ಗೋಕಾಕ : ವಿಶ್ವ ಮಾನವ ಹಕ್ಕುಗಳ ದಿನಾಚರಣೆ
ಯುವ ಭಾರತ ಸುದ್ದಿ ಗೋಕಾಕ :
ಪ್ರತಿಯೊಬ್ಬ ಪ್ರಜೆ ಕಾನೂನನ್ನು ತಿಳಿದುಕೊಳ್ಳುವ ಅವಶ್ಯಕತೆ ವಿದೆ ಎಂದು ಪ್ರಧಾನ ದಿವಾನಿ ನ್ಯಾಯಾಧೀಶ ರಾಜೀವ ಗೋಳಸಾರ ಹೇಳಿದರು.
ಇತ್ತೀಚೆಗೆ ನಗರದ ಜೆ.ಎಸ್.ಎಸ್. ಮಹಾವಿದ್ಯಾಲಯದ ಸಭಾಂಗಣದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಮತ್ತು ಸಾಮಾಜಿಕ ನ್ಯಾಯ ಆಯೋಗ ಬೆಳಗಾವಿ , ತಾಲೂಕು ಸೇವಾ ಸಮಿತಿ ಗೋಕಾಕ, ಗೋಕಾಕ ನ್ಯಾಯವಾದಿಗಳ ಸಂಘ ಮತ್ತು ಪಂಚಾಯತ್ ರಾಜ್ ಇಲಾಖೆ ಗೋಕಾಕ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ವಿಶ್ವ ಗ್ರಾಹಕರ ಹಕ್ಕಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತ ದೇಶ ಪ್ರಜಾಪ್ರಭುತ್ವ ದೇಶವಾಗಿದ್ದು, ಪತ್ರಿಯೊಬ್ಬರ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಕಾರ್ಯಾಂಗ , ಶಾಸಕಾಂಗ ಮತ್ತು ನ್ಯಾಯಾಂಗ ನಿರಂತರ ಕಾರ್ಯನಿರ್ವಹಿಸುತ್ತಿವೆ. ಕಾನೂನಿನಲ್ಲಿ ಅಜ್ಞಾನಕ್ಕೆ ಕ್ಷೇಮೆ ಇರುವುದಿಲ್ಲ ಆದ್ದರಿಂದ ಪ್ರತಿಯೊಬ್ಬರೂ ಇದನ್ನು ತಿಳಿದುಕೊಂಡು ಕಾನೂನನ್ನು ಗೌರವಿಸಬೇಕು. ಸಂವಿಧಾನದ ಪೀಠಿಕೆಯನ್ನು ನಾವು ಮನಸಾರೆ ಒದಿದರೆ ಕಾನೂನುನಿನ ಉದ್ದೇಶವನ್ನು ತಿಳಿದುಕೊಳ್ಳಲು ಸಾಧ್ಯ ಆ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸಬೇಕು ಎಂದು ಹೇಳಿದರು.
ಹಿರಿಯ ನ್ಯಾಯವಾದಿಗಳಾದ ಎಸ್.ಎಂ ಹತ್ತಿಕಟಗಿ, ಆರ್.ಎಚ್.ಇಟ್ನಾಳ, ಗೋಕಾಕ ಶಿಕ್ಷಣ ಸಂಸ್ಥೆಯ ಚೆರಮನ್ ವಿಶ್ವನಾಥ್ ಕಡಕೋಳ, ಮಹಾಂತೇಶ ತಾವಂಶಿ, ಶಾಮಾನಂದ ಪೂಜೇರಿ, ಸಂಗೀತಾ ಬನ್ನೂರ, ಮಂಗಳಾ ಜಕಾತಿ ಇದ್ದರು.