Breaking News

ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಅವರ ಮನೆ ಕಳ್ಳತನ 25ತೊಲ ಬಂಗಾರ, ಬೆಳ್ಳಿ, ನಗದು ದೋಚಿರುವ ಕಳ್ಳರು.!

Spread the love

ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಅವರ ಮನೆ ಕಳ್ಳತನ 25ತೊಲ ಬಂಗಾರ, ಬೆಳ್ಳಿ, ನಗದು ದೋಚಿರುವ ಕಳ್ಳರು.!


ಯುವ ಭಾರತ ಸುದ್ದಿ  ಗೋಕಾಕ: ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಅವರ ಮನೆಗೆ ಖನ್ನ ಹಾಕಿದ ಖಧೀಮರು ಬಂಗಾರದ ಆಭರಣ ನಗದು ಕಳ್ಳತನ ಮಾಡಿದ್ದಾರೆ. ಕಳೆದ ಹಲವು ದಿನಗಳಿಂದ ಮನೆ ಕಳ್ಳತನ ಪ್ರಕರಣ ಹೆಚ್ಚುತ್ತಿದ್ದು ತಾಲೂಕ ದಂಢಾಧಿಕಾರಿ ತಹಶೀಲ್ದಾರರ ಮನೆ ಕಳ್ಳತನ ನಡೆದಿದ್ದು, ಶನಿವಾರ ಮತ್ತು ರವಿವಾರ ರಜೆ ಹಿನ್ನಲೆ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಕುಟುಂಬ ತಮ್ಮ ಉರಿಗೆ ತೆರಳಿದ್ದರು. ಶನಿವಾರದಂದು ಮಧ್ಯರಾತ್ರಿ ಮನೆಯ ಬೀಗ ಒಡೆದಿರುವ ಕಳ್ಳರು ಮನೆಯಲ್ಲಿದ್ದ 25ತೊಲ ಬಂಗಾರದ ಆಭರಣ, ೨೦೦ಗ್ರಾಮ್ ಬೆಳ್ಳಿ ಸೇರಿ ೪ಸಾವಿರ ನಗದು ಹಣ ಕದ್ದು ಪರಾರಿಯಾಗಿದ್ದಾರೆ.
ಈ ಕುರಿತು ಗೋಕಾಕ ಶಹರ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿಸ್ ಇಲಾಖೆ ಶ್ವಾನದಳದವರು ಆಗಮಿಸಿ ಮನೆಯ ಪರಿಶೀಲನೆ ನಡೆಸಿ ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ.


Spread the love

About Yuva Bharatha

Check Also

ಅಕ್ಕಾ ಅಂದ್ರೆ ಅವರೇ ಅಂತ ಯಾಕೆ ತಿಳ್ಕೊತೀರಿ, ಪೆಗ್ ಅಂದ್ರೆ ಎನರ್ಜಿ ಡ್ರಿಂಕ್-ಮಾಜಿ ಶಾಸಕ ಸಂಜಯ ಪಾಟೀಲ.!

Spread the loveನಾನು ಭಾಷಣದಲ್ಲಿ ಹೆಬ್ಬಾಳಕರ ಹೆಸರನ್ನೆ ತಗೊಂಡಿಲ್ಲ. -ಮಾಜಿ ಶಾಸಕ ಸಂಜಯ ಪಾಟೀಲ.! ಯುವಭಾರತ ಸುದ್ದಿ ಬೆಳಗಾವಿ: ನಾನು …

Leave a Reply

Your email address will not be published. Required fields are marked *

15 − 7 =