Breaking News

ರಾಜ್ಯದಲ್ಲಿ ಉಪ್ಪಾರ ಸಮಾಜವನ್ನು ಪರಿಶಿಷ್ಠ ಜಾತಿ ಅಥವಾ ಪರಿಶಿಷ್ಠ ಪಂಗಡಕ್ಕೆ ಸೇರಿಸಬೇಕೆಂದು ಒತ್ತಾಯಿಸಿ ಉಪ್ಪಾರ ಸಮಾಜ ನಡೆಸುತ್ತಿರುವ ಹೋರಾಟದ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು

Spread the love

ರಾಜ್ಯದಲ್ಲಿ ಉಪ್ಪಾರ ಸಮಾಜವನ್ನು ಪರಿಶಿಷ್ಠ ಜಾತಿ ಅಥವಾ ಪರಿಶಿಷ್ಠ ಪಂಗಡಕ್ಕೆ ಸೇರಿಸಬೇಕೆಂದು ಒತ್ತಾಯಿಸಿ ಉಪ್ಪಾರ ಸಮಾಜ ನಡೆಸುತ್ತಿರುವ ಹೋರಾಟದ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ಗುರುವಾರ ಸೆ.13 ರಂದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ರಾಜ್ಯದಾದ್ಯಂತ ಸುಮಾರು 52 ಲಕ್ಷಕ್ಕೂ ಅಧಿಕ ಜನ ಉಪ್ಪಾರ ಜನಾಂಗದವರಿದ್ದು, ಇವರೆಲ್ಲ ಹಿಂದುಳಿದ ವರ್ಗದವರಾಗಿರುತ್ತಾರೆÀ. ಭೂಮಂಡಲಕ್ಕೆ ಗಂಗೆಯನ್ನು ಹರಿಸಿ ತಂದಿರುವ ಭಗೀರಥ ಮಹರ್ಷಿಗಳ ವಾರಸುದಾರರಾಗಿದ್ದಾರೆ. ಆದಿಕಾಲದಿಂದಲೂ ಉಪ್ಪು ತಯಾರಿಸುವ ವೃತ್ತಿಯಲ್ಲಿ ಇದ್ದು ಕಾಲಕ್ರಮೇಣ ಕಟ್ಟಡಗಳ ನಿರ್ಮಾಣದಲ್ಲಿ ವಿಶೇಷ ಪಾತ್ರ ವಹಿಸಿರುತ್ತಾರೆ. ಉಪ್ಪಾರ ಜನಾಂಗವನ್ನು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಠ ಪಂಗಡಕ್ಕೆ ಸೇರಿಸಲು ಸಮಾಜದ ಜನತೆ ಒತ್ತಾಯಿಸುತ್ತಿದ್ದು ಅವರ ಬೇಡಿಕೆಯನ್ನು ಸಹಾನೂಭೂತಿಯಿಂದ ಪರಿಶೀಲಿಸಿ ಅಗತ್ಯಕ್ರಮ ಕೈಗೊಳ್ಳಲು ವಿನಂತಿಸಲಾಗಿದೆ ಎಂದು ಸಂಸದ ಈರಣ್ಣ ಕಡಾಡಿ ತಿಳಿಸಿದರು.

ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಅಭಿವೃದ್ದಿ ಹೊಂದಲು ಈಗಾಗಲೇ ಹಿಂದುಳಿದ ಆಯೋಗಳಾದಂತಹ ನ್ಯಾ. ಹಾವನೂರ, ನ್ಯಾ. ವೆಂಕಟಸ್ವಾಮಿ ಹಾಗೂ ನ್ಯಾ, ಚಿನ್ನಪ್ಪ ರೆಡ್ಡಿ ಆಯೋಗಗಳು ವರದಿ ನೀಡಿ ಪರಿಶಿಷ್ಠ ಜಾತಿ ಅಥವಾ ಪರಿಶಿಷ್ಠ ಪಂಗಡಗಳ ರೀತಿಯಲ್ಲಿ ಹಿಂದುಳಿದಿರುವ ಉಪ್ಪಾರ ಸಮಾಜವನ್ನು ಮುಖ್ಯವಾಹಿನಿಗೆ ತರುವಂತೆ ವರದಿ ಸಲ್ಲಿಸಿವೆ. ಈ ಎಲ್ಲ ವದರಿಗಳ ಆಧಾರದ ಮೇಲೆ ಅಗತ್ಯಕ್ರಮ ಕೈಗೊಳ್ಳಬೇಕಾಗಿ ಸಂಸದ ಈರಣ್ಣ ಕಡಾಡಿ ಅವರು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ.


Spread the love

About Yuva Bharatha

Check Also

೭ನೇ ಬಾರಿಗೆ ಆಯ್ಕೆ ಮಾಡಿ ತಮ್ಮ ಸೇವೆ ಮಾಡಲು ಸಹಕರಿಸಿದ ಗೋಕಾಕ ಮತಕ್ಷೇತ್ರದ ಜನತೆಗೆ ನಾವು ಕೃತಜ್ಞರಾಗಿದ್ದೇವೆ-ಯುವ ಧುರೀಣ ಅಮರನಾಥ ಜಾರಕಿಹೊಳಿ.!

Spread the love೭ನೇ ಬಾರಿಗೆ ಆಯ್ಕೆ ಮಾಡಿ ತಮ್ಮ ಸೇವೆ ಮಾಡಲು ಸಹಕರಿಸಿದ ಗೋಕಾಕ ಮತಕ್ಷೇತ್ರದ ಜನತೆಗೆ ನಾವು ಕೃತಜ್ಞರಾಗಿದ್ದೇವೆ-ಯುವ …

Leave a Reply

Your email address will not be published. Required fields are marked *

eight + 4 =