ಹಸ್ತರೇಖೆ ಬದಲಾಯಿಸಿದರೆ, ಹಣೆಬರಹ ಬದಲಾಗದು-ಡಾ ಸೋನಾಲಿ ವ್ಯಂಗ್ಯ
ಯುವ ಭಾರತ ಸುದ್ದಿ ಬೆಳಗಾವಿ : ರಾಜ್ಯದ ಜನ ಅಧಿಕಾರ ಕೊಟ್ಟಾಗ ಜನರ ಬಗ್ಗೆ ಕಾಳಜಿ ವಹಿಸದ ಕಾಂಗ್ರೆಸ್ ಪಕ್ಷ ಈಗ ಹಸ್ತ ರೇಖೆಯನ್ನು ಬದಲಾಯಿಸಿ ಹಾಥ್ ಸೇ ಹಾಥ್ ಜೋಡೋ ಎನ್ನುವ ಅಭಿಯಾನ ಆರಂಭಿಸಿದ್ದು ಹಾಸ್ಯಾಸ್ಪದವಾಗಿದ್ದು ಈ ದೇಶದ ಜನ ಕಾಂಗ್ರೆಸ್ಸಿಗೆ 70 ವರ್ಷ ಅಧಿಕಾರ ಕೊಟ್ಟಾಗ ಇವರಿಂದ ಜನರ ಅದೃಷ್ಟ ಬದಲಾಯಿಸಲು ಆಗಿಲ್ಲ.ಈಗ ಹಸ್ತರೇಖೆ ಬದಲಾಯಿಸಿದ ಮಾತ್ರಕ್ಕೆ ಕಾಂಗ್ರೆಸ್ಸಿನ ಹಣೆಬರಹ ಬದಲಾಗುವದಿಲ್ಲ ಎಂದು ಖಾನಾಪೂರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಡಾ.ಸೋನಾಲಿ ಸರ್ನೋಬತ್ ಲೇವಡಿ ಮಾಡಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಖಾನಾಪೂರ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಗಮನ ಹರಿಸಿಲ್ಲ,ಅತೀವೃಷ್ಟಿಯಿಂದ ತಾಲ್ಲೂಕಿನ ಜನ ಸಂಕಷ್ಟದಲ್ಲಿದ್ದಾಗ ಸ್ಪಂದಿಸದ ಕಾಂಗ್ರೆಸ್ ಈಗ ಹಾಥ್ ಸೇ ಹಾಥ್ ಜೋಡೋ ಅಭಿಯಾನ ಆರಂಭಿಸಿದೆ,ಆದ್ರೆ ಖಾನಾಪೂರದಲ್ಲಿ ಕಾಂಗ್ರೆಸ್ ಶಾಸಕಿ ಇದ್ದರೂ ಸಹ ಬಿಜೆಪಿ ಸರ್ಕಾರ ಖಾನಾಪೂರ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದೆ,ಬಿಜೆಪಿ ಸರ್ಕಾರದ ಅವಧಿಯಲ್ಲೇ ಖಾನಾಪೂರದ ಬಸ್ ನಿಲ್ಧಾಣದ ನಿರ್ಮಾಣ, ಸೇರಿದಂತೆ ಹಲವಾರು ಕಾಮಗಾರಿಗಳಿಗೆ ಚಾಲನೆ ನೀಡಿದ್ದು,ಖಾನಾಪೂರ ತಾಲ್ಲೂಕಿನ ಜನ ಈಗ ಬಿಜೆಪಿ ಸರ್ಕಾರದ ಕೊಡುಗೆಗಳನ್ನು ಸ್ಮರಿಸುತ್ತಿದ್ದಾರೆ,ಎಂದು ಡಾ.ಸೋನಾಲಿ ಸರ್ನೋಬತ್ ಹೇಳಿದ್ದಾರೆ.
ಖಾನಾಪೂರ ಶಾಸಕಿ ಅಂಜಲಿ ನಿಂಬಾಳ್ಕರ್ ಬಿಜೆಪಿ ಸರ್ಕಾರದಿಂದ ಹಲವಾರು ಯೋಜನೆಗಳನ್ನು ಮಂಜೂರು ಮಾಡಿಸಿಕೊಂಡು,ಈಗ ಬಿಜೆಪಿ ವಿರುದ್ಧವೇ ಟೀಕೆ ಮಾಡುತ್ತಿದ್ದು,ಬಿಜೆಪಿ ಸರ್ಕಾರವಿದ್ದಾಗ ಖಾನಾಪೂರ ಕ್ಷೇತ್ರಕ್ಕೆ ಎಷ್ಟು ಅನುದಾನ ಬಿಡುಗಡೆ ಮಾಡಿದೆ,ಕಾಂಗ್ರೆಸ್ ಸರ್ಕಾರವಿದ್ದಾಗ ಎಷ್ಟು ಅನುದಾನ ಬಿಡುಗಡೆ ಆಗಿತ್ತು ಎನ್ನುವ ಕುರಿತು ದಾಖಲೆ ಸಮೇತ ತೋರಿಸಲಿ,ಆವಾಗ ಕಾಂಗ್ರೆಸ್ಸಿನ ಅಸಲಿ ಮುಖವಾಡ ಗೊತ್ತಾಗುತ್ತದೆ, ಶಾಸಕಿ ಅಂಜಲಿ ಟೀಕೆ, ಜನರ ದಿಕ್ಕು ತಪ್ಪಿಸಲು ಸಾಧ್ಯವಿಲ್ಲ ಎಂದು ಡಾ.ಸೋನಾಲಿ ಸವಾಲು ಹಾಕಿದ್ದಾರೆ.
ಬ್ರಾಹ್ಮಣ ಸಮಾಜದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಕುಮಾರಸ್ವಾಮಿ ಜನರ ದಿಕ್ಕು ತಪ್ಪಿಸಲು ಮುಜುಗರ ದಿಂದ ಬಚಾವ್ ಆಗಲು ಖಾನಾಪೂರ ಕ್ಷೇತ್ರದಲ್ಲಿ ಪಂಚರತ್ನ ಯಾತ್ರೆ ನಡೆಸಿದ್ದಾರೆ,ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕಳಸಾ ಬಂಡೂರಿ,ಮಹಾದಾಯಿ ಕುರಿತು ಯಾವುದೇ ಕ್ರಮ ಕೈಗೊಳ್ಳಲಿಲ್ಲ,ಈಗ ಖಾನಾಪೂರ ತಾಲ್ಲೂಕಿನ ಅಭಿವೃದ್ಧಿ ಬಗ್ಗೆ ಜನರಿಗೆ ಅಂಗೈಯಲ್ಲಿ ಅರಮನೆ ತೋರಿಸುತ್ತಿದ್ದು,ಕಾಂಗ್ರೆಸ್ ಮತ್ತು ಜೆಡಿಎಸ್ ಅಧಿಕಾರಕ್ಕೆ ಬರಲು ಸುಳ್ಳಿನ ರೀಲು ಬಿಡುತ್ತಿದ್ದು,ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಡಾ.ಸೋನಾಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.