Breaking News

ರಾಷ್ಟ್ರೀಯ ಬಸವ ದಳ ದೇಶಾದ್ಯಂತ ಬಸವ ತತ್ವ ಪ್ರಾಚರದೊಂದಿಗೆ ಧರ್ಮ ಜಾಗೃತಿ ಮಾಡುತ್ತಿದೆ- ಮಾತೆ ಡಾ.ಗಂಗಾದೇವಿ.!

Spread the love

ರಾಷ್ಟ್ರೀಯ ಬಸವ ದಳ ದೇಶಾದ್ಯಂತ ಬಸವ ತತ್ವ ಪ್ರಾಚರದೊಂದಿಗೆ ಧರ್ಮ ಜಾಗೃತಿ ಮಾಡುತ್ತಿದೆ- ಮಾತೆ ಡಾ.ಗಂಗಾದೇವಿ.!


ಗೋಕಾಕ: ರಾಷ್ಟ್ರೀಯ ಬಸವ ದಳ ದೇಶಾದ್ಯಂತ ಬಸವ ತತ್ವ ಪ್ರಾಚರದೊಂದಿಗೆ ಧರ್ಮ ಜಾಗೃತಿ ಮಾಡುತ್ತಿದೆ ಎಂದು ಬಸವ ಧರ್ಮಪೀಠದ ಪೀಠಾಧ್ಯಕ್ಷರಾದ ಮಾತೆ ಡಾ.ಗಂಗಾದೇವಿಯವರು ಹೇಳಿದರು.
ರವಿವಾರದಂದು ನಗರದ ಬಸವ ಮಂಟಪದಲ್ಲಿ ವಿಶ್ವಗುರು ಬಸವಣ್ಣನವರ ಮೂರ್ತಿ ಪ್ರತಿಷ್ಠಾಪನೆ ಸಮಾರಂಭದ ದಿವ್ಯ ಸಾನ್ನಿಧ್ಯವಹಿಸಿ ಅವರು ಮಾತನಾಡುತ್ತಾ ಬಸವಣ್ಣನವರ ವಚನಗಳು ಸರ್ವರಿಗೂ, ಸರ್ವಕಾಲಕ್ಕೂ ದಾರಿದೀಪವಾಗಿದ್ದು, ಎಲ್ಲರೂ ಅವುಗಳನ್ನು ಆಚರಣೆಗೆ ತರುವಂತೆ ಕರೆ ನೀಡಿದರು.
ಪ್ರಾರ್ಥನೆಗೆ ಬಹುದೊಡ್ಡ ಶಕ್ತಿಯಿದ್ದು, ಅದು ಧರ್ಮದ ಜೀವಾಳವಾಗಿದೆ. ಪೂಜೆ, ದ್ಯಾನ, ಪ್ರಾರ್ಥನೆ ಇವುಗಳಿಂದ ನೆಮ್ಮದಿ ದೊರೆಯುತ್ತದೆ. ಮಕ್ಕಳಿಗೆ ಇವುಗಳ ಆಚರಣೆಯಿಂದ ಶಿಕ್ಷಣಕ್ಕೆ ಪ್ರೋತ್ಸಾಹ ದೊರೆತು ಅವರ ಸಾಧನೆಗೆ ಸಹಕಾರಿಯಾಗುತ್ತದೆ. ವಿನಯ, ಸೌಜನ್ಯ ಮಾನವರ ಗೌರವವನ್ನು ಹೆಚ್ಚಿಸುತ್ತವೆ. ಕಾಯಕವೇ ಕೈಲಾಸವಾಗಿದ್ದು, ಅದನ್ನು ಪ್ರಾಮಾಣಿಕವಾಗಿ ಮಾಡಿರಿ ಬಸವಣ್ಣನವರನ್ನು ಸದಾ ಮನದಲ್ಲಿಟ್ಟು ಅವರ ತತ್ವ ಆದರ್ಶಗಳ ಆಚರಣೆಯೊಂದಿಗೆ ಕಲ್ಯಾಣ ರಾಜ್ಯ ನಿರ್ಮಾಣ ಮಾಡುವಂತೆ ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಲ್‌ಇಟಿ ಸಂಸ್ಥೆಯ ನಿರ್ದೇಶಕ ಸರ್ವೋತ್ತಮ ಜಾರಕಿಹೊಳಿ ಮಾತನಾಡಿ ಜಾತ್ಯಾತೀತ ಸಮಾನತೆಯ ಸಂದೇಶಗಳನ್ನು ನೀಡಿದ ಬಸವಣ್ಣವರ ವಚನಗಳನ್ನು ನಾವೆಲ್ಲರೂ ಆಚರಣೆಗೆ ತರುವದರೊಂದಿಗೆ ಮಾನವೀಯ ಮೌಲ್ಯಯುತ ಸಮಾಜ ನಿರ್ಮಿಸಲು ಶ್ರಮಿಸೊಣ ನಿಮ್ಮೆಲ್ಲ ಕಾರ್ಯಗಳಿಗೆ ಜಾರಕಿಹೊಳಿ ಕುಟುಂಬದ ಬೆಂಬಲ ಸದಾ ಇರುತ್ತದೆ ನಿಮ್ಮೆಲ್ಲರ ಆರ್ಶಿವಾದ ನಮ್ಮ ಕುಟುಂಬದ ಮೇಲೆ ಇರಲೆಂದು ಹೇಳಿದರು.
ವೇದಿಕೆಯಲ್ಲಿ ಶ್ರೀ ಅನಿಮೇಶಾನಂದ ಸ್ವಾಮೀಜಿ, ಕೆಎಂಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ, ಲಕ್ಷ್ಮೀ ಎಜ್ಯುಕೇಷನ್ ಟ್ರಸ್ಟ್ನ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ, ನಗರಾಧ್ಯಕ್ಷ ಜಯಾನಂದ ಹುಣ್ಣಚ್ಯಾಳಿ, ಮಾಜಿ ಜಿಪಂ ಸದಸ್ಯ ಟಿ.ಆರ್.ಕಾಗಲ್, ರಾಷ್ಟ್ರೀಯ ಬಸವದಳದ ತಾಲೂಕು ಅಧ್ಯಕ್ಷ ಬಸವಂತಪ್ಪ ಉಳ್ಳಾಗಡ್ಡಿ, ಕಾರ್ಯದರ್ಶಿ ಚನ್ನಪ್ಪ ಬಿಜಲಿ, ರಾಜೇಶ್ ಉಳ್ಳಾಗಡ್ಡಿ, ಮಲ್ಲಿಕಾರ್ಜುನ ಕರಜಗಿಮಠ, ಆನಂದ ಅಂಗಡಿ, ಶಿವಾನಂದ ಕಡಖಬಾಂವಿ ಇದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

12 + 1 =