Breaking News

ಸರಕಾರದ ಆದೇಶ ಹಿನ್ನಲೆ ಪೋಲಿಸ್ ಅಧಿಕಾರಿಗಳು ರಸ್ತೆಗಿಳಿದು ಅಂಗಡಿ ಮುಗ್ಗಟ್ಟು ಬಂದ್.!

Spread the love


ಗೋಕಾಕ: ನಗರದಲ್ಲಿ ವಾರದ ಸಂತೆ ಹಿನ್ನೆಲೆ ಗುರುವಾರ ಬೆಳಿಗ್ಗೆಯಿಂದ ವ್ಯಾಪಾರ ವಹಿವಾಟುಗಳಿಗೆ ಮರಳಿದ ವ್ಯಾಪಾರಿಗಳಿಗೆ ಗುರುವಾರ ಮಧ್ಯಾಹ್ನ ಸಮಯಕ್ಕೆ ಸರಕಾರದಿಂದ ಶಾಕೀಂಗ್ ಆದೇಶ ಎದುರಾಗಿದ್ದು, ಪೋಲಿಸ್ ಅಧಿಕಾರಿಗಳು ರಸ್ತೆಗಿಳಿದು ಅಂಗಡಿಗಳನ್ನು ಬಂದ್ ಮಾಡಿಸಿದರು.
ರಾಜ್ಯದಲ್ಲಿ ಕೊರೋನಾ ಮಹಾಮಾರಿ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸರಕಾರ ತುರ್ತು ಆದೇಶ ಹೊರಡಿಸಿ, ಅಗತ್ಯವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ ಉಳಿದ ಎಲ್ಲ ಅಂಗಡಿಗಳನ್ನು ಬಂದ್ ಮಾಡಿಸುವಂತೆ ಸೂಚನೆ ನೀಡಿದ್ದು ಪೋಲೀಸ್ ವಾಹನಗಳ ಸೈರನ್ ಸದ್ದು ಮಾಡುತ್ತ ಫೀಲ್ಡಗಿಳಿದು ಅಂಗಡಿ ಬಂದ ಮಾಡಿಸಿ, ಜನ ಸೇರದಂತೆ ಜನರನ್ನು ಚದುರಿಸಿದರು.
ವಾರದ ಸಂತೆ ಹಿನ್ನಲೆ ಗ್ರಾಮೀಣ ಭಾಗಗಳಿಂದ ಜನರು ಸಂತೆಗೆ ಆಗಮಿಸಿದ್ದು, ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿಸುತ್ತಿದ್ದಂತೆ ಬರಿಗೈಯಲ್ಲಿ ತಮ್ಮ ಗ್ರಾಮಗಳಿಗೆ ತೆರಳಿದರು. ತರಕಾರಿ ವ್ಯಾಪಾರಕ್ಕೆ ವಾಲ್ಮೀಕಿ ಕ್ರೀಡಾಂಗಣದಲ್ಲಿ ಪ್ರತ್ಯೇಕ ಸ್ಥಳ ನಿಗಧಿಪಡಿಸಿದ್ದು ಅಲ್ಲಿಯೇ ವ್ಯಾಪಾರ ಮಾಡಬೇಕೆಂದು ಪೋಲಿಸರು ಸೂಚಿಸಿದರು.
ನಗರದ ಬಸವೇಶ್ವರ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಬಾಫನಾ ಕೂಟ, ಭಗವಾನ ಶೇಟಜಿ ಕೂಟ, ಶೆಟ್ಟಿ ಕೂಟ, ಅಪ್ಸರಾ ಕೂಟ ಸೇರಿದಂತೆ ಮಾರುಕಟ್ಟೆ ಪ್ರದೇಶಗಳಲ್ಲಿ ಪಿಎಸ್‌ಐ ಕೆ ವಾಲಿಕಾರ ನೇತ್ರತ್ವದಲ್ಲಿ ಪೋಲಿಸ್ ಸಿಬ್ಬಂಧಿ ರಸ್ತೆಗಿಳಿದು ಅಂಗಡಿ ಮುಗ್ಗಟ್ಟು ಬಂದ ಮಾಡಿಸಿದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

three × four =