ಕೊರಾನಾ ಹರಡದಂತೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಮುಂದಾದ ಮತ್ತು ಪ್ರತಿ ಸುದ್ದಿಗಳನ್ನು ಪ್ರತಿಯೊಬ್ಬ ಜನರಿಗೆ ತಲುಪಿಸಲು ಹಗಲಿರುಳು ಶ್ರಮಿಸುತ್ತಿರುವ ಪತ್ರಕರ್ತರನ್ನು ಗುರುತಿಸಿ
ಗೋಕಾಕ ತಾಲೂಕಿನ ಕೊಣ್ಣೂರ ಪಟ್ಟಣದಲ್ಲಿರುವ ಶಾಂತಿನಾಥ ಹಾಗೂ ಮಹಾವೀರ ಡ್ರೇಸಸ್ ಕೊಣ್ಣೂರ ಇವರು ಉಚಿತವಾಗಿ ಸುಮಾರು 50 ಜನ ಪತ್ರಕರ್ತರಿಗೆ ಪೇಸ್ ಶಿಲ್ಡ್ ಮತ್ತು ಮಾಸ್ಕ ನೀಡಿದರು
ಈ ಸಮಯದಲ್ಲಿ ಶಾಂತಿನಾಥ ಹಾಗೂ ಮಹಾವೀರ ಡ್ರೆಸಸನ ಮಾಲಿಕರಾದ ಸಚೀನ ಸಮಯ ಮಾತನಾಡಿ ಈಗಿನ ಯುಗದಲ್ಲಿ ಪತ್ರಕರ್ತರ ಪಾತ್ರ ಬಹು ಮುಖ್ಯವಾಗಿದೆ, ತಮಗೆ ನಾವು ಯಾವಾಗಲೋ ಸನ್ಮಾನಿಸಬೇಕಾಗಿತ್ತು, ಕೊರಾನಾ ಹೆಚ್ಚಾಗುತ್ತಿದ್ದರಿಂದ ತಡವಾಗಿ ನಿಮ್ಮನ್ನು ಸನ್ಮಾನಿಸುತ್ತಿದ್ದೇವೆ ಎಂದು ಮಾತನಾಡಿ ತಾವು ಕೂಡ ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಸುದ್ದಿ ಮಾಡಬೇಕೆಂದು ವಿನಂತಿಸಿದರು
ಈ ಸಂದರ್ಭದಲ್ಲಿ ಪತ್ರಕರ್ತರಾದ ಯಲ್ಲೇಶ ಮೆಳವಂಕಿ ಮಾತನಾಡಿ ನಮ್ಮನ್ನು ಗುರುತಿಸಿ ಸನ್ಮಾನಿಸಿದ ಶಾಂತಿನಾಥ ಹಾಗೂ ಮಾಹಾವೀರ ಡ್ರೇಸಸನ ಮಾಲಿಕರದ ಸಚೀನ ಸಮಯ ಮತ್ತು ಸಂಜೀವ ಖನಗಾಂವಿ ಇವರಿಗೆ ಗೋಕಾಕ ಪ್ರೇಸ್ ಅಸೋಸಿಯೇಷನ್ ಪರವಾಗಿ ದನ್ಯವಾದ ಸಲ್ಲಿಸಿದರು,
ಈ ಸಂದರ್ಭದಲ್ಲಿ ಗೋಕಾಕ ಪ್ರೇಸ್ ಅಸೋಸಿಯೇಷನ್ ಅದ್ಯಕ್ಷರಾದ ಮನೋಹರ, ಮೇಗೇರಿ, ಕಾರ್ಯದರ್ಶಿಯಾದ ಚೇತನ ಖಡಕಬಾಂವಿ, ಪ್ರದೀಪ ನಾಗನೂರ, ಉಮೇಶ ನಂದಗಾಂವ, ಬಸವರಾಜ ಹೀರೆಮಠ,ವಿಠ್ಠಲ ಕುಂಬಾರ, ಮುತ್ತು, ಹಾಗೂ ಇನ್ನೂಳಿದ ಪತ್ರಕರ್ತರು ಉಪಸ್ಥಿತರಿದ್ದು ಎಲ್ಲ ಪತ್ರಕರ್ತರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು