Breaking News

ಕೊಲೆ ಪ್ರಕರಣ ಭೇದಿಸಿದ ಘಟಪ್ರಭಾ ಪೋಲಿಸರು, ಮೂವರು ಆರೋಪಿಗಳ ಬಂಧನ!!

Spread the love

ಕೊಲೆ ಪ್ರಕರಣ ಭೇದಿಸಿದ ಘಟಪ್ರಭಾ ಪೋಲಿಸರು, ಮೂವರು ಆರೋಪಿಗಳ ಬಂಧನ!!

ರಾಜಾಪೂರ ಗ್ರಾಮದಲ್ಲಿ ನಡೆದ ಶಿವಾನಂದ ಬಸಪ್ಪಾ ಕಾಚಾಗೋಳ ಕೊಲೆ ಆರೋಪಿಗಳನ್ನು ಘಟಪ್ರಭಾ ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದರು.

 

ಯುವ ಭಾರತ ಸುದ್ದಿ, ಗೋಕಾಕ:  ಇದೇ   ಜೂನ್ 10 ರಂದು ರಾಜಾಪೂರ ಗ್ರಾಮದಲ್ಲಿ ನಡೆದ ಮಹಾಯುದ್ಧ ಯೂಟ್ಯೂಬ ಚಾನಲ್ ಸಂಪಾದಕ ಶಿವಾನಂದ ಬಸಪ್ಪಾ ಕಾಚಾಗೋಳ (27) ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಮೂವರು ಆರೋಪಿಗಳನ್ನು ಘಟಪ್ರಭಾ ಪೊಲೀಸರು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿತರಾದ ಜೋತೆಪ್ಪಾ ವಿಠ್ಠಲ ಮಗದುಮ್ (27) , ಬೀರಪ್ಪಾ ನಿಂಗಪ್ಪಾ ಬಾನಸಿ (27) , ವಸಂತ ಬಮ್ಮಪ್ಪಾ ಬಮ್ಮವ್ವಗೋಳ (27) ಮೂವರು ರಾಜಾಪೂರ ಗ್ರಾಮದ ನಿವಾಸಿಯಾಗಿದ್ದು, ಕೊಲೆಯಾದ ಶಿವಾನಂದನ ಪರಿಚಯಸ್ಥರಾಗಿದ್ದಾರೆ.
ಕೊಲೆಗೆ ನಿಖರವಾರದ ಕಾರಣ ತಿಳಿಯದ್ದರಿಂದ ವಿವಿದ ಆಯಾಮಗಳಲ್ಲಿ ತನಿಖೆ ಪ್ರಾರಂಭಿಸಿದ ಪೊಲೀಸರು ಸಂಶಯ ಆಧಾರದ ಮೇಲೆ ಕೆಲವರನ್ನು ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ್ದರು. ಅದರಲ್ಲಿ ಈಗ ಸಿಕ್ಕಿ ಬಿದ್ದಿರುವ ಆರೋಪಿಗಳಿಬ್ಬರೂ ಕೂಡಾ ಇದ್ದರು ಎನ್ನಲಾಗಿದೆ. ಆದರೆ ಪೊಲೀಸರಿಗೆ ತಪ್ಪು ಮಾಹಿತಿ ನೀಡಿ ಪರಾರಿಯಾಗಿದ್ದರು.
ಆದರೆ ಈ ಕೊಲೆ ಪ್ರಕರಣದ ರಹಸ್ಯವನ್ನು ಬೇದಿಸಿ ತೀರುತ್ತೇವೆಂದು ಪಣ ತೊಟ್ಟ ಸಿಪಿಐ ಶ್ರೀಶೈಲ ಬ್ಯಾಕೂಡ ಅವರು, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಘಟಪ್ರಭಾ ಪಿಎಸ್‌ಐ ಆರ್.ಎಸ್.ಖೋತ ಅವರ ನೇತೃತ್ವವದಲ್ಲಿ ಒಂದು ತಂಡ ರಚಿಸಿ ಆರೋಪಿಗಳ ಪತ್ತೆಗಾಗಿ ನಿರಂತರ ಶೋಧ ನಡೆಸಿದ್ದರು. ಕೊನೆಗೂ ಕೊಲೆ ಪ್ರಕರಣವನ್ನು ಭೇದಿಸಿದ ಪೋಲಿಸರು ಎಲ್ಲ ಆರೋಪಿಗಳನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಲೆಗೆ ಬೇರೆ ಬೇರೆ ಕಾರಣ: ಯೂಟ್ಯೂಬ ಚಾನಲ್ ಮಾಡಿಕೊಂಡಿದ್ದ ಶಿವಾನಂದ ಬಹಳಷ್ಟು ಜನರೊಂದಿಗೆ ಹಣದ ವ್ಯವಹಾರಗಳನ್ನು ಇಟ್ಟುಕೊಂಡಿದ್ದ, ಪೊಲೀಸರಿಂದ ಬಂಧನಕೊಳಗಾಗಿರುವ ಮೂವರು ಆರೋಪಿಗಳು ವಿಚಾರಣೆಯಲ್ಲಿ ಕೊಲೆ ಮಾಡಿರುವುದಕ್ಕೆ ಬೇರೆ ಬೇರೆ ಕಾರಣಗಳು ಹೇಳಿದ್ದಾರೆಂದು ತಿಳಿದು ಬಂದಿದೆ.
ಈ ಮೂವರು ಆರೋಪಿಗಳು ಕೊಲೆಯಾದ ಶಿವಾನಂದನ ಪರಿಚಯಸ್ಥರಾಗಿದ್ದು, ವಸಂತನ ಜೊತೆ ಅವನು ಹಣದ ವ್ಯವಹಾರ ಜೊತೆಗೆ ಅವನ ಹೆಸರಿನಲ್ಲಿ ಒಂದು ಹೊಸ ಕಾರ ಖರೀದಿಸಿ ತಾನು ಉಪಯೋಗಿಸುತ್ತಿದ್ದ ಆದರೆ ಅದಕ್ಕೆ ಇನ್ಸುರನ್ಸ್ ಮುಕ್ತಾಯವಾದರೂ ತುಂಬದ ಕಾರಣ ಅವನ ಜೊತೆಗೆ ವೈಶಮ್ಯ ಬೆಳೆಸಿಕೊಂಡಿದ್ದ. ಇನ್ನೂಬ್ಬ ಆರೋಪಿ ಭೀಮಪ್ಪನ ತಂಗಿಯ ಜೊತೆಗೆ ಶಿವಾನಂದ ಮದವೆಯಾಗುವನಿದ್ದ ಆದರೆ ಅದಕ್ಕೂ ಮುನ್ನ ಬೇರೆ ಹುಡಗಿಯ ಜೊತೆ ವಿವಾಹವಾಗಲು ಸಂಚು ರೂಪಿಸಿದ ಎಂದು ತಿಳಿದು ಬಂದಿದೆ. ಹಾಗೂ ಇನ್ನೂಬ್ಬ ಆರೋಪಿಯಾದ ಜೊತೆಪ್ಪ ಅವನ ವೈಯಕ್ತಿಕ ವಿಷಯಕ್ಕೆ ತಲೆಹಾಕಿ ಅವನಿಗೆ ಬ್ಲ್ಯಾಕ್ ಮೇಲ್ ಮಾಡಿ ಹಣಕ್ಕೆ ಡಿಮಾಂಡ್ ಇಟ್ಟಿದ್ದ ಕಾರಣ ಅವರಿಬ್ಬರ ಮದ್ಯೆ ದ್ವೇಷ ಹುಟ್ಟಿಕೊಂಡಿತ್ತು ಎನ್ನಲಾಗುತ್ತಿದೆ.
ಶಿವಾನಂದನಿಂದ ಒಂದಾನೊಂದು ಕಾರಣಕ್ಕೆ ನೊಂದಿರುವ ಈ ಮೂವರು ಸೇರಿಕೊಂಡು ಸಂಚು ರೂಪಿಸಿ ಕಳೆದ ಜೂ.೧೦ರಂದು ರಾತ್ರಿ 10.15 ಗಂಟೆ ಸುಮಾರಿಗೆ ಅವನ ಮನೆಯ ಸಮೀಪದಲ್ಲಯೇ ಕಬ್ಬಿನದ ರಾಡ್ ಮತ್ತು ಬಡಿಗೆಗಳಿಂದ ಬಡೆದು ಕೊಲೆ ಮಾಡಿ ಪರಾರಿಯಾಗಿದ್ದರು.
ನಿಗೂಡವಾದ ಈ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಯಶ್ವಿಯಾದ ಘಟಪ್ರಭಾ ಪೊಲೀಸ ಠಾಣೆ ಸಿಪಿಐ ಶ್ರೀಶೈಲ ಬ್ಯಾಕೂಡ, ಪಿಎಸ್‌ಐ ಆರ್.ಎಸ್.ಖೋತ, ಸಿಬ್ಬಂದಿಗಳಾದ ಬಿ.ಎಸ್.ನಾಯಿಕ, ಎಮ್.ಬಿ.ಕರಣಿ, ಕೆ.ಆರ್.ಬಬಲೇಶ್ವರ, ಆರ್.ಎಮ್.ಪಡತಾರೆ, ಆರ್.ಕೆ.ದುಮಾಳೆ, ಎಂ.ಬಿ.ಗೋಣಿ ಅವರ ಕಾರ್ಯಕ್ಕೆ ಬೆಳಗಾವಿ ಜಿಲ್ಲಾ ಪೊಲೀಸ ಅಧೀಕ್ಷಕರು ಪ್ರಶಂಸೆ ಮಾಡಿದ್ದಾರೆ.


Spread the love

About Yuva Bharatha

Check Also

ಪತ್ರಿಕೋದ್ಯಮದ ಬೆಳವಣಿಗೆಯಲ್ಲಿ ಪತ್ರಿಕಾ ವಿತರಕರ ಪಾತ್ರ ಬಹಳ ದೊಡ್ಡದು.- ರಮೇಶ ಜಾರಕಿಹೊಳಿ.!

Spread the loveಪತ್ರಿಕೋದ್ಯಮದ ಬೆಳವಣಿಗೆಯಲ್ಲಿ ಪತ್ರಿಕಾ ವಿತರಕರ ಪಾತ್ರ ಬಹಳ ದೊಡ್ಡದು.- ರಮೇಶ ಜಾರಕಿಹೊಳಿ.! ಗೋಕಾಕ: ಪತ್ರಿಕೆಗಳನ್ನು ಮನೆಗಳಿಗೆ ಸರಿಯಾದ …

Leave a Reply

Your email address will not be published. Required fields are marked *

1 × five =