Breaking News

ಹೆಣ್ಣಲ್ಲವೇ ನಮ್ಮನ್ನೆಲ್ಲ ಹಡೆದ ತಾಯಿ ಗ್ರಂಥ ಲೋಕಾರ್ಪಣೆ!

Spread the love

ಹೆಣ್ಣಲ್ಲವೇ ನಮ್ಮನ್ನೆಲ್ಲ ಹಡೆದ ತಾಯಿ ಗ್ರಂಥ ಲೋಕಾರ್ಪಣೆ!

ಯುವ ಭಾರತ ಸುದ್ದಿ ಗೋಕಾಕ : ಪ್ರತಿಯೊಬ್ಬರಿಗೆ ದೇವರು ಅದ್ಬುತವಾದ ಶಕ್ತಿಯನ್ನು ನೀಡಿದ್ದು, ಅದನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಸಾಧಕರಾಗುತ್ತಾರೆ ಎಂದು ಕೆಎಲ್ಇ ನಿರ್ದೇಶಕ ಜಯಾನಂದ ಮುನವಳ್ಳಿ ಹೇಳಿದರು.
ರವಿವಾರದಂದು ನಗರದ ಕೆಎಲ್ಇ ಶಾಲೆಯ ಆವರಣದಲ್ಲಿ ಪ್ರತೀಕ್ಷಾ ಪ್ರಕಾಶ ಹಾಗೂ ಕೆಎಲ್ಇ ಸಂಸ್ಕೃತಿ ಸಂಸ್ಥೆ ಗೋಕಾಕ ಇವುಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ 10 ನೇ ತರಗತಿ ವಿದ್ಯಾರ್ಥಿನಿ ಪ್ರತಿಕ್ಷಾ ಕೊಕ್ಕರಿ ವಿರಚಿತ ಹೆಣ್ಣಲ್ಲವೇ ನಮ್ಮನ್ನೆಲ್ಲ ಹಡೆದ ತಾಯಿ ಗ್ರಂಥ ಲೋಕಾರ್ಪಣೆ ಸಮಾರಂಭದಲ್ಲಿ ಗ್ರಂಥ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೂಕ್ತ ಪ್ರೋತ್ಸಾಹ ನೀಡಿ ಅವರ ಆಸಕ್ತಿಗೆ ಅನುಗುಣವಾಗಿ ಅವರಿಗೆ ಶೈಕ್ಷಣಿಕವಾಗಿ ಪ್ರೋತ್ಸಾಹಿಸಬೇಕು .ಗೋಕಾಕ ನಗರ ಇತ್ತೀಚೆಗೆ ಶಿಕ್ಷಣ ಕ್ಷೇತ್ರದಲ್ಲಿ ಬಹಳ ಮುಂದೆವರೆದಿದೆ. ಜನರು ಸಾಹಿತ್ಯಕವಾಗಿಯೂ ಹಲವಾರು ಸಾಧನೆಗಳನ್ನು ಮಾಡುತ್ತಿದ್ದಾರೆ ಅದರ ಜೊತೆಗೆ ಪುಸ್ತಕಗಳನ್ನು ಓದುವ ಹವ್ಯಾಸ ಹೆಚ್ಚಿಸಬೇಕು. ಪುಸ್ತಕ ಬರೆಯುವವರು ಸಾಕಷ್ಟು ಜನ ಇದ್ದಾರೆ ಆದರೆ ಪುಸ್ತಕಗಳನ್ನು ಒದುವವರು ಇಲ್ಲ ಮಕ್ಕಳಲ್ಲಿ ಓದುವ ಹವ್ಯಾಸ ಹೆಚ್ಚಿಸಲು ಶಿಕ್ಷಕರು ಮುಂದಾಗಿ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಪ್ರತಿ ವರ್ಷ ಕನಿಷ್ಠ 200 ವಿದ್ಯಾರ್ಥಿಗಳು ನೇರವಾಗಿ ಉದ್ಯೋಗ ಸೇರುವ ಹಾಗೆ ರೂಪರೇಷೆಗಳನ್ನು ಹಮ್ಮಿಕೊಂಡು ಶಿಕ್ಷಣ ಇಲಾಖೆ ಮುಂದಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಮಹಾಲಿಂಗ ಮಂಗಿ ವಹಿಸಿದರು.
ಪುಸ್ತಕ ಕುರಿತು ಮಾತನಾಡಿದ ಪುಷ್ಪಾ ಮುರುಗೋಡ ಅವರು ಸಮಾಜದ ದೃಷ್ಟಿಯಲ್ಲಿ ಮಹಿಳೆಯ ಸ್ಥಾನಮಾನ ನೋಡಿ ಅದನ್ನು ನೈಜವಾಗಿ ಪ್ರತೀಕ್ಷಾ ತಮ್ಮ ಕಾದಂಬರಿಯಲ್ಲಿ ನಿರೂಪಿಸಿದ್ದಾರೆ. ಸ್ತ್ರೀ ಸಂವೇದನೆ, ಶೋಷಣೆ, ಆಶೆ ಆಕಾಂಕ್ಷೆಗಳನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಪ್ರತೀಕ್ಷಾ ಮುಂದೆ ಒಳ್ಳೆಯ ಲೇಖಕಿಯಾಗುವ ಎಲ್ಲಾ ಲಕ್ಷಣಗಳನ್ನು ಈ ಕಾದಂಬರಿಯಲ್ಲಿ ತೋರಿಸಿದ್ದಾರೆ.
ಪ್ರೋ ಜಿ.ವ್ಹಿ ಮಳಗಿ ಮಾತನಾಡಿ ಕುಮಾರಿ ಪ್ರತೀಕ್ಷಾ ಅವರು ಕಾದಂಬರಿ ಬರೆಯುವ ಸಾಹಸ ನಿಜವಾಗಿಯೂ ಮೆಚ್ಚುವಂತಹದ್ದು, ಅವರ ಚಿಕ್ಕ ವಯಸ್ಸಿನ ದೊಡ್ಡ ಸಾಧನೆ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ.
ಕಾರ್ಯಕ್ರಮದಲ್ಲಿ ಬಿಇಒ ಜಿ.ಬಿ.ಬಳಗಾರ, ಮಹಾಂತೇಶ ತಾವಂಶಿ, ಸುಸ್ಮೀತಾ ಭಟ್, ರಾಜೇಶ್ವರಿ ಒಡೆಯರ, ಉಪಸ್ಥಿತರಿದ್ದರು


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

5 + 13 =