಕೊರೊನಾ ಸೊಂಕು ಮತ್ತೆ ವ್ಯಾಪಕವಾಗಿದೆ.

ಇದರ ಪರಿಣಾಮ ವಿಶ್ವದ ಇತರ ದೇಶಗಳ ಮೇಲು ಆಗಲಿದೆ ಎಂದು ತಜ್ಞರು ಊಹಿಸಿದ್ದಾರೆ. ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಬೆಡ್, ಔಷಧಿ, ಆಮ್ಲಜನಕ ಸೇರಿದಂತೆ ಯಾವೊಂದು ಸೌಲಭ್ಯಗಳು ಸಿಗುತ್ತಿಲ್ಲ. ಸತ್ತಿರುವ ಹೆಣ ಸುಡಲು ಕಷ್ಟವಾಗಿದ್ದು ಟೋಕನ್ ಪಡೆಯಲು ಐದರಿಂದ ಆರು ದಿನಗಳ ಕಾಲ ಬೇಕಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದೀಗ ಚೀನಾದಲ್ಲಿ ಕೊರೊನಾ ಸ್ಪೋಟಗೊಂಡ ನಂತರ ಅಮೆರಿಕ, ಜಪಾನ್, ಕೊರಿಯಾ ಮುಂತಾದ ದೇಶಗಳಲ್ಲೂ ಕೋರೋನಾ ಕೇಸ್ ಬೇರೆ ಬೇರೆ ದೇಶಗಳಿಗೆ ಸಿಡಿಯುವ ಸಾಧ್ಯತೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಫುಲ್ ಅಲರ್ಟ್ ಆಗಿದೆ.

ದೇಶದಲ್ಲಿನ ಸದ್ಯದ ಕೊರೊನಾ ಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸಿ ಚರ್ಚಿಸುವ ನಿರೀಕ್ಷೆ ಇದೆ. ಚೀನಾದ ಕೋವಿಡ್ ಪರಿಸ್ಥಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಅಲ್ಲಿಯ ವಾಸ್ತವಗಳು ಬೆಚ್ಚಿ ಬೀಳಿಸುತ್ತಿವೆ. ಚೀನಾದಲ್ಲಿ ಕೊರೊನಾ ವೈರಸ್ ಮಿತಿ ಮೀರಿದೆ. ಇತ್ತೀಚೆಗೆ 13 ರಿಂದ 21 ಲಕ್ಷ ಜನರು ಮೃತಪಟ್ಟಿರಬಹುದು ಎಂದು ಜಾಗತಿಕ ಆರೋಗ್ಯ ತಜ್ಞರು ಸಂದೇಹ ವ್ಯಕ್ತಪಡಿಸಿದ್ದಾರೆ.

ಭಾರತ ಸರ್ಕಾರ ಇದೀಗ ತನ್ನ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ಬಗ್ಗೆ ಪತ್ರ ಬರೆದು ಕೊರೊನಾ ವಾಸ್ತವಾಂಶದ ಪರಿಶೀಲನೆ ಮಾಡಬೇಕು ಎಂದು ತಿಳಿಸಿದೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

twelve + 3 =