ಗೋಕಾಕ ಕಳ್ಳತನ : ಕೊನೆಗೂ ಫೀಲ್ಡಿಗಿಳಿದ ಪೊಲೀಸರು!
ಯುವ ಭಾರತ ಸುದ್ದಿ ಗೋಕಾಕ : ಗೋಕಾಕದಲ್ಲಿ ನಿನ್ನೆ ನಡೆದ ಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದಂತೆ ಇವತ್ತು ಬೆಳಗಾವಿ ಹೆಚ್ಚುವರಿ ಪೋಲಿಸ್ ಅಧಿಕಾರಿ ಮಾನಿಂಗ ನಂದಗಾಂವಿ ಇವರು ಕಳ್ಳತನ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ನಂತರ ತಹಸೀಲ್ದಾರ ಕಚೇರಿಯ ಸಿಬ್ಬಂದಿಗಳನ್ನು ವಿಚಾರಿಸಿ ಮಾಹಿತಿ ಪಡೆದರು. ಮಾಧ್ಯಮದವರಿಗೆ ಪ್ರತಿಕ್ರಿಯಿಸಿ ಗೋಕಾಕದಲ್ಲಿ ಕೆಲವು ದಿನಗಳಿಂದ ಹೆಚ್ಚಾಗಿ ಕಳ್ಳತನ ನಡೆಯುತ್ತಿದ್ದು ನಮ್ಮ ಗೋಕಾಕ ಪೋಲಿಸರು ಕಳ್ಳರ ಪತ್ತೆ ಹಚ್ಚಲು ಸ್ಥಳಿಯ ಪೋಲಿಸ್ ಅಧಿಕಾರಿಗಳ ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಿದ್ದಾರೆ, ಅದರಂತೆ ಇವತ್ತಿನಿಂದ ಹೆಚ್ಚಾಗಿ ಜನದಟ್ಟಣೆ ಇಲ್ಲದ ಪ್ರದೇಶದಲ್ಲಿ ಹೆಚ್ಚಿನ ಬೀಟಗಳನ್ನು ನಿಯೋಜಿಸಲಾಗುತ್ತದೆ,ಅದರಂತೆ ಸಾರ್ವಜನಿಕರು ಕೂಡಾ ಪರ ಊರಿಗೆ ತೆರಳಬೇಕಾದರೆ ಸ್ಥಳಿಯ ಪೋಲಿಸ್ ಸಿಬ್ಬಂದಿಗಳಿಗೆ ಮಾಹಿತಿ ನೀಡಲು ತಿಳಿಸಿ ಗೋಕಾಕ ಪೋಲಿಸರು ತಮ್ಮ ಕರ್ತವ್ಯವನ್ನು ನಿಷ್ಟೆಯಿಂದ ಮಾಡುತ್ತಿದ್ದಾರೆಂದರು.
ಈ ಸಂದರ್ಭದಲ್ಲಿ ಗೋಕಾಕ ವಲಯ ಡಿಎಸ್ಪಿ, ಮನೋಜಕುಮಾರ ನಾಯಕ, ಸಿ,ಪಿ,ಆಯ್, ಗೋಪಾಲ ರಾಥೋಡ, ನಗರ ಪಿ,ಎಸ್,ಐ, ಎಮ್,ಡಿ,ಘೋರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.