ಎಸ.ಎನ್.ಸಿ.ಯು ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದ ಶಾಸಕ ರಮೇಶ ಜಾರಕಿಹೊಳಿ.!
Yuva Bharatha
August 25, 2022
Uncategorized
358 Views
ಎಸ.ಎನ್.ಸಿ.ಯು ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದ ಶಾಸಕ ರಮೇಶ ಜಾರಕಿಹೊಳಿ.!
ಯುವ ಭಾರತ ಸುದ್ದಿ ಗೋಕಾಕ: ಇಲ್ಲಿನ ರಾಕೆಟ್ ಇಂಡಿಯಾ ಪ್ರೈ.ಲಿ ಕಾರಖಾನೆ ಅವರು ಸಾರ್ವಜನಿಕ ಆಸ್ಪತ್ರೆಗೆ ಪ್ರತಿ ಹಂತದಲ್ಲಿ ಸಹಾಯಕ, ಸಹಕಾರ ನೀಡುತ್ತಿದ್ದಾರೆ ಎಂದು ಮುಖ್ಯ ವೈದ್ಯಾಧಿಕಾರಿ ಡಾ.ರವೀಂದ್ರ ಅಂಟಿನ ಹೇಳಿದರು.
ಗುರುವಾರದಂದು ನಗರದ ಸರಕಾರಿ ಆಸ್ಪತ್ರೆಲ್ಲಿ ರಾಕೆಟ್ ಇಂಡಿಯಾ ಪ್ರೈ.ಲಿ ಕಂಪನಿ ಅವರು ನೀಡಿದ ೪.೮ ಲಕ್ಷ ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ೪.೫ ಲಕ್ಷ ವೆಚ್ಚದ ಎಸ.ಎನ್.ಸಿ.ಯು ಉಪಕರಣಗಳನ್ನು ಸ್ವೀಕರಿಸಿ ಅವರು ಮಾತನಾಡಿದರು.
ಶಾಸಕ ರಮೇಶ ಜಾರಕಿಹೊಳಿ ಅವರು ಸಲಹೆಯಂತೆ ರಾಕೆಟ್ ಇಂಡಿಯಾ ಕಂಪನಿ ಅವರು ಕೊವಿಡ್ ಸಂದರ್ಭದಲ್ಲಿಯೂ ಸಹ ಕಂಪನಿ ವತಿಯಿಂದ ಸಾಕಷ್ಟು ಸಹಕಾರ ನೀಡಿ ಸಾರ್ವಜನಿಕ ಆರೋಗ್ಯವನ್ನು ಕಾಪಾಡುವಲ್ಲಿ ಸಹಕರಿಸಿದ್ದಾರೆ.
ಶಾಸಕ ರಮೇಶ ಜಾರಕಿಹೊಳಿ ಅವರು ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಸಾರ್ವಜನಿಕ ಆಸ್ಪತ್ರೆಗೆ ಸರಕಾರದಿಂದ ಎಲ್ಲಾ ಸೌಲಭ್ಯೆಳ ಜೊತೆಗೆ ಅತ್ಯಾಧುನಿಕ ಸೌಕರ್ಯಗಳನ್ನು ನೀಡಿ ರಾಜ್ಯದಲ್ಲಿ ನಂ-೧ ಆಸ್ಪತ್ರೆಯನ್ನಾಗಿಸಿದ್ದಾರೆ. ಗೋಕಾಕ ತಾಲೂಕಿನಲ್ಲಿ ೧೨ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಹ ಒಳ್ಳೆಯ ಕಾರ್ಯಮಾಡಿ ಗ್ರಾಮೀಣ ಮಟ್ಟದ ಸಾರ್ವಜನಿಕರಿಗೆ ಒಳ್ಳೆಯ ಆರೋಗ್ಯ ಸೇವೆ ನೀಡಿವಲ್ಲಿ ಶ್ರಮಿಸುತ್ತಿವೆ.
ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ಆರೋಗ್ಯವಂತರಾಗಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಸುಸಜ್ಜಿತ ಎನ್.ಎಸ್.ಯು.ಸಿ ಘಟಕವನ್ನು ಶಾಸಕ ರಮೇಶ ಜಾರಕಿಹೊಳಿ ಅವರು ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ರಾಕೆಟ್ ಕಂಪನಿಯ ರಾಜು ಶೇಖರ, ಪ್ರಕಾಶ ಅವಟೆ, ದುಂಡೇಶ ವಾಳವಿ,ಜಿಪಂ ಮಾಜಿ ಸದಸ್ಯ ಟಿ.ಆರ್.ಕಾಗಲ್, ನಗರಸಭೆ ಅಧ್ಯಕ್ಷ ಜಯಾನಂದ ಹುಣ್ಣಚ್ಯಾಳಿ, ಟಿಎಚ್.ಓ ಡಾ.ಎಂ.ಎಸ್.ಕೊಪ್ಪದ ಉಪಸ್ಥಿತರಿದ್ದರು.