ಗೋಕಾಕ : ಕುವೆಂಪು ಜನ್ಮ ದಿನಾಚರಣೆ ನಿಮಿತ್ತ ಗೀತ ಗಾಯನ
ಯುವ ಭಾರತ ಸುದ್ದಿ ಗೋಕಾಕ :
ಮೂಲತಃ ಆಕಾಶ ಸಂಸ್ಕೃತಿಯ ಕುವೆಂಪು, ನೆಲ ಮೂಲ ಸಂಸ್ಕೃತಿಯನ್ನು ನಂಬಿ ತಮ್ಮ ಕಾವ್ಯ ಕೃತಿಗಳಲ್ಲಿ ಅದನ್ನು ಪಡಿಮೂಡಿಸಿದ ಸಂಕೀರ್ಣ ಕವಿಯೆಂದು ಜಾನಪದ ತಜ್ಞ ಡಾ ಸಿ.ಕೆ ನಾವಲಗಿ ಹೇಳಿದರು.
ಗುರುವಾರದಂದು ನಗರದಲ್ಲಿ ಗುಂಪು ಕಲಾವಿದರು ಆಯೋಜಿಸಿದ್ದ ರಾಷ್ಟ್ರ ಕವಿ ಕುವೆಂಪು ಅವರ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಉಪನ್ಯಾಸ ಮತ್ತು ಗೀತ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದ ಅವರು ಸ್ಥಾಪಿತ ವ್ಯವಸ್ಥೆಯ ವಿರುದ್ಧ ಸೂಚ್ಯವಾದ ಬಂಡಾಯ ಕೈಗೊಂಡ ಕುವೆಂಪು ಅಸ್ಪೃಶ್ಯತೆ ಹಾಗೂ ಅಸಮಾನತೆಯ ವಿರುದ್ಧ ವೈಚಾರಿಕ ಕಾಂತ್ರಿದರ್ಶಿಯಾಗಿ, ಜಲಗಾರ (ಜಾಡಮಾಲಿ) ನೊಬ್ಬ ಶಿವ,ಶೂದ್ರನೊಬ್ಬ ತಪ್ಪಸ್ವಿ,ರೈತನೊಬ್ಬ ನೇಗಿಲಯೋಗಿ, ಎಂದು ಸಾಮಾನ್ಯರಲ್ಲಿ ಅಸಾಮಾನ್ಯತೆಯನ್ನು ಗುರುತಿಸಿದ ಕುವೆಂಪು ಶ್ರೀಸಾಮಾನ್ಯರನ್ನು ಪೂಜನಭಾವದಿಂದ ಹೃದಯತುಂಬಿ ಗೌರವಿಸಿದರು ಅಂತೆಯೇ ಕಿಟ್ಟಯ್ಯ ಕುಳದ ಕಲಿಗೆ , ರೈತನ ದೃಷ್ಟಿ, ಗೊಬ್ಬರ,ಶಾಸ್ತ್ರ ಪಂಡಿತನಿಗೆ,ಶಾಸ್ತ್ರ ಸಂಮೂಡನಗೆ ಇತ್ಯಾದಿ ನೆಲದ ಜಾನಪದ ಮೂಲದ ಕವಿತೆಗಳಲ್ಲಿ ಕೂಲಿ ಕಂಬಳಿಯವರಿಗೆ, ಶೋಷಿತರಿಗೆ, ಅಲಕ್ಷಿತರಿಗೆ, ದಲಿತರಿಗೆ, ಕವಿ ಮಣಿದು ಗೌರವಿಸಿದ್ದು ಅವರಿಗಿರುವ ಜಾನಪದ ಪ್ರೇರಣೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಡಾ.ಜಿ.ಎಂ ಕಾಮೋಜಿ ಉದ್ಘಾಟಿಸಿದರು.
ಪ್ರೋ ಚಂದ್ರಶೇಖರ್ ಅಕ್ಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪ್ರೋ.ಜಿ.ವ್ಹಿ ಮಾಳಗಿ, ಡಾ.ಶಶಿಕಲಾ ಕಾಮೋಜಿ, ಪ್ರೋ. ವಿ.ಎಸ್.ಹಂಪಣ್ಣವರ,
ಮಹಾಂತೇಶ ತಾವಂಶಿ, ಜಿ.ಕೆ ಕಾಡೇಶಕುಮಾರ್, ಡಾ.ಕಡಲಗಿ, ಬಸವರಾಜ ಮಠಪತಿ, ರಂಜನಾ ಅಂಟಿನ, ಈಶ್ವರ ಮಮದಾಪೂರ, ರಾಜೇಂದ್ರ ಕಲ್ಯಾಣಿ, ನಿವೇದಿತಾ ಕಾಮೋಜಿರ ಪುಷ್ಪಾ ಮುರಗೋಡ, ಶಂಕುತಲಾ ದಂಡಿನ, ಜಯಾ ಚುನಮರಿ, ವಿದ್ಯಾ ರೆಡ್ಡಿ, ಭಾರತಿ ಮದಭಾವಿ, ರಜನಿ ಜಿರಗ್ಯಾಳ, ವಿನೂತ ನಾವಲಗಿ ಉಪಸ್ಥಿತರಿದ್ದರು. ಈಶ್ವರಚಂದ್ರ ಬೆಟಗೇರಿ ನಿರೂಪಿಸಿ, ವಂದಿಸಿದರು.