Breaking News

ಅಭೂತಪೂರ್ವ ಗೆಲುವಿಗೆ ಸಾಹುಕಾರ್ ರಣತಂತ್ರ !

Spread the love

ಅಭೂತ ಪೂರ್ವ ಗೆಲುವಿಗೆ ಸಾಹುಕಾರ್ ರಣತಂತ್ರ !

ಸತೀಶ್ ಮನಿಕೇರಿ

ಯುವ ಭಾರತ ವಿಶೇಷ

ಗೋಕಾಕ : ವಿಧಾನಸಭಾ ಚುನಾವಣೆಯಲ್ಲಿ ಅಭೂತ ಪೂರ್ವ ಗೆಲುವು ಸಾಧಿಸಲು ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರು ಇದೀಗ ರಣತಂತ್ರ ಹೆಣೆದಿದ್ದಾರೆ. ಅದರಲ್ಲೂ ಕಳೆದ ವಿಧಾನಸಭಾ ಉಪಚುನಾವಣೆಯಲ್ಲಿ ಅವರು ದೊಡ್ಡ ಅಂತರದಿಂದ ಗೆದ್ದಿರಲಿಲ್ಲ. ಹೀಗಾಗಿ ಈ ಬಾರಿ

ಚುನಾವಣೆಯನ್ನು ಅವರು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ. ಹಿಂದೆಂದಿಗಿಂತಲೂ ಐತಿಹಾಸಿಕ ಹಾಗೂ ಅಭೂತಪೂರ್ವ ಎನ್ನುವಂತೆ ಜಯಗಳಿಸಲು ತಯಾರಿ ನಡೆಸಿದ್ದಾರೆ.ವಿಧಾನಸಭಾ ಚುನಾವಣೆ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯಲಿದೆ. ಆದ್ದರಿಂದ ಚುನಾವಣೆಗೆ ಸಾಕಷ್ಟು ಮೊದಲೇ ಅವರು ಚುನಾವಣಾ ರಣರಂಗಕ್ಕೆ ಧುಮುಕಿದ್ದಾರೆ. ಬಿಜೆಪಿ ವತಿಯಿಂದ ಹತ್ತು ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿರುವ ಸಾಹುಕಾರ್ ಈಗಾಗಲೇ ಗೋಕಾಕ ವಿಧಾನಸಭಾ ಕ್ಷೇತ್ರದ್ಯಾಂತ ಪಕ್ಷದ ಯೋಜನೆಗಳ ಜೊತೆಗೆ ತಮ್ಮ ವರ್ಚಸ್ವಿ ನಾಯಕತ್ವದ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳನ್ನು ಮತದಾರರಿಗೆ ವಿವರಿಸುತ್ತಿದ್ದಾರೆ.

ಬಿಜೆಪಿಯ ವಿಜಯ ಸಂಕಲ್ಪ ಅಭಿಯಾನ, ಮನೆ ಮನೆಗೆ ಸ್ಟಿಕರ್ ಆಂಟಿಸುವುದು, ಗೋಡೆ ಬರಹ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಇಡೀ ಮತಕ್ಷೇತ್ರದಾದ್ಯಂತ ಸಾಹುಕಾರ್ ತಮ್ಮದೇ ಆದ ವಿಶೇಷ ಕಾರ್ಯಕರ್ತರ ಪಡೆ ಹೊಂದಿದ್ದಾರೆ. ಅತ್ಯಂತ ನಿಸ್ವಾರ್ಥವಾಗಿ ಸಾಹುಕಾರ್ ಗೆಲುವಿಗೆ ಶ್ರಮಿಸುವ ಈ ತಂಡ ಈ ಬಾರಿ ಅವರ ಭರ್ಜರಿ ಗೆಲುವಿಗೆ ಟೊಂಕಕಟ್ಟಿ ನಿಂತಿದೆ. ಕಳೆದ ನಾಲ್ಕು ದಶಕಗಳಿಂದ ಅವರು ಗೋಕಾಕನಲ್ಲಿ ತಮ್ಮದೇ ಆದ ಯೋಜನೆಗಳು ಹಾಗೂ ಅಭಿವೃದ್ಧಿಯ ನಾಗಲೋಟದಿಂದ ರಾಜ್ಯದಲ್ಲೇ ಅತ್ಯಂತ ಜನಪ್ರಿಯ ಜನನಾಯಕರಾಗಿ ಹೊರಹೊಮ್ಮಿದ್ದಾರೆ. ಆದ ಕಾರಣ ಅವರ ಗೆಲುವು ನಿರಾಯಾಸ. ಆದರೆ, ಸುಲಭ ಅಂತರದ ಗೆಲುವು ತಮ್ಮದಾಗಿರಬಾರದು ಎಂದು ಸಾಕಷ್ಟು ಮೊದಲೇ ನಿರ್ಧರಿಸಿರುವ ಸಾಹುಕಾರ್ ಈ ಬಾರಿ ದಾಖಲೆ ಅಂತರದಿಂದ ಗೆಲುವಿಗೆ ಪಣತೊಟ್ಟಿದ್ದಾರೆ.

ರಮೇಶ ಜಾರಕಿಹೊಳಿ ಅವರು ಬಿಜೆಪಿ ಸೇರಿದ ಈ ಮೂರು ವರ್ಷದ ಅವಧಿಯಲ್ಲಿ ಇಡೀ ಗೋಕಾಕ ಮತಕ್ಷೇತ್ರ ಕಮಲ ಪಕ್ಷದ ಭದ್ರಕೋಟೆಯಾಗಿ ಪರಿವರ್ತನೆಗೊಂಡಿದೆ. ಮನೆ ಮನೆ ಹಾಗೂ ಗಲ್ಲಿ ಗಲ್ಲಿಗಳಲ್ಲಿ ಕಮಲದ ಬಿರುಗಾಳಿಯ ಆರ್ಭಟ ಎದ್ದು ಕಾಣುತ್ತಿದೆ. ಇದು ಎದುರಾಳಿಗಳಿಗೆ ನಡುಕ ಹುಟ್ಟಿಸಿದೆ. ಬಿಜೆಪಿಯಿಂದ ರಮೇಶ ಜಾರಕಿಹೊಳಿ ಅವರೇ ಸ್ಪರ್ಧಿಸುವುದು ಖಚಿತವಾಗಿದ್ದು ಅವರನ್ನು ಬಿಟ್ಟರೆ ಬೇರೆ ಅಭ್ಯರ್ಥಿಗಳ ಹೆಸರು ಕೇಳಿ ಬರುತ್ತಿಲ್ಲ. ಎದುರಾಳಿ ಅಭ್ಯರ್ಥಿಗಳ ಕೊರತೆ ಕಂಡುಬರುತ್ತದೆ. ಯಾವ ಅಭ್ಯರ್ಥಿಯೂ ಸಾಹುಕಾರ್ ವಿರುದ್ಧ ಸ್ಪರ್ಧಿಸಿದರೂ ಅವರಿಗೆ ಸೋಲು ಕಟ್ಟಿಟ್ಟ ಬುತ್ತಿ ಎನ್ನುವುದು ಈ ಹಿಂದಿನ ಚುನಾವಣೆಗಳಲ್ಲೂ ಸಾಕಷ್ಟು ಸಲ ಜಗಜ್ಜಾಹೀರಾಗಿದೆ. ರಮೇಶ ಜಾರಕಿಹೊಳಿ ಅವರು ಮತ್ತೊಮ್ಮೆ ಗೆದ್ದು ಗೋಕಾಕನಲ್ಲಿ ತಮ್ಮ ಪಾರುಪಥ್ಯ ಸಾಧಿಸುತ್ತಾರೆ, ಆದರೆ, ಆ ಗೆಲುವು ರಾಜ್ಯದಲ್ಲೇ ಅತ್ಯಂತ ಗಮನಸೆಳೆಯುವ ಗೆಲುವಾಗಬೇಕು ಎನ್ನುವುದು ಒಟ್ಟಾರೆ ಕ್ಷೇತ್ರಾದ್ಯಂತ ಕೇಳಿ ಬರುತ್ತಿರುವ ಸಾಹುಕಾರ್ ಅಭಿಮಾನಿಗಳ ಮನದಾಳದ ಕನಸಾಗಿದೆ.


Spread the love

About Yuva Bharatha

Check Also

ವಿಕಲತೆ ಹೊಂದಿರುವ ಅಂಗವಿಕಲ ಮಕ್ಕಳನ್ನು ಸಮಾನತೆ ಹಾಗೂ ಮಾನವಿಯತೆಯಿಂದ ನೋಡಿ-ಸರ್ವೋತ್ತಮ ಜಾರಕಿಹೊಳಿ.!

Spread the loveವಿಕಲತೆ ಹೊಂದಿರುವ ಅಂಗವಿಕಲ ಮಕ್ಕಳನ್ನು ಸಮಾನತೆ ಹಾಗೂ ಮಾನವಿಯತೆಯಿಂದ ನೋಡಿ-ಸರ್ವೋತ್ತಮ ಜಾರಕಿಹೊಳಿ.! ಗೋಕಾಕ: ವಿಕಲತೆ ಹೊಂದಿರುವ ಅಂಗವಿಕಲ …

Leave a Reply

Your email address will not be published. Required fields are marked *

fourteen − thirteen =