Breaking News

ಹುಕ್ಕೇರಿ ಹತ್ತಿರ  ರಸ್ತೆ ಅಪಘಾತದಲ್ಲಿ  ಸ್ಥಳದಲ್ಲೇ ತಾಯಿ ಮಗು ಸಾವು!!

Spread the love

ಹುಕ್ಕೇರಿ ಹತ್ತಿರ  ರಸ್ತೆ ಅಪಘಾತದಲ್ಲಿ  ಸ್ಥಳದಲ್ಲೇ ತಾಯಿ ಮಗು ಸಾವು!!

ಯುವ ಭಾರತ ಸುದ್ದಿ ಹುಕ್ಕೇರಿ : ಹುಕ್ಕೇರಿ ತಾಲೂಕಿನ ರಕ್ಷಿ ಕ್ರಾಸ್ ಸಮೀಪ ಒಂದು ಬೈಕ್‌ ಹಾಗೂ ಮೂರು ಕಾರುಗಳ ಮಧ್ಯೆ ಭೀಕರ ಅಪಘಾತ ಸಂಭವಿಸಿ ತಾಯಿ, ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಬೈಲಹೊಂಗಲ ತಾಲ್ಲೂಕಿನ ಮಲ್ಲಾಪುರ ನಿವಾಸಿ ಭಾರತಿ ಅನಿಲ್ ಪೂಜೇರಿ (28), ವೇದಾಂತ ಅನಿಲ್ ಪೂಜೇರಿ (6) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.

ಮೃತಪಟ್ಟ ಭಾರತಿ ಅವರ ಪತಿ, ಅನಿಲ್ ಶಂಕರಯ್ಯ ಪೂಜೇರಿ (35), ಗೋಕಾಕ ತಾಲ್ಲೂಕಿನ ಮರಡಿಮಠ ಗ್ರಾಮದ ನಿವಾಸಿ ಕಿರಣ ಲೋಕಯ್ಯ ಸಾಲಿಮಠ (28) ಎಂಬುವವರು ಗಾಯಗೊಂಡಿದ್ದಾರೆ ಚಿಕಿತ್ಸೆಗೆ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.ಅಪಘಾತದ ರಭಸಕ್ಕೆ ಮೂರು ಕಾರುಗಳು
ನಜ್ಜುಗುಜ್ಜಾಗಿವೆ. ಬೈಕ್ ಎರಡು ತುಂಡಾಗಿದೆ. ಸ್ಥಳಕ್ಕೆ ಪೋಲಿಸ್‌ ಇನ್ಸ್‌ಪೆಕ್ಟರ್‌ ಮಹಮ್ಮದ್ ರಫಿಕ್ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Yuva Bharatha

Check Also

11ಕೆ.ವ್ಹಿ ಭೂಗತ ವಿದ್ಯುತ್ ವಿತರಣಾ ಮಾರ್ಗ ಕಾಮಗಾರಿಗೆ ಚಾಲನೆ-ಶಾಸಕ ರಮೇಶ ಜಾರಕಿಹೊಳಿ!

Spread the love11ಕೆ.ವ್ಹಿ ಭೂಗತ ವಿದ್ಯುತ್ ವಿತರಣಾ ಮಾರ್ಗ ಕಾಮಗಾರಿಗೆ ಚಾಲನೆ-ಶಾಸಕ ರಮೇಶ ಜಾರಕಿಹೊಳಿ! ಗೋಕಾಕ: ನಗರದ ಡಾರ‍್ಸ್ ಕಾಲನಿ …

Leave a Reply

Your email address will not be published. Required fields are marked *

19 − eight =